ಶಿವಣ್ಣನ ಅಭಿಮಾನಿಗಳಿಗೆ ನಿರಾಸೆ: 'ಭಜರಂಗಿ 2' ರಿಲೀಸ್ ಮತ್ತೆ ಮುಂದೂಡಿಕೆ; ಶೀಘ್ರದಲ್ಲಿ ಹೊಸ ಡೇಟ್ ಪ್ರಕಟ
ಶಿವರಾಜ್ ಕುಮಾರ್ ನಟನೆಯ ಭಜರಂಗಿ2 ಸಿನಿಮಾ ರಿಲೀಸ್ ಮತ್ತೆ ಮುಂದೂಡಲಾಗಿದೆ, ಸೆಪ್ಟಂಬರ್ 10ಕ್ಕೆ ಗಣೇಶ ಚತುರ್ಥಿಯಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು.

ಶಿವರಾಜ್ ಕುಮಾರ್ ನಟನೆಯ ಭಜರಂಗಿ2 ಸಿನಿಮಾ ರಿಲೀಸ್ ಮತ್ತೆ ಮುಂದೂಡಲಾಗಿದೆ, ಸೆಪ್ಟಂಬರ್ 10ಕ್ಕೆ ಗಣೇಶ ಚತುರ್ಥಿಯಂದು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು.
ಚಿತ್ರರಂಗವನ್ನು ಕೊರೊನಾ ವೈರಸ್ ಕಾಡುತ್ತಿದೆ. ಮೊದಲನೇ ಅಲೆ ಆರಂಭ ಆದಾಗಿನಿಂದ ಇಂದಿನವರೆಗೆ ಸಿನಿಮಾರಂಗದ ವ್ಯವಹಾರದ ಮೇಲೆ ಪೆಟ್ಟು ಬೀಳುತ್ತಲೇ ಇದೆ. ಶಿವರಾಜ್ಕುಮಾರ್ ನಟನೆಯ ಬಹುನಿರೀಕ್ಷಿತ ‘ಭಜರಂಗಿ 2 ಸಿನಿಮಾ ಸೆ.10ರಂದು ಬಿಡುಗಡೆಯಾಗಲು ಸಜ್ಜಾಗಿತ್ತು.
‘ಸೆ.1ರಂದು ನಮ್ಮ ಚಿತ್ರದ ಟ್ರೇಲರ್ ಬಿಡುಗಡೆ ಆಗಬೇಕಿತ್ತು. ಸೆ.10 ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ನಿಮಗೂ ಗೊತ್ತು. ಕೊರೊನಾ ಕೇಸ್ಗಳು ಜಾಸ್ತಿ ಆಗುತ್ತಿವೆ. ವೀಕೆಂಡ್ ಲಾಕ್ಡೌನ್ ಮತ್ತು ನೈಟ್ ಕರ್ಫ್ಯೂ ಇರುವುದರಿಂದ ಸೆ.10ರಂದು ಸಿನಿಮಾ ಬಿಡುಗಡೆ ಮಾಡಲು ಆಗುತ್ತಿಲ್ಲ’ ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
‘ಆದಷ್ಟು ಬೇಗ ಹೊಸ ರಿಲೀಸ್ ದಿನಾಂಕವನ್ನು ನಾವು ನಿಮಗೆ ತಿಳಿಸುತ್ತೇವೆ. ತುಂಬಾ ಲೇಟ್ ಆಗುವುದಿಲ್ಲ. ಆದಷ್ಟು ಬೇಗ ರಿಲೀಸ್ ಮಾಡಬೇಕು ಎಂದು ನಾವು ಪ್ರಯತ್ನಿಸುತ್ತಿದ್ದೇವೆ. ಶೇ.100ರಷ್ಟು ಚಿತ್ರಮಂದಿರ ತುಂಬಿದ್ದಾಗಲೇ ಜನರು ಸಿನಿಮಾದ ಮಜವನ್ನು ಅನುಭವಿಸಬಹುದು. ತಡ ಆಗುತ್ತಿರುವುದಕ್ಕೆ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ಟ್ರೇಲರ್ ರಿಲೀಸ್ ಮಾಡಿ, ಅದರಲ್ಲೇ ಹೊಸ ರಿಲೀಸ್ ಡೇಟ್ ತಿಳಿಸುತ್ತೇವೆ’ ಎಂದು ಶಿವಣ್ಣ ಹೇಳಿದ್ದಾರೆ.
‘ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಎಷ್ಟೇ ಅಡೆತಡೆಗಳು ಬಂದರೂ ಆಂಜನೇಯ ಸ್ವಾಮಿ ಕೃಪೆಯಿಂದ ಮುನ್ನುಗ್ಗಿಕೊಂಡು ಹೋಗುತ್ತಿದ್ದೇವೆ. ನಾವು ಪಟ್ಟ ಕಷ್ಟವನ್ನು ನೀವು ಅನುಭವಿಸಬಾರದು. ನೀವು ಆರಾಮಾಗಿ ಬಂದು ಸಿನಿಮಾ ನೋಡಬೇಕು. ನಾವು ಪಟ್ಟಿರುವ ಕಷ್ಟಕ್ಕೆ ನೀವು ಪ್ರತಿಫಲ ನೀಡುತ್ತೀರಿ ಎಂಬ ಭರವಸೆ ಇದೆ. ರಿಲೀಸ್ ದಿನಾಂಕ ಮುಂದೂಡಿಕೆ ಆಗಿದ್ದಕ್ಕೆ ಇಡೀ ತಂಡದಿಂದ ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ’ ಎಂದು ಅಭಿಮಾನಿಗಳ ಜೊತೆ ಶಿವರಾಜ್ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ಎ. ಹರ್ಷ ನಿರ್ದೇಶನದ ಈ ಚಿತ್ರಕ್ಕೆ ಜಯಣ್ಣ ಮತ್ತು ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ‘ಭಜರಂಗಿ’ ಸೂಪರ್ ಹಿಟ್ ಆಗಿದ್ದರಿಂದ ‘ಭಜರಂಗಿ 2’ ಮೇಲೆ ಜನರಿಗೆ ಹೆಚ್ಚು ನಿರೀಕ್ಷೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


