ರವಿಚಂದ್ರನ್ ನಟನೆಯ 'ದೃಶ್ಯ-2' ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್
ಥಿಯೇಟರ್ ಸಂಸ್ಕೃತಿಯನ್ನು ನಾನು ಯಾವಾಗಲೂ ನಂಬಿದ್ದೇನೆ, ಮತ್ತು ನನ್ನ ವೃತ್ತಿಜೀವನದ ಯಶಸ್ಸು ದೊಡ್ಡ ಪರದೆಯ ಮೂಲಕ ಬಂದಿದೆ ಹಾಗೂ ದೃಶ್ಯ 2 ಇದನ್ನೇ ಅನುಸರಿಸಲಿದೆ ಎಂದು ರವಿಚಂದ್ರನ್ ಹೇಳುತ್ತಾರೆ.

ಕ್ರೇಜಿ ಸ್ಟಾರ್' ರವಿಚಂದ್ರನ್ ನಟನೆಯ 'ದೃಶ್ಯ' ಸಿನಿಮಾವು ಏಳು ವರ್ಷಗಳ ಹಿಂದೆ ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡಿತ್ತು. ರವಿಚಂದ್ರನ್ ಕರಿಯರ್‌ಗೂ ಆ ಸಿನಿಮಾ ದೊಡ್ಡ ತಿರುವು ನೀಡಿತ್ತು. ಇದೀಗ ಆ ಸಿನಿಮಾದ ಸಿಕ್ವೇಲ್ ಕೂಡ ಸಿದ್ಧಗೊಂಡಿದೆ. ಜುಲೈ 12ರಂದು 'ದೃಶ್ಯ 2' ಚಾಲನೆ ನೀಡಲಾಗಿತ್ತು. ಇದೀಗ 38 ದಿನಗಳಲ್ಲೇ ಇಡೀ ಸಿನಿಮಾದ ಶೂಟಿಂಗ್ ಮುಗಿಸಿದೆ.
ದೃಶ್ಯ' ಸಿನಿಮಾದಲ್ಲಿ ರವಿಚಂದ್ರನ್ ಅವರಿಗೆ ರಾಜೇಂದ್ರ ಎಂಬ ಪಾತ್ರವಿತ್ತು. ಪತ್ನಿ ಸೀತಾ ಪಾತ್ರದಲ್ಲಿ ಮಲಯಾಳಂ ನಟಿ ನವ್ಯಾ ನಾಯರ್ ಇದ್ದರು. ಇನ್ನು, ಮಕ್ಕಳ ಪಾತ್ರದಲ್ಲಿ ಆರೋಹಿ ನಾರಾಯಣ್ ಮತ್ತು ಉನ್ನತಿ ನಟಿಸಿದ್ದರು. ಇದೀಗ ಆ ಕುಟುಂಬ 'ದೃಶ್ಯ 2' ಗಾಗಿ ಮತ್ತೆ ಏಳು ವರ್ಷಗಳ ಬಳಿಕ ಒಂದಾಗಿದೆ. ಈಚೆಗೆ ಮಲಯಾಳಂನಲ್ಲಿ ತೆರೆಕಂಡು 'ದೃಶ್ಯಂ 2' ಸಿನಿಮಾದ ರಿಮೇಕ್ ಇದಾಗಿದೆ.
ದೃಶ್ಯ2 ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆಗಲಿದೆ ಎಂದು ನಟ ರವಿಚಂದ್ರನ್ ಮತ್ತು ನಿರ್ದೇಶಕ ಪಿ.ವಾಸು ಹೇಳಿದ್ದಾರೆ. ಥಿಯೇಟರ್ ಸಂಸ್ಕೃತಿಯನ್ನು ನಾನು ಯಾವಾಗಲೂ ನಂಬಿದ್ದೇನೆ, ಮತ್ತು ನನ್ನ ವೃತ್ತಿಜೀವನದ ಯಶಸ್ಸು ದೊಡ್ಡ ಪರದೆಯ ಮೂಲಕ ಬಂದಿದೆ ಹಾಗೂ ದೃಶ್ಯ 2 ಇದನ್ನೇ ಅನುಸರಿಸಲಿದೆ ಎಂದು ರವಿಚಂದ್ರನ್ ಹೇಳುತ್ತಾರೆ. ನಿರ್ದೇಶಕ ವಾಸು ಕೂಡ ತಮ್ಮ ಸಿನಿಮಾವನ್ನು ಥಿಯೇಟರ್ ನಲ್ಲಿ ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ.
ದೃಶ್ಯ 1 ರಲ್ಲಿ 'ಕ್ರೇಜಿ ಸ್ಟಾರ್' ರವಿಚಂದ್ರನ್, ನವ್ಯಾ ನಾಯರ್ ಮುಖ್ಯಭೂಮಿಕೆಯಲ್ಲಿದ್ದರು. ಮೊದಲ ಭಾಗದ ಸಿನಿಮಾದಲ್ಲಿ ಇದ್ದ ಸಾಧು ಕೋಕಿಲ ಪಾತ್ರ ಇಲ್ಲಿಯೂ ಮುಂದುವರಿದಿದೆ. ಜೊತೆಗೆ ಯತಿರಾಜ್, ಪ್ರಮೋದ್ ಶೆಟ್ಟಿ, ಲಾಸ್ಯಾ ನಾಗರಾಜ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ಭಾಗಕ್ಕೆ ಇಳೆಯರಾಜ ಸಂಗೀತ ನೀಡಿದ್ದರೆ, 'ದೃಶ್ಯ 2'ಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಹಾಗೆಯೇ, ರವಿಚಂದ್ರನ್ ಸಿನಿಮಾಗಳ ಖಾಯಂ ಛಾಯಾಗ್ರಾಹಕ ಜಿಎಸ್‌ವಿ ಸೀತಾರಾಮ್ ಅವರು ಈ ಸಿನಿಮಾಗೆ ಕೆಲಸ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


