ಲಾಕ್ಡೌನ್ ಸಮಯದಲ್ಲಿ 2 ಕಥೆ ಬರೆದು ಸಿನೆಮಾ ತಯಾರಿಗೆ ಮುಂದಾಗಿರುವ ನಿರ್ದೇಶಕ ಕೃಷ್ಣ
ಪೈಲ್ವಾನ ನಿರ್ದೇಶಕ ಎಸ್ ಕೃಷ್ಣ ಲಾಕ್ ಡೌನ್ ಸಮಯದಲ್ಲಿ ಎರಡು ಸ್ಕ್ರಿಪ್ಟ್ ಗಳನ್ನು ಬರೆಯುವುದಕ್ಕೆ ಸದುಪಯೋಗ ಮಾಡಿಕೊಂಡಿದ್ದಾರೆ. ಇದೀಗ ಅವುಗಳ ಸಿನೆಮಾ ತಯಾರಿಯಲ್ಲಿ ನಿರತರಾಗಿದ್ದು ಸ್ಕ್ರಿಪ್ಟ್ ಗೆ ಪೂಜೆ ಸಲ್ಲಿಸಲು ನಿನ್ನೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದರು.

ಪೈಲ್ವಾನ ನಿರ್ದೇಶಕ ಎಸ್ ಕೃಷ್ಣ ಲಾಕ್ ಡೌನ್ ಸಮಯದಲ್ಲಿ ಎರಡು ಕಥೆಗಳನ್ನು ಬರೆಯುವುದಕ್ಕೆ ಸದುಪಯೋಗ ಮಾಡಿಕೊಂಡಿದ್ದಾರೆ. ಇದೀಗ ಅವುಗಳ ಸಿನೆಮಾ ತಯಾರಿಯಲ್ಲಿ ನಿರತರಾಗಿದ್ದು ಸ್ಕ್ರಿಪ್ಟ್ ಗೆ ಪೂಜೆ ಸಲ್ಲಿಸಲು ನಿನ್ನೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದರು.
ಎರಡು ಚಿತ್ರಕಥೆಗಳನ್ನು ನಾನು ಸಿದ್ದ ಮಾಡಿಕೊಂಡಿದ್ದು ಎರಡೂ ಚಿತ್ರಗಳು ನನ್ನ ಆರ್ ಆರ್ ಆರ್ ಮೋಷನ್ ಪಿಕ್ಚರ್ಸ್ ನಡಿ ತಯಾರಾಗಲಿದೆ. ಒಂದು ಚಿತ್ರಕ್ಕೆ ನಾನು ನಿರ್ದೇಶನ ಮಾಡಿದರೆ ಮತ್ತೊಂದನ್ನು ಮತ್ತೊಬ್ಬ ನಿರ್ದೇಶಕರು ಮಾಡಲಿದ್ದಾರೆ, ಇನ್ನು 10-15 ದಿನಗಳಲ್ಲಿ ಹೆಚ್ಚಿನ ವಿವರ ನೀಡುತ್ತೇನೆ. ಕನ್ನಡದ ಒಬ್ಬ ಟಾಪ್ ಹೀರೋ ಜೊತೆ ಮಾತುಕತೆ ನಡೆಸುತ್ತಿದ್ದೇನೆ, ಅವರು ಒಪ್ಪಿಗೆ ನೀಡಿ ಎಲ್ಲವೂ ಮುಕ್ತಾಯದ ಹಂತಕ್ಕೆ ಬಂದರೆ ಸದ್ಯದಲ್ಲಿಯೇ ಘೋಷಿಸುತ್ತೇನೆ ಎಂದರು.
ಹಿರಿಯ ನಟ ಅನಂತ್ ನಾಗ್ ಅವರ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದು ಒಂದು ಕಥೆಗೆ ಅವರನ್ನು ಕೇಳಿಕೊಳ್ಳುತ್ತೇನೆ ಎಂದಿದ್ದರು ನಿರ್ದೇಶಕ ಕೃಷ್ಣ. ಹಾಗೆಂದು ಈ ಚಿತ್ರದಲ್ಲಿ ಅನಂತ್ ನಾಗ್ ಅವರನ್ನು ಹಾಕಿಕೊಳ್ಳುತ್ತಾರೆಯೇ ಎಂದು ಗೊತ್ತಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


