ಸ್ಯಾಂಡಲ್‍ವುಡ್‍ನಲ್ಲಿ ಕಾಣಿಸಿಕೊಂಡ 'ನಾಯಿ ಇದೆ ಎಚ್ಚರಿಕೆ' ಬೋರ್ಡ್
ಮನೆಮುಂದೆ ನಾಯಿ ಇದೆ ಎನ್ನುವ ಬೋರ್ಡ್ ನಾವೆಲ್ಲರೂ ನೋಡಿರುತ್ತೇವೆ ಆದರೆ ಈಗ ಸ್ಯಾಂಡಲ್ ವುಡ್ ನಲ್ಲಿ 'ನಾಯಿ ಇದೆ ಎಚ್ಚರಿಕೆ' ಎನ್ನುವ ಬೋರ್ಡ್ ಕಾಣಿಸುತ್ತಿರುವುದು ಕುತೂಹಲ ಮೂಡಿಸಿದೆ.

ಮನೆಮುಂದೆ ನಾಯಿ ಇದೆ ಎನ್ನುವ ಬೋರ್ಡ್ ನಾವೆಲ್ಲರೂ ನೋಡಿರುತ್ತೇವೆ ಆದರೆ ಈಗ ಸ್ಯಾಂಡಲ್ ವುಡ್ ನಲ್ಲಿ 'ನಾಯಿ ಇದೆ ಎಚ್ಚರಿಕೆ' ಎನ್ನುವ ಬೋರ್ಡ್ ಕಾಣಿಸುತ್ತಿರುವುದು ಕುತೂಹಲ ಮೂಡಿಸಿದೆ.
ಸದ್ಯಕ್ಕೆ ಈಗ ಸ್ಯಾಂಡಲ್‍ವುಡ್‍ನಲ್ಲಿ ಜರ್ಮನ್ ಶಫರ್ಡ್ ಬ್ರೀಡ್‍ನ ಕಪ್ಪುಚಿರತೆಯಂತಿರುವ ಕೆಂಪು ಕಣ್ಣಿನ "ರೂಬಿ'ಯದ್ದೇ ಸದ್ದು.
"ನಾಯಿ ಇದೆ ಎಚ್ಚರಿಕೆ' ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ "ರೂಬಿ" ನಟಿಸುತ್ತಿರುವುದು ಸದ್ಯದ ಬಿಸಿ ಬಿಸಿ ಸುದ್ದಿ. ವೈರಸ್ ಆಧಾರಿತ ಕಥಾಹಂದರವಿರುವ ಸಿನಿಮಾ ಇದಾಗಿದೆ. 'ಸ್ಯಾಂಡಲ್‍ವುಡ್‍ನಲ್ಲೇ ಈ ರೀತಿಯ ಕಥೆ ಮೊದಲ ಬಾರಿಗೆ ನಿರ್ಮಾಣವಾಗುತ್ತಿದೆ' ಎಂಬುದು ನಿರ್ಮಾಪಕ ಪ್ರಬಿಕ್ ಮೊಗವೀರ್ ಅವರ ಮಾತು.
'ಶ್ವಾನಪ್ರಿಯರಾದ ಸ್ವಾಮಿ ಅವರ ಬಳಿ ನಾಯಿಯ ತೆಗೆದುಕೊಳ್ಳಲಾಗಿದೆ. ಅದರ ನಟನೆಯನ್ನು ನೀವು ಪರದೆಯ ಮೇಲೆ ನೋಡಿದರೆ ನಿಜಕ್ಕೂ ಬೆರಗಾಗುತ್ತೀರಾ' ಎನ್ನುತ್ತಾರೆ ಪ್ರಬಿಕ್. ಕಪ್ಪು ಬಣ್ಣದ ನಾಯಿ ರೂಬಿ ಕೆಂಪು ಕಣ್ಣುಗಳನ್ನು ಬಿಟ್ಟುಕೊಂಡು ದುರುಗುಟ್ಟಿ ನೋಡುತ್ತಿರುವ ಈ ಸಿನಿಮಾದ ಪೋಸ್ಟರ್ ಈಗಾಗಲೇ ವೈರಲ್ ಆಗಿದೆ.

ವೈರಸ್ ಆಧಾರಿತ ಕಥೆ ಇರುವ ಈ ಸಿನಿಮಾದಲ್ಲಿ ನಾಯಿಗೆ ಏನು ಕೆಲಸ ಎಂದು ಕೇಳಿದರೆ, "ಈ ಸಿನಿಮಾದಲ್ಲಿ ನಾಯಿಯ ಪಾತ್ರ ತುಂಬಾ ಭಿನ್ನವಾಗಿದೆ. ಅದರಲ್ಲೂ ಇದೊಂದು ಕಾಮಿಡಿ ಎಂಟರ್‍ಟೈನ್‍ಮೆಂಟ್ ಸಿನಿಮಾ. ಇದರಲ್ಲಿ ನಾಯಿ ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವುದೂ ಅಲ್ಲದೇ ಒಂದು ಒಳ್ಳೆಯ ಸಾಮಾಜಿಕ ಸಂದೇಶವನ್ನೂ ಸಾರಲಿದೆ' ಎನ್ನುತ್ತಾರೆ ಪ್ರಬಿಕ್.
'ತನಿಖೆ' ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದ ಜಿ.ಎಸ್.ಕಲಿಗೌಡ ಅವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಸಿನಿಮಾದಲ್ಲಿ ಬಹುತಾರಾಂಗಣವಿದೆ. ಅನುಭವಿ ಕಲಾವಿದರು ಇದ್ದಾರೆ ಎಂದು ಹೇಳಿರುವ ಚಿತ್ರತಂಡ, ಕಲಾವಿದರ ಹೆಸರನ್ನು ಬಿಟ್ಟುಕೊಟ್ಟಿಲ್ಲ.
'ಕ್ರಿಸ್ಟೋಫರ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿಬರುತ್ತಿವೆ. ಸಿನಿಮಾದಲ್ಲಿ ಮನರಂಜನೆಗೆ ಕೊರತೆ ಇಲ್ಲ. ವೈರಸ್‍ನಿಂದ ಆಗುವ ತೊಂದರೆಗಳ ಬಗ್ಗೆ ಈಗ ಜನರು ಎದುರಿಸುತ್ತಿರುವ ಸಮಸ್ಯೆಗಿಂತ ಈ ಸಿನಿಮಾದ ಕಥೆ ಸ್ವಲ್ಪ ಭಿನ್ನವಾಗಿದೆ' ಎನ್ನುವುದು ಪ್ರಬಿಕ್ ಅವರ ಮಾತು. ಶ್ಯಾಮ್ ಸಿಂಧನೂರು ಅವರು ಕ್ಯಾಮರಾ ಹಿಡಿದರೆ, ಧನು ಕೃಷ್ಣ ಸಂಕಲನಕಾರನಾಗಿ ಕೆಲಸ ಮಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


