ಪುನೀತ್ ರಾಜಕುಮಾರ್ ಕನಸಿನ ಯೋಜನೆ 'ಗಂಧದ ಗುಡಿ' ಟೈಟಲ್ ಟ್ರೈಲರ್ ಡಿಸೆಂಬರ್ 6ಕ್ಕೆ ಬಿಡುಗಡೆ!
ದಿವಂಗತ ಕನ್ನಡ ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಯೋಜನೆಯಾದ ಗಂಧದ ಗುಡಿ ಟೈಟಲ್ ಟ್ರೈಲರ್ ಡಿಸೆಂಬರ್ 6ಕ್ಕೆ ಬಿಡುಗಡೆಯಾಗುತ್ತಿದೆ.

ಚೆನ್ನೈ: ದಿವಂಗತ ಕನ್ನಡ ಸೂಪರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಯೋಜನೆಯಾದ ಗಂಧದ ಗುಡಿ ಟೈಟಲ್ ಟ್ರೈಲರ್ ಡಿಸೆಂಬರ್ 6ಕ್ಕೆ ಬಿಡುಗಡೆಯಾಗುತ್ತಿದೆ.
ಡಿಸೆಂಬರ್ 6ಕ್ಕೆ ಪುನೀತ್ ಅವರ ತಾಯಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಜನ್ಮದಿನದಂದು ಟ್ರೈಲರ್ ಬಿಡುಗಡೆಗೊಳ್ಳಲಿದೆ. ಈ ಹಿಂದೆ ನವೆಂಬರ್ 1 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಪುನೀತ್ ಅವರ ಅಕಾಲಿಕ ಮರಣದಿಂದಾಗಿ ಬಿಡುಗಡೆ ಮುಂದೂಡಲಾಗಿತ್ತು.
ಮೂಲಗಳ ಪ್ರಕಾರ, ಚಿತ್ರಕ್ಕೆ ಗಂಧದ ಗುಡಿ ಎಂದು ಹೆಸರಿಡಲಾಗಿದೆ. ಇದು ಪವರ್ ಸ್ಟಾರ್ ಸಾಹಸಮಯ ಪಯಣವನ್ನು ಸೆರೆಹಿಡಿಯುವ ಸಿನಿಮೀಯ ಅನುಭವವಾಗಿದೆ. ಈ ಚಿತ್ರವು ಪುನೀತ್ ರಾಜ್‌ಕುಮಾರ್ ಮತ್ತು ವನ್ಯಜೀವಿ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ಮಾಪಕ ಅಮೋಘವರ್ಷ ಅವರ ಸಹಯೋಗದಲ್ಲಿದೆ ಎಂದು ವರದಿಯಾಗಿದೆ. ಇದಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಿದ್ದಾರೆ.
ಅಕ್ಟೋಬರ್‌ನಲ್ಲಿ ಪುನೀತ್ ರಾಜ್‌ಕುಮಾರ್ ಅವರು ಟ್ವೀಟ್ ಮಾಡಿದ್ದು ಬಳಿಕ ಈ ನಿಗೂಢ ಯೋಜನೆ ಕುರಿತು ಊಹಾಪೋಹಗಳು ಹೆಚ್ಚಾಗಿತ್ತು. 'ಕಥೆಯು ದಶಕಗಳ ಹಿಂದೆ ಹುಟ್ಟಿತ್ತು. ನಮ್ಮ ಜನರು, ನಮ್ಮ ನೆಲದ ವೈಭವ. ನಮ್ಮ ತಳಸಮುದಾಯಗಳು ಪ್ರಪಂಚದಾದ್ಯಂತ ಹರಡಿಕೊಂಡಿವೆ. ಪೀಳಿಗೆಗೆ ಸ್ಫೂರ್ತಿ ಅದಮ್ಯವಾಗಿತ್ತು. ಆ ಇತಿಹಾಸವನ್ನು ಮೆಲುಕು ಹಾಕುವ ಸಮಯ ಬಂದಿದೆ' ಎಂದು ಬರೆದುಕೊಂಡಿದ್ದರು.

ಗಂಧದ ಗುಡಿಯನ್ನು ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ಮತ್ತು ಮಡ್‌ಸ್ಕಿಪ್ಪರ್ ನಿರ್ಮಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


