ದೀಪಿಕಾಗೆ ಎನ್‍ಸಿಬಿ ಬುಲಾವ್: ನಟಿಯನ್ನು ಆದರ್ಶವೆಂದು ಹಿಂಬಾಲಿಸುತ್ತಿದ್ದವರಿಗೆ ಬೇಸರವಾಗಿದೆ- ಮಾಳವಿಕಾ
ಬಾಲಿವುಡ್ ಟಾಪ್ ನಟಿ ದೀಪಿಕಾ ಪಡುಕೋಣೆ ಹಾಗೂ ಅವರ ಮ್ಯಾನೇಜರ್ ಅವರಿಗೆ ಎನ್‍ಸಿಬಿ ಸಮನ್ಸ್ ನೀಡಿ ವಿಚಾರಣೆಗೆ ಆಹ್ವಾನಿಸಿದ ಹಿನ್ನೆಲೆ ಕನ್ನಡ ನಟಿ,, ರಾಜಕಾರಣಿ ಮಾಳವಿಕಾ ಬೇಸರ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ಟಾಪ್ ನಟಿ ದೀಪಿಕಾ ಪಡುಕೋಣೆ ಹಾಗೂ ಅವರ ಮ್ಯಾನೇಜರ್ ಅವರಿಗೆ ಎನ್‍ಸಿಬಿ ಸಮನ್ಸ್ ನೀಡಿ ವಿಚಾರಣೆಗೆ ಆಹ್ವಾನಿಸಿದ ಹಿನ್ನೆಲೆ ಕನ್ನಡ ನಟಿ, ರಾಜಕಾರಣಿ ಮಾಳವಿಕಾ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ತಾಣ ಟ್ವಿಟ್ಟರ್ ಮೂಲಕ ಈ ಬಗ್ಗೆ ಪ್ರತಿಕ್ರಯಿಸಿರುವ ಮಾಳವಿಕಾ "ದೀಪಿಕಾ ಅವರನ್ನು ರೋಲ್ ಮಾಡಲ್ ಆಗಿ ಅನುಸರಿಸಿರುವವರಿಗೆ ಈ ಬೆಳವಣಿಗೆ ನಿಜಕ್ಕೂ ಬೇಸರಕ್ಕೆ ಕಾರಣವಾಗಿದೆ" ಎಂದಿದ್ದಾರೆ.
"ಖಿನ್ನತೆ ಎಂಬ ಕಥೆ ಹೇಳಿ ಸಾಮಾಜಿಕ ಕಳಕಳಿಯ ಬಗೆಗೆ ಪ್ರಚಾರ ಪಡೆದಿದ್ದ ನಟಿ ದೀಪಿಕಾಗೆ ಇಂದು "ಮಾಲ್"ನ ಹೊಗೆಯು ಆವರಿಸಿದೆ. ಇದರಿಂದ ಅವರನ್ನು ರೋಲ್ ಮಾಡೆಲ್ (ಆದರ್ಶ) ಆಗಿ ಅನುಸರಿಸಿದ್ದವರಿಗೆ ಇದರಿಂದ ಬೇಸರವಾಗಿದೆ" ಮಾಳವಿಕಾ ಟ್ವೀಟ್ ಮಾಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ಡ್ರಗ್ಸ್ ಪ್ರಕರಣ ಸಂಬಂಧ ನಟಿ ದೀಪಿಕಾ ಹಾಗೂ ಇತರೆ ಟಾಪ್ ನಟಿಯರನ್ನು ಎನ್‍ಸಿಬಿ ತನಿಖೆಗೆ ಆಹ್ವಾನಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


