ಯುಗಾದಿ ಹಬ್ಬಕ್ಕೆ ಬಂತು ಶ್ರೀಮುರಳಿ-ಆಶಿಕಾ ಜೋಡಿಯ ‘ಲವ್‌ಸಮ್’ ಟೀಸರ್
"ಮದಗಜ" ಚಿತ್ರತಂಡ ಯುಗಾದಿ ಹಬ್ಬದಂದು ಚಿತ್ರದ ‘ಲವ್‌ಸಮ್’ ಟೀಸರ್ ಬಿಡುಗಡೆ ಮಾಡಿದೆ. ಇದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಆನಂದ್ ಆಡಿಯೋ ಮೂಲಕ ಹೊರಬಂದಿದೆ.

"ಮದಗಜ" ಚಿತ್ರತಂಡ ಯುಗಾದಿ ಹಬ್ಬದಂದು ಚಿತ್ರದ ‘ಲವ್‌ಸಮ್’ ಟೀಸರ್ ಬಿಡುಗಡೆ ಮಾಡಿದೆ. ಇದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಆನಂದ್ ಆಡಿಯೋ ಮೂಲಕ ಹೊರಬಂದಿದೆ.
“ನಮ್ಮ ಕೊನೆಯ ಎರಡು ಟೀಸರ್ ಗಳಲ್ಲಿ, ನಾಯಕ ಶ್ರೀಮುರಳಿ ಮತ್ತು ನಟ ಜಗಪತಿ ಬಾಬು ಅವರ ಲುಕ್ ಅನ್ನು ನೀಡಿದ್ದೇವೆ. ಈ ಟೀಸರ್ ಆಶಿಕಾ ರಂಗನಾಥ್ ನಿರ್ವಹಿಸಿದ ನಾಯಕಿಯ ಪಾತ್ರವನ್ನು ಪರಿಚಯಿಸುತ್ತದೆ ಮತ್ತು ಅಅರು ನಾಯಕ ಜೋಡಿಯಾಗಿ ಹೇಗೆ ಕಾಣುತ್ತಾರೆ ಎನ್ನುವುದನ್ನು ಹೇಳಲಿದೆ." ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದಾರೆ.
ಚಿತ್ರದ ಮೊದಲ ಕೆಲವು ಸ್ಟಿಲ್‌ಗಳನ್ನು ನಿರ್ದೇಶಕರು ಹಂಚಿಕೊಂಡಿದ್ದು, ಇದರಲ್ಲಿ ಆಶಿಕಾ ರಂಗನಾಥ್ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಶ್ರೀಮುರಳಿ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುತ್ತಿರುವುದು ಇದೇ ಮೊದಲು, ಮತ್ತು ಇಬ್ಬರೂ ತಮ್ಮ ಹೊಸ ಅವತಾರಗಳಲ್ಲಿ ನೆಟಿಜನ್‌ಗಳನ್ನು ಮೆಚ್ಚಿಸಲು ಹೊರಟಿದ್ದಾರೆ. ಏತನ್ಮಧ್ಯೆ, ಫಿಲ್ಮ್ ಸೆಟ್ ಗಳಲ್ಲಿ ಕಾಲಿಗೆ ಗಾಯವಾದ ಶ್ರೀಮುರಳಿ ಅವರಿಗೆ ಈಗ 15 ದಿನಗಳ ಬೆಡ್ ರೆಸ್ಟ್ ಸೂಚಿಸಲಾಗಿದೆ, ಮತ್ತು ಚಿತ್ರ ನಿರ್ಮಾಪಲರು ಅವರ ಶೂಟಿಂಗ್ ದಿನಾಂಕಗಳನ್ನು ಮರು ನಿಗದಿಪಡಿಸಿದ್ದಾರೆ. ಉಮಾಪತಿ ಫಿಲ್ಮ್ಸ್ ನಿರ್ಮಿಸಿದ ಈ ಯೋಜನೆಯು ಕೊನೆಯ ಹಂತದ ಚಿತ್ರೀಕರಣದಲ್ಲಿದೆ.
ಕನ್ನಡದಲ್ಲಿ ತಯಾರಾದ ಫ್ಯಾಮಿಲಿ ಮಾಸ್ ಎಂಟರ್‌ಟೈನರ್ ಪ್ಯಾನ್-ಇಂಡಿಯಾ ರಿಲೀಸ್ ಗೆ ಸಜ್ಜಾಗಿದ್ದು ಏಕಕಾಲದಲ್ಲಿ ಇದನ್ನು ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆ ಮಾಡಲಾಗುವುದು. ತಂಡವು ಆಗಸ್ಟ್ ತಿಂಗಳಲ್ಲಿ ಚಿತ್ರದ ರಿಲೀಸ್ ಗೆ ಸಿದ್ದವಾಗುತ್ತಿದೆ. ವರಮಹಾಲಕ್ಷ್ಮಿ ಹಬ್ಬದಂದು ಸಿನಿ ಮಂದಿರಕ್ಕೆ "ಮದಗಜ" ಲಗ್ಗೆ ಇಡುವುದು ಪಕ್ಕಾ ಎನ್ನಲಾಗಿದೆ. ಆದಾಗ್ಯೂ, ನಿರ್ಮಾಣ ಸಂಸ್ಥೆ ಇದರ ಬಗ್ಗೆ ಯಾವ ಅಧಿಕೃತ ಮಾಹಿತಿ ನೀಡಿಲ್ಲ. ದೊಡ್ಡ ಪಾತ್ರವರ್ಗವನ್ನು ಒಳಗೊಂಡಿರುವ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದರೆ ಡಿಒಪಿ ನವೀನ್ ಕುಮಾರ್ ಕ್ಯಾಮೆರಾ ಕೆಲಸ ನಿರ್ವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


