ದಿಗಂತ್- ಕೆಎಂ ಚೈತನ್ಯ ಕಾಂಬಿನೇಷನ್ ನಲ್ಲಿ ಬರ್ತಿದೆ ಕಾಮಿಡಿ ಸಿನಿಮಾ!
ದೂದ್ ಪೇಡ ದಿಗಂತ್ ಮತ್ತು ಆ ದಿನಗಳು ಖ್ಯಾತಿಯ ಕೆಎಂ ಚೈತನ್ಯ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾವೊಂದು ಸಿದ್ಧವಾಗುತ್ತಿದೆ.

ದೂದ್ ಪೇಡ ದಿಗಂತ್ ಮತ್ತು ಆ ದಿನಗಳು ಖ್ಯಾತಿಯ ಕೆಎಂ ಚೈತನ್ಯ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾವೊಂದು ಸಿದ್ಧವಾಗುತ್ತಿದೆ.
ಸಿನಿಮಾ ಸಂಬಂಧ ಮಾತುಕತೆಗಳು ನಡೆಯುತ್ತಿದೆ, ಇದೊಂದು ಕಾಮಿಡಿ ಸಿನಿಮಾವಾಗಿದ್ದು, ಕಥೆ ಸಂಬಂಧ ಚರ್ಚೆಗಳು ನಡೆಯುತ್ತಿವೆ.
ಮಲಯಾಳಂ ಪ್ರಸಿದ್ಧ ನಟರೊಬ್ಬರು ಸಿನಿಮಾ ನಿರ್ಮಾಣಕ್ಕೆ ಬಂಡವಾಲ ಹೂಡುತ್ತಿದ್ದಾರೆ, ಸೆಪ್ಟಂಬರ್ ತಿಂಗಳಲ್ಲಿ ಶೂಟಿಂಗ್ ಆರಂಭಿಸಲು ನಿರ್ದೇಶಕರು ಯೋಜಿಸಿದ್ದಾರೆ. ಸಿನಿಮಾದ ನಿರ್ಮಾಪಕರು, ಉಳಿದ ಕಲಾವಿದರ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುವುದು.
ಆ ದಿನಗಳು, ಸೂರ್ಯಕಾಂತಿ, ಪರಾರಿ, ಆಟಗಾರ, ಆಕೆ, ಅಮ್ಮ ಐ ಲವ್ ಯೂ ಮತ್ತು ಆದ್ಯ ಸಿನಿಮಾ ನಿರ್ದೇಶಿಸಿರುವ ಕೆಎಂ ಚೈತನ್ಯ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾವಾಗಿತ್ತು.
ಅದಾದ ನಂತರ ಚೈತನ್ಯ ಕಿರುತೆರೆಯಲ್ಲಿ ಕತೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದರು. ಈಗ ಸದ್ಯ. ದಿಗಂತ್ ಜೊತೆ ಸಿನಿಮಾ ಮಾಡುತ್ತಿದ್ದು, ಸಂಪೂರ್ಣ ಕಾಮಿಡಿ ಚಿತ್ರ ಇದಾಗಿದೆ.
ಇದರ ನಡುವೆ ದಿಗಂತ್ 'ಹುಟ್ಟು ಹಬ್ಬದ ಶುಭಾಶಯಗಳು' ಬಿಡುಗಡೆಗೆ ಸಿದ್ಧವಾಗಿದೆ. ಅವರು 'ಗಾಳಿಪಟ 2', 'ಮಾರಿಗೋಲ್ಡ್', ಮತ್ತು 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಮುಂತಾದ ಚಿತ್ರಗಳ ಶೂಟಂಗ್ ವಿವಿಧ ಹಂತಗಳಲ್ಲಿವೆ. ಸಮರ್ಥ ಕಡ್ಕೋಲ್ ಚೊಚ್ಚಲ ನಿರ್ದೇಶನದ 'ಎಡಗೈ ಅಪಘಾತಕ್ಕೆ ಕಾರಣ' ಎಂಬ ಚಿತ್ರದಲ್ಲಿಯೂ ಅವರು ನಟಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


