ಆದಿತ್ ನವೀನ್ ನಿರ್ದೇಶನದ 'ಬ್ರೇಕ್ ಫೈಲ್ಯೂರ್' ಡಿಸೆಂಬರ್ 10 ರಂದು ರಿಲೀಸ್
ಡಿಸೆಂಬರ್ 10 ರಂದು ತೆರೆ ಕಾಣುತ್ತಿರುವ ಸಿನಿಮಾಗಳ ಪಟ್ಟಿಯಲ್ಲಿ ಆದಿತ್ ನವೀನ್ ನಿರ್ದೇಶನದ ಚೊಚ್ಚಲ ಸಿನಿಮಾ ಬ್ರೇಕ್ ಫೆಲ್ಯೂರ್ ಕೂಡ ಸೇರಿದೆ.

ಡಿಸೆಂಬರ್ 10 ರಂದು ತೆರೆ ಕಾಣುತ್ತಿರುವ ಸಿನಿಮಾಗಳ ಪಟ್ಟಿಯಲ್ಲಿ ಆದಿತ್ ನವೀನ್ ನಿರ್ದೇಶನದ ಚೊಚ್ಚಲ ಸಿನಿಮಾ ಬ್ರೇಕ್ ಫೆಲ್ಯೂರ್ ಕೂಡ ಸೇರಿದೆ.
ಈ ಹಿಂದೆ ಒಂದೆರಡು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಆದಿತ್ ನವೀನ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ.
ಕಾಲೇಜು ಹಿನ್ನೆಲೆಯ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದಿಗೆ ಆದಿತ್ ನವೀನ್ ಬಂದಿದ್ದಾರೆ, ಸಿನಿಮಾದ ಕೆಲವು ಪ್ರಮುಖ ದೃಶ್ಯಗಳನ್ನು ಕಾಡಿನಲ್ಲಿ ಚಿತ್ರೀಕರಿಸಲಾಗಿದೆ. ನಾಯಕಿಯಾಗಿ ಕೃತಿ ಗೌಡ ಹಾಗೂ ಉಗ್ರಂ ಖ್ಯಾತಿಯ ರವಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ.
ಬ್ರೇಕ್ ಫೆಲ್ಯೂರ್ ಚಿತ್ರಕ್ಕೆ ಅಭಿಷೇಕ್ ಜಿ ರಾಯ್ ಮತ್ತು ಕೆವಿನ್ ಎನ್ ಸಂಗೀತ ಮತ್ತು ರಿಷಿಕೇಶ್ ಅವರ ಛಾಯಾಗ್ರಹಣವಿದೆ. ಚಿತ್ರದ ಸಾಹಸಗಳನ್ನು ನಾಗ್ ಕೀರ್ತಿ ಮತ್ತು ಸಂಕಲನವನ್ನು ಅಲೆಕ್ಸ್ ಮಾಡಿದ್ದಾರೆ.
ಈ ಚಿತ್ರವನ್ನು ತೆರೆಗೆ ತರಲು ಸುಮಾರು ಎರಡು ವರ್ಷಗಳ ಕಾಲ ಕಾದಿದ್ದು ಇನ್ನೂ ಕಾಯುವ ತಾಳ್ಮೆ ಕಳೆದುಕೊಳ್ಳುತ್ತಿದ್ದೇವೆ. ಹೀಗಾಗಿ ಬೇರೆ ಸಿನಿಮಾಗಳ ಬಿಡುಗಡೆಯ ದಿನವೇ ಚಿತ್ರ ಬಿಡುಗಡೆ ಮಾಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ನಾಯಕ ಮತ್ತು ನಿರ್ದೇಶಕ ಅದಿತ್ ನವೀನ್ ಹೇಳಿದ್ದಾರೆ.
ಈ ಮಧ್ಯೆ ನಿರ್ದೇಶಕರು ತಮ್ಮ ಮುಂದಿನ ಪ್ರಾಜೆಕ್ಟ್‌ಗೆ ಸಿದ್ಧರಾಗುತ್ತಿದ್ದು "ನನ್ನ ಎರಡನೇ ಚಿತ್ರದ ಅಧಿಕೃತ ಬಿಡುಗಡೆ ಜನವರಿ 12 ರಂದು ನಡೆಯಲಿದೆ. ನಾವು ಶೀರ್ಷಿಕೆ ಮತ್ತು ಸಂಬಂಧಿತ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಗೊಳಿಸುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


