ಸಿನಿಮಾ ಸುದ್ದಿ

'ದಂತಕಥೆ' ಸಿನಿಮಾದಲ್ಲಿ ಯಶ ಶಿವಕುಮಾರ್ ಗೆ ಮಹಿಳಾ ಪ್ರಧಾನ ಪಾತ್ರ!

ವಚನ ನಿರ್ದೇಶಿಸಿ ವಸಿಷ್ಠ ಸಿಂಹ ನಟಿಸುತ್ತಿರುವ ದಂತಕಥೆ ಸಿನಿಮಾದಲ್ಲಿ ಯಶ ಶಿವಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'ದಂತಕಥೆ' ಸಿನಿಮಾದಲ್ಲಿ ಯಶ ಶಿವಕುಮಾರ್ ಗೆ ಮಹಿಳಾ ಪ್ರಧಾನ ಪಾತ್ರ!
ಯಶ ಶಿವಕುಮಾರ್
Published On :

ವಚನ ನಿರ್ದೇಶಿಸಿ ವಸಿಷ್ಠ ಸಿಂಹ ನಟಿಸುತ್ತಿರುವ ದಂತಕಥೆ ಸಿನಿಮಾದಲ್ಲಿ ಯಶ ಶಿವಕುಮಾರ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಸೆಪ್ಟಂಬರ್ ಮಧ್ಯಬಾಗದಲ್ಲಿ ಈ ಸಂಬಂಧ ಚಿತ್ರತಂಡ ಅಧಿಕೃತ ಘೋಷಣೆ ಮಾಡಲಿದೆ. ಒಂದು ಪ್ರಕರಣದಲ್ಲಿ ಕೆಲಸ ಮಾಡಲು ನಿಯೋಜಿಸಲಾಗಿರುವ ಇಬ್ಬರು ಪೊಲೀಸ್ ಅಧಿಕಾರಿಗಳ ಕಥೆ ಇದಾಗಿದೆ.

 ಈ ಚಿತ್ರದಲ್ಲಿ ಕಿಶೋರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ರವಿಶಂಕರ್, ಚಿಕ್ಕಣ್ಣ ಮತ್ತು ಧರ್ಮಣ್ಣ ಕಡೂರ್ ನಟಿಸಿದ್ದಾರೆ.

ಪದವಿ ಪೂರ್ವ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಯಶ ಶಿವಕುಮಾರ್, ರಾಜ್ ಸೌಂಡ್ಸ್ ಅಂಡ್ ಲೈಟ್ಸ್, ಬೈರಾಗಿ, ಮತ್ತು ಡೆಡ್ಲಿ 3 ನಿರ್ಮಾಣದ ವಿವಿಧ ಹಂತಗಳಲ್ಲಿ ಕೂಡ ಇದ್ದಾರೆ.

ಅವರು ಸೆಪ್ಟೆಂಬರ್‌ನಲ್ಲಿ ಬಹದ್ದೂರ್ ಗಂಡು ಚಿತ್ರದ ಚಿತ್ರೀಕರಣ ಆರಂಭಿಸಲಿದ್ದಾರೆ. ದಂತಕಥೆಗೆ ಸಿನಿಮಾಗೆ ಅನೂಪ್ ಸೀಳಿನ್ ಸಂಗೀತ ಮತ್ತು ನವೀನ್ ಕುಮಾರ್ ಛಾಯಾಗ್ರಹಣವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.