ಸಿನಿಮಾ ಸುದ್ದಿ

'ನಾನು ಚೇತರಿಸಿಕೊಂಡಿದ್ದೇನೆ, ಬಿಗ್‌ಬಾಸ್‌ ಸಂಚಿಕೆಯಲ್ಲಿ ಭಾಗವಹಿಸಲು ಎದುರುನೋಡುತ್ತಿದ್ದೇನೆ'

ಕಳೆದೆರಡು ವಾರಗಳಿಂದ ಅನಾರೋಗ್ಯಕ್ಕೊಳಗಾಗಿ ಬಿಗ್ ಬಾಸ್ ಸಂಚಿಕೆಗೆ ಗೈರಾಗಿದ್ದ ನಟ ಸುದೀಪ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಬಿಗ್ ಬಾಸ್ ರಿಯಾಲಿಯಿ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ನಾನು ಚೇತರಿಸಿಕೊಂಡಿದ್ದೇನೆ, ಬಿಗ್‌ಬಾಸ್‌ ಸಂಚಿಕೆಯಲ್ಲಿ ಭಾಗವಹಿಸಲು ಎದುರುನೋಡುತ್ತಿದ್ದೇನೆ'
ಸುದೀಪ್
Published On :

ಕಳೆದೆರಡು ವಾರಗಳಿಂದ ಅನಾರೋಗ್ಯಕ್ಕೊಳಗಾಗಿ ಬಿಗ್ ಬಾಸ್ ಸಂಚಿಕೆಗೆ ಗೈರಾಗಿದ್ದ ನಟ ಸುದೀಪ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಬಿಗ್ ಬಾಸ್ ರಿಯಾಲಿಯಿ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ನಿಮ್ಮ ಪ್ರಾರ್ಥನೆಗೆ ಧನ್ಯವಾದ. ನಾಗೀಗ ಚೇತರಿಸಿಕೊಂಡಿದ್ದು, ಈ ವಾರಾಂತ್ಯದ ಬಿಗ್‌ಬಾಸ್‌ ಸಂಚಿಕೆಯಲ್ಲಿ ಭಾಗವಹಿಸಲು ಎದುರುನೋಡುತ್ತಿದ್ದೇನೆ. ನನ್ನ ಆರೋಗ್ಯದ ಮೇಲೆ ನಿಗಾ ಇರಿಸಿದ ವೈದ್ಯರಾದ ವೆಂಕಟೇಶ್‌ ಹಾಗೂ ವಿನಯ್‌ ಅವರಿಗೆ ಧನ್ಯವಾದ’ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್‌, ಕಳೆದೆರಡು ವಾರದ ಬಿಗ್‌ಬಾಸ್‌ ‘ವಾರದ ಕಥೆ ಕಿಚ್ಚನ ಜೊತೆ’ ಹಾಗೂ ‘ಸೂಪರ್‌ ಸಂಡೇ ವಿತ್ ಸುದೀಪ್‌’ನಲ್ಲಿ ಭಾಗವಹಿಸಿರಲಿಲ್ಲ. . 

ಕಳೆದ ಎಂಟು ಆವೃತ್ತಿಗಳಲ್ಲಿ ಹೀಗಾಗಿದ್ದು ಇದೇ ಮೊದಲಾಗಿತ್ತು. ಮನೆಯೊಳಗಿದ್ದ ಸ್ಪರ್ಧಿಗಳೂ, ಸುದೀಪ್‌ ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪತ್ರದ ಮುಖೇನ ಕೋರಿದ್ದರು. ಸುದೀಪ್‌ ಅಭಿಮಾನಿಗಳೂ ಅವರು ಶೀಘ್ರವೇ ಗುಣಮುಖರಾಗಲಿ ಎಂದು ಟ್ವಿಟರ್‌, ಇನ್‌ಸ್ಟಾಗ್ರಾಂನಲ್ಲಿ ಸಂದೇಶಗಳನ್ನು ಕಳುಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.