ಸಿನಿಮಾ ಸುದ್ದಿ

ಪ್ರೇಕ್ಷಕರ ಮನೆಗೆದ್ದ ಬಡವ ರಾಸ್ಕೆಲ್'ನ 'ಉಡುಪಿ ಹೋಟೆಲ್' ಗೀತೆ: ವಿಡಿಯೋ ನೋಡಿ...

ಸೆಪ್ಟೆಂಬರ್ 24ಕ್ಕೆ ಬಿಡುಗಡೆಯಾಗಲು ಸಿದ್ಧವಿರುವ ಬಡವ ರಾಸ್ಕಲ್ ಚಿತ್ರದ ಹಾಡೊಂದು ಆಗಸ್ಟ್ 9ಕ್ಕೆ ಬಿಡುಗಡೆಯಾಗಿದ್ದು, ಈ ಗೀತೆ ಹಲವರ ಮನಗೆದ್ದಿದೆ.

ಪ್ರೇಕ್ಷಕರ ಮನೆಗೆದ್ದ ಬಡವ ರಾಸ್ಕೆಲ್'ನ 'ಉಡುಪಿ ಹೋಟೆಲ್' ಗೀತೆ: ವಿಡಿಯೋ ನೋಡಿ...
ಚಿತ್ರದ ಸ್ಟಿಲ್
Published On :

ಸೆಪ್ಟೆಂಬರ್ 24ಕ್ಕೆ ಬಿಡುಗಡೆಯಾಗಲು ಸಿದ್ಧವಿರುವ ಬಡವ ರಾಸ್ಕಲ್ ಚಿತ್ರದ ಹಾಡೊಂದು ಆಗಸ್ಟ್ 9ಕ್ಕೆ ಬಿಡುಗಡೆಯಾಗಿದ್ದು, ಈ ಗೀತೆ ಹಲವರ ಮನಗೆದ್ದಿದೆ. 

'ಉಡುಪಿ ಹೋಟೆಲ್' ಎಂಬ ವಿಡಿಯೋ ಸಾಂಗ್ ಯೂಟ್ಯೂಬ್ ನಲ್ಲಿ ಹಿಟ್ ಆಗಿದೆ. ಈ ಹಾಡಿನ ಸಾಹಿತ್ಯವನ್ನು ಡಾಲಿ ಧನಂಜಯ್ ಅವರು ಬರೆದಿದ್ದು, ವಾಸುಕಿ ವೈಭವ್ ಅವರು ಗೀತೆ ಸಂಯೋಜನೆಗೊಳಿಸಿದ್ದಾರೆ. ಈ ಹಾಡನ್ನು ವಿಜಯ್ ಪ್ರಕಾಶ್ ಅವರು ಹಾಡಿದ್ದು, ವಿಡಿಯೋ ಗೀತೆಯಲ್ಲಿ ಧನಂಜಯ್ ಮತ್ತು ಅಮೃತ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ.

ಪಕ್ಕಾ ಮಧ್ಯಮವರ್ಗದ ಹುಡುಗನ ಕಥೆ ಆಧರಿಸಿರುವ ಬಡವ ರಾಸ್ಕಲ್ ಚಿತ್ರಕ್ಕೆ ಗುರು ಶಂಕರ್ ಅವರು ಆಕ್ಷನ್ ಕಟ್ ಹೇಳಿದ್ದು, ಯುವ ಗಾಯಕ ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.

ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಧನಂಜಯ್ ಜೊತೆ ಗುಜ್ಮಾಲ್ ಪುರುಷೋತ್ತಮ್ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಧನಂಜಯ್ ಜೊತೆ ನಟಿ ಅಮೃತಾ ಅಯ್ಯಂಗಾರ್ ತೆರೆ ಹಂಚಿಕೊಂಡಿದ್ದಾರೆ. ನಾಗಭೂಷಣ ಮತ್ತು ಪೂರ್ಣಚಂದ್ರ ಮೈಸೂರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.