ಹೆಡ್-ಬುಷ್ ಚಿತ್ರಕ್ಕೆ ಡಾಲಿ ಧನಂಜಯ್ ನಿರ್ಮಾಪಕ
ನಾಯಕ ನಟನಾಗಿ, ವಿಲನ್ ಆಗಿ ಈಗಾಗಲೇ ಅಭಿನಯ ಪ್ರತಿಭೆ ಸಾಬೀತು ಮಾಡಿರುವ ಧನಂಜಯ್ ಅವರು ಇದೀಗ ಹೆಡ್-ಬುಷ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಹೊರಹೊಮ್ಮಿದ್ದಾರೆ.

ನಾಯಕ ನಟನಾಗಿ, ವಿಲನ್ ಆಗಿ ಈಗಾಗಲೇ ಅಭಿನಯ ಪ್ರತಿಭೆ ಸಾಬೀತು ಮಾಡಿರುವ ಧನಂಜಯ್ ಅವರು ಇದೀಗ ಹೆಡ್-ಬುಷ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿ ಹೊರಹೊಮ್ಮಿದ್ದಾರೆ.
ಅಗ್ರಿ ಶೀಧರ್ ಕಥೆ-ಚಿತ್ರಕಥೆ ಇರುವ ಹೆಡ್-ಬುಷ್ ಚಿತ್ರ ಮೊದಲ ಲಾಕ್ಡೌನ್ ಗಿಂತಲೂ ಮೊದಲೇ ಘೋಷಣೆಯಾಗಿತ್ತು. ಚಿತ್ರದಲ್ಲಿ ಬೆಂಗಳೂರಿನ ಮಾಜಿ ಡಾನ್.ಎಂ.ಪಿ.ಜಯರಾಜ್ ಅವರ ಪಾತ್ರದಲ್ಲಿ ಧನಂಜಯ್ ಅವರು ಕಾಣಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗಿತ್ತು. ಈ ಚಿತ್ರದ ಚಿತ್ರೀಕರಣ ಇದೇ ಆಗಸ್ಟ್ 9 ರಂದು ಆರಂಭವಾಗಲಿದ್ದು, 23ಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.
ಚಿತ್ರವೊಂದಲ್ಲಿ ಧನಂಜಯ್ ಅವರು ಇದೇ ಮೊದಲ ಬಾರಿಗೆ ಬಂಡವಾಳ ಹೂಡುತ್ತಿದ್ದಾರೆ. ಆದರೆ, ಪೂರ್ಣ ಪ್ರಮಾಣದ ಬದಲಿಗೆ ಸೋಮಣ್ಣ ಎಂಬ ಪಾಲುದಾರರೊಬ್ಬರ ಜೊತೆ ಸೇರಿ ಸಿನಿಮಾ ನಿರ್ಮಾಣಕ್ಕೆ ಧನಂಜಯ್ ಅವರು ಕೈಹಾಕಿದ್ದಾರೆ.
ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜತೆಯಾಗಿ ಹೆಡ್-ಬುಷ್ ಚಿತ್ರವನ್ನು ನಿರ್ಮಿಸುತ್ತಿವೆ. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಹೆಡ್-ಬುಷ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಪೋಸ್ಟರ್'ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು.
ಎರಡು ಪಾರ್ಟ್‌ಗಳಲ್ಲಿ ಚಿತ್ರ ತಯಾರಾಗಲಿದ್ದು, ಹದಿಹರೆಯದ ವಯಸ್ಸಿನ ಪಾತ್ರದಲ್ಲಿ ಆಕಾಶ್ ಅವರು ನಡಿಸುತ್ತಿದ್ದಾರೆ. ಈ ಭಾಗದ ಚಿತ್ರೀಕರಣವನ್ನು ಮೊದಲ ಹಂತದಲ್ಲೇ ಪೂರ್ಣಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ಚಿತ್ರೀಕರಣಕ್ಕೆ ಸ್ಥಳದ ಆಯ್ಕೆ ಕೂಡ ಅಂತಿಮಗೊಂಡಿದ್ದು, ಮೊದಲ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ಈ ನಡುವೆ ಡಾಲಿ ಧನಂಜಯ್ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ನಟಿಸಿರುವ 'ರತ್ನನ್ ಪರ್ಪಂಚ', 'ಸಲಗ', 'ತೋತಾಪುರಿ' ಸಿನಿಮಾಗಳು ಬಿಡುಗಡೆ ಸಿದ್ಧವಾಗಿವೆ. 'ಡಾಲಿ', 'ಬಡವ ರ್ಯಾಸ್ಕಲ್', 'ಮಾನ್ಸೂನ್ ರಾಗ', 'ಭೈರಾಗಿ' ಸಿನಿಮಾಗಳ ಚಿತ್ರೀಕರಣ ಪ್ರಗತಿಯಲ್ಲಿದೆ. ಕನ್ನಡದ ಜೊತೆಗೆ ತೆಲುಗಿನ 'ಪುಷ್ಪ' ತಮಿಳಿನ 'ಪಾಯುಂ ಒಲಿ ನೀ ಎನಕ್ಕುಂ' ಸಿನಿಮಾಗಳಲ್ಲಿಯೂ ಧನಂಜಯ್ ನಟಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


