ಪ್ರತಿಭೆ ಮತ್ತು ನಮ್ರತೆಯ ಸಾರ ಎಸ್ ಪಿಬಿ: ರಮೇಶ್ ಅರವಿಂದ್
ಸಿನೆಮಾದಲ್ಲಿ ನಿಮಗೆ ಹಲವು ಪ್ರತಿಭಾವಂತರು ಸಿಗಬಹುದು, ಆದರೆ ನಮ್ರತೆ, ವಿಧೇಯತೆ, ವಿನಯ ಗುಣಗಳನ್ನು ಹೊಂದಿರುವ ಪ್ರತಿಭಾವಂತ ಕಲಾವಿದರು ಸಿಗುವುದು ಬಹಳ ಅಪರೂಪ. ಎಸ್ ಪಿಬಿ ಇವೆಲ್ಲವುಗಳ ಸಾರ. ನೀವು ಅವರನ್ನು ಭೇಟಿಯಾದರೆ ಸಾಕು, ನಿಮ್ಮಲ್ಲಿ ಒಂದು ಧನಾತ್ಮಕ ಶಕ್ತಿ ತುಂಬಿದಂತಾಗುತ್ತಿತ್ತು ಹೀಗೆ ನೆನಪು ಮಾಡಿಕೊಳ್ಳುತ್ತಾರೆ ನಟ, ನಿರ್ದೇಶಕ ರಮೇಶ್ ಅರವಿಂದ್.

ಸಿನೆಮಾದಲ್ಲಿ ನಿಮಗೆ ಹಲವು ಪ್ರತಿಭಾವಂತರು ಸಿಗಬಹುದು, ಆದರೆ ನಮ್ರತೆ, ವಿಧೇಯತೆ, ವಿನಯ ಗುಣಗಳನ್ನು ಹೊಂದಿರುವ ಪ್ರತಿಭಾವಂತ ಕಲಾವಿದರು ಸಿಗುವುದು ಬಹಳ ಅಪರೂಪ. ಎಸ್ ಪಿಬಿ ಇವೆಲ್ಲವುಗಳ ಸಾರ. ನೀವು ಅವರನ್ನು ಭೇಟಿಯಾದರೆ ಸಾಕು, ನಿಮ್ಮಲ್ಲಿ ಒಂದು ಧನಾತ್ಮಕ ಶಕ್ತಿ ತುಂಬಿದಂತಾಗುತ್ತಿತ್ತು ಹೀಗೆ ನೆನಪು ಮಾಡಿಕೊಳ್ಳುತ್ತಾರೆ ನಟ, ನಿರ್ದೇಶಕ ರಮೇಶ್ ಅರವಿಂದ್.
ನನ್ನ ಈಗಿನ ನಿರ್ದೇಶನದ 100 ಚಿತ್ರಕ್ಕೆ ಹಾಡಬೇಕೆಂದು ಅವರಲ್ಲಿ ಕೇಳಿಕೊಂಡಿದ್ದೆ. ಒಂದೂವರೆ ತಿಂಗಳ ಹಿಂದೆ ಅವರಿಗೆ ಕರೆ ಮಾಡಿ ಹೇಳಿದ್ದೆ. ಆಗ ಟ್ಯೂನ್ ಕಳುಹಿಸಿ ಎಂದಿದ್ದರು. ನಾನು ಕಳುಹಿಸಿದಾಗ ಕೇಳಿನೋಡಿ, ವಾಯ್ಸ್ ಹೈ ನೋಟ್ ನಲ್ಲಿದೆ, ನನ್ನ ಸ್ವಾಭಾವಿಕ ರೇಂಜ್ ನಿಂದ ಹೊರಗಿದೆ, ನೀವು ಇಂಥವರ ಕೈಯಲ್ಲಿ ಹಾಡಿಸಿ ಎಂದು ಮತ್ತೊಬ್ಬ ಗಾಯಕನ ಹೆಸರನ್ನು ಸೂಚಿಸಿದರು.
ಅದರರ್ಥ ಅವರಿಗೆ ಹಾಡಲು ಸಾಧ್ಯವಿಲ್ಲವೆಂದಲ್ಲ. ಅವರ ಸ್ವಾಭಾವಿಕ, ಸಹಜ ಸ್ವರಕ್ಕೆ ದೂರವಾಗಿದೆ ಎಂದು ನನ್ನಿಂದ ಆಗದು ಎಂದು ಹೇಳಿದರು. 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ಅವರಲ್ಲಿ ಆ ವಿಧೇಯತೆ, ನಯ ವಿನಯತೆ ಇದೆ ಎಂದರೆ ಅಚ್ಚರಿಯಾಗುತ್ತದೆ ಎನ್ನುತ್ತಾರೆ ರಮೇಶ್ ಅರವಿಂದ್.
ತಮಿಳು ಚಿತ್ರದಲ್ಲಿ ನಾನು, ಅವರು ಜೊತೆಗೆ ನಟಿಸಿದ್ದೆವು. ಹಾಡಿನ ಮಧ್ಯೆ ಅವರು ಸಣ್ಣ ಸಣ್ಣ ಜೋಕ್ ರೀತಿ ಹಾರಿಸುತ್ತಿದ್ದರು. ವೀಕೆಂಡ್ ವಿತ್ ರಮೇಶ್ ನಲ್ಲಿ ಅವರ ಜೊತೆ ಕಳೆದಿದ್ದು ಅದ್ಭುತ ಕ್ಷಣ, ನಿಮ್ಮ ಜೀವನ ಹೇಗಿದೆ ಎಂದು ಕೇಳಿದಾಗ ಇಷ್ಟೊಂದು ಜೀವನದಲ್ಲಿ ಸಿಗುತ್ತದೆ ಎಂದು ಯಾರು ಅಂದುಕೊಂಡಿದ್ದರು, ಗುಡ್ ಬೈ ಹೇಳಲು ಇಂದು ನನಗೆ ಖುಷಿಯಾಗುತ್ತಿದೆ, ಇದಕ್ಕಿಂತ ಅದ್ಭುತ ಕ್ಷಣ, ಇದಕ್ಕಿಂತ ಹೆಚ್ಚಿಗೆ ಜೀವನದಲ್ಲಿ ಏನೂ ಬೇಡ ಎಂದಿದ್ದರು ಎಂದು ನೆನಪು ಮಾಡಿಕೊಳ್ಳುತ್ತಾರೆ ರಮೇಶ್ ಅರವಿಂದ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


