ಖ್ಯಾತ ತಮಿಳು ನಿರ್ದೇಶಕ ತಮೀರಾ ಕೊರೊನಾಗೆ ಬಲಿ
ಕಾಲಿವುಡ್ ನ ಖ್ಯಾತ ಚಲನಚಿತ್ರ ನಿರ್ದೇಶಕ ತಮಿರಾ(53) ಏಪ್ರಿಲ್ 27 ರಂದು ಚೆನ್ನೈನಲ್ಲಿ ಕೋವಿಡ್ -19 ಸೋಂಕಿನ ಕಾರಣ ನಿಧನರಾದರು. ಅವರು ನಗರದ ಅಶೋಕ ಪಿಲ್ಲರ್ ನಲ್ಲಿರುವ ಮಾಯಾ ನರ್ಸಿಂಗ್ ಹೋಂ ನಲ್ಲಿ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದರು.

ಕಾಲಿವುಡ್ ನ ಖ್ಯಾತ ಚಲನಚಿತ್ರ ನಿರ್ದೇಶಕ ತಮಿರಾ(53) ಏಪ್ರಿಲ್ 27 ರಂದು ಚೆನ್ನೈನಲ್ಲಿ ಕೋವಿಡ್ -19 ಸೋಂಕಿನ ಕಾರಣ ನಿಧನರಾದರು. ಅವರು ನಗರದ ಅಶೋಕ ಪಿಲ್ಲರ್ ನಲ್ಲಿರುವ ಮಾಯಾ ನರ್ಸಿಂಗ್ ಹೋಂ ನಲ್ಲಿ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದರು.
"ರಟ್ಟೈಸುಳಿ", "ಆನ್ ದೇವತೈ" ನಂತಹಾ ಚಿತ್ರಗಳಿಂದ ಪ್ರಸಿದ್ದವಾಗಿದ್ದ ನಿರ್ದೇಶಕರ ಹಠಾತ್ ನಿಧನಕ್ಕೆ ತಮಿಳು ಚಿತ್ರೋದ್ಯಮದ ಇತರ ಖ್ಯಾತನಾಮರು ಆಘಾತ ವ್ಯಕ್ತಪಡಿಸಿದ್ದಾರೆ.
ತಮೀರಾ ಅವರು 07.04.2021 ರಂದು ಬೆಳಿಗ್ಗೆ ತೀವ್ರವಾದ ಕೋವಿಡ್ 19 ನ್ಯುಮೋನಿಯಾದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತೀವ್ರ ನಿಗಾ ಘಟಕಕ್ಕೆ ನೇರವಾಗಿ ದಾಖಲಿಸಲಾಯಿತು. ಕಳೆದ 20 ದಿನಗಳಿಂದ ವೆಂಟಿಲೇಟರ್ನಲ್ಲಿದ್ದ ಚಲನಚಿತ್ರ ನಿರ್ದೇಶಕ ಇಂದು ಬೆಳಿಗ್ಗೆ 8.20 ಕ್ಕೆ ಹಠಾತ್ ಹೃದಯ ಸ್ತಂಭನ ನಂತರ ಮೃತಪಟ್ಟಿದ್ದಾರೆ ಎಂದು ಮಾಯಾ ನರ್ಸಿಂಗ್ ಹೋಂ ಪತ್ರಿಕಾ ಪ್ರಕಟಣೆ ಹೇಳಿದೆ.
ಅವರ ನಿಧನದ ಸುದ್ದಿ ಹೊರಬಂದ ನಂತರ, ಅರುಣ್ ವೈದ್ಯನಾಥನ್, ಶಂಕರ್ ಮುಂತಾದ ಪ್ರಸಿದ್ಧರು ಶೋಕ ವ್ಯಕ್ತಪಡಿಸಿದ್ದಾರೆ,
ತಮೀರಾ ಅವರು ತಿರುನೆಲ್ವೇಲಿ ಬಳಿ ಮೂಲಕಾರಪಟ್ಟಿಯಲ್ಲಿ ಶೇಕ್ ದಾವೂದ್ ಆಗಿ ಜನಿಸಿದರು. ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಳ್ಳುವ ವೇಳೆ ಅವರು ಸ್ಕ್ರಿಪ್ಟ್ ಒಂದರ ಕೆಲಸದಲ್ಲಿದ್ದರು. ಇವರು ಇದಕ್ಕೆ ಹಿಂದೆ ಖ್ಯಾತ ಹಿರಿಯ ನಿರ್ದೇಶಕರಾದ ಕೆ ಬಾಲಚಂದರ್ ಮತ್ತು ಭಾರತಿರಾಜ ಅವರ ಸಹಾಯಕರಾಗಿ ಕೆಲಸ ಮಾಡಿದ್ದರು.
'ಮೈ ಪರ್ಫೆಕ್ಟ್ ಹಸ್ಬೆಂಡ್' ಎಂಬ ವೆಬ್ ಸರಣಿಗೆ ತಮೀರಾ ನಿರ್ದೇಶನವಿತ್ತು. ಹಿರಿಯ ನಟರಾದ ಸತ್ಯರಾಜ್ ಮತ್ತು ಸೀತಾ ಅದರಲ್ಲಿ ಮುಖ್ಯ ಪಾತ್ರಧಾರಿಗಳಾಗಿದ್ದರು. ಸರಣಿಯನ್ನು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಮಾಡಲು ಸಿದ್ದತೆ ನಡೆದಿತ್ತು.
ಮೃತರು ಪತ್ನಿ, ಮೂವರು ಗಂಡು ಮಕ್ಕಳು ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


