ಹೊಸ ಸಿನಿಮಾದ ಸಂಪೂರ್ಣ ವಿವರ ಆಗಸ್ಟ್ 24ಕ್ಕೆ ರಿವೀಲ್: ನಿರ್ದೇಶಕ ಪ್ರೇಮ್
ಏಕ್ ಲವ್ ಯಾ ಚಿತ್ರವನ್ನು ಈಗಾಗಲೇ ಪೂರ್ಣಗೊಳಿಸಿರುವ ನಿರ್ದೇಶಕ ಪ್ರೇಮ್ ಅವರು, ಈ ನಡುವೆ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದು, ಸಿನಿಮಾದ ಸಂಪೂರ್ಣ ವಿವರವನ್ನು ಆಗಸ್ಟ್ 24ಕ್ಕೆ ರಿವೀಲ್ ಮಾಡುವುದಾಗಿ ಹೇಳಿದ್ದಾರೆ.

ಏಕ್ ಲವ್ ಯಾ ಚಿತ್ರವನ್ನು ಈಗಾಗಲೇ ಪೂರ್ಣಗೊಳಿಸಿರುವ ನಿರ್ದೇಶಕ ಪ್ರೇಮ್ ಅವರು, ಈ ನಡುವೆ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದು, ಸಿನಿಮಾದ ಸಂಪೂರ್ಣ ವಿವರವನ್ನು ಆಗಸ್ಟ್ 24ಕ್ಕೆ ರಿವೀಲ್ ಮಾಡುವುದಾಗಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತಮ್ಮ ಮುಂದಿನ ಚಿತ್ರದ ಸ್ಕ್ರಿಪ್ಟ್ ಪೂಜೆಯ ವಿಡಿಯೋವನ್ನು ಹಂಚಿಕೊಂಡಿರುವ ಪ್ರೇಮ್ ಅವರು, ಯುದ್ಧದಲ್ಲಿ ಒಬ್ಬ ಹುತಾತ್ಮನಾದರೆ ಅವನನ್ನು ಸ್ವರ್ಗ ಲೋಕ ಸ್ವಾಗತಿಸುತ್ತದೆ. ಒಂದು ವೇಳೆ ಯುದ್ಧದಲ್ಲಿ ಒಬ್ಬ ವಿಜಯಶಾಲಿಯಾದರೆ ಸಿಂಹಾಸನ ಅವನಿಗಾಗಿ ಕಾಯುತ್ತಿರುತ್ತದೆ. ಒಟ್ಟಿಯಲ್ಲಿ ಯುದ್ಧ ಎನ್ನುವುದು ಯಾವಾಗಲೂ ಒಳ್ಳೆಯದೇ ಆಗಿರುತ್ತದೆ”. ಹೀಗೆ ಹೇಳಿರುವ ನಿರ್ದೇಶಕ ಪ್ರೇಮ್ ಅವರು, ಇದೀಗ ಯುದ್ಧ ಶುರುವಾಗಿದೆ ಎಂದು ಬರೆದುಕೊಂಡಿದ್ದಾರೆ.
ಪ್ರೇಮ್ ಅವರು ಹಂಚಿಕೊಂಡಿರುವ ವಿಡಿಯೋದ ಕೊನೆಯಲ್ಲಿ ಕೊನೆಯಲ್ಲಿ ಸುದರ್ಶನ ಚಕ್ರ ಹಿಡಿದು ನಿಂತಿರುವ ಶ್ರೀಕೃಷ್ಣ ಪರಮಾತ್ಮನ ಚಿತ್ರವಿರುವುದು ಹಲವರ ಗಮನ ಸೆಳೆಯುತ್ತಿದೆ.
9ನೇ ಚಿತ್ರದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿದೆ. ಚಿತ್ರದ ಚಿತ್ರೀಕರಣಕ್ಕೆ ಸಿದ್ಧತೆಗಳೂ ಪ್ರಾರಂಭವಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಅಭಿಮಾನಿಗಳಿಗೆ ಮಾಹಿತಿ ನೀಡಲು ಬಯಸುತ್ತಿದ್ದೇನೆಂದು ಪ್ರೇಮ್ ಹೇಳಿದ್ದಾರೆ. ಆದರೆ, ತಮ್ಮ ಸಿನಿಮಾದಲ್ಲಿನ ತಾರಾಬಳಗ ಕುರಿತ ಗುಟ್ಟನ್ನು ಪ್ರೇಮ್ ಬಿಟ್ಟುಕೊಟ್ಟಿಲ್ಲ. ಹೊಸ ಚಿತ್ರದ ಚಿತ್ರೀಕರಣ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಆರಂಭವಾಗಲಿದೆ ಎಂದು ತಿಳಿದುಬಂದಿದೆ.
ಈ ನಡುವೆ ಪ್ರೇಮ್ ಅವರು ಧ್ರುವಸರ್ಜಾ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಪ್ರೇಮ್ ಅವರ ಮುಂದಿನ ಚಿತ್ರದಲ್ಲಿ ಆ್ಯಕ್ಷನ್ ಪ್ರಿನ್ಸ್ ಕಾಣಿಸಿಕೊಳ್ಳುತ್ತಾರೋ ಅಥವಾ ಬೇರೆ ಸ್ಟಾರ್ ನಟರು ಕಾಣಿಸಿಕೊಳ್ಳುತ್ತಿದ್ದಾರೋ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಏಕ್ ಲವ್ ಯಾ ಚಿತ್ರದ ಕುರಿತು ಮಾಹಿತಿ ನೀಡಿರುವ ಪ್ರೇಮ್ ಅವರು, ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡಿನ ರೀರೆಕಾರ್ಡಿಂಗ್ ಕೆಲಸಗಳು ಪೂರ್ಣಗೊಂಡಿವೆ. ಇತರೆ ಭಾಷೆಗಳಲ್ಲೂ ಚಿತ್ರ ಬಿಡುಗಡೆಗೆ ಚಿಂತನೆ ನಡೆಸಿದ್ದೇವೆ. ಮಲಯಾಳಂ ಭಾಷೆಗೆ ಡಬ್ಬಿಂಗ್ ಮಾಡಲಾಗುತ್ತಿದ್ದು, ಈ ಕೆಲಸವೂ ಕೊನೆಯ ಹಂತದಲ್ಲಿದೆ. ಮುಂದಿನ ವಾರ ಡಿಟಿಎಸ್ ಕೆಲಸಗಳು ಆರಂಭವಾಗಲಿದೆ. ಚಿತ್ರ ಬಿಡುಗಡೆ ದಿನಾಂಕವನ್ನು ಸಾಂಕ್ರಾಮಿಕ ರೋಗ ಪರಿಸ್ಥಿತಿಯನ್ನು ಆಧರಿಸಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


