ಇಂದಿನಿಂದ ಲಿಖಿತ್ ಶೆಟ್ಟಿಯ 'ಫ್ಯಾಮಿಲಿ ಪ್ಯಾಕ್' ಶೂಟಿಂಗ್ ಪ್ರಾರಂಭ
ಪುನೀತ್ ರಾಜ್‌ಕುಮಾರ್ ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಾಣದ "ಫ್ಯಾಮಿಲಿ ಪ್ಯಾಕ್" ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 21 ರಂದು ಪ್ರಾರಂಭವಾಗುತ್ತದೆ. ಈ ಚಿತ್ರವು ನಿರ್ದೇಶಕ-ನಟ ಜೋಡಿ ಅರ್ಜುನ್ ಕುಮಾರ್ ಮತ್ತು ಲಿಖಿತ್ ಶೆಟ್ಟಿ ಅವರನ್ನು "ಸಂಕಷ್ಟ ಕರ ಗಣಪತಿ" ಬಳಿಕ ಮತ್ತೊಮ್ಮೆ ಒಂದಾಗಿಸಿದೆ.

ಪುನೀತ್ ರಾಜ್‌ಕುಮಾರ್ ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಾಣದ "ಫ್ಯಾಮಿಲಿ ಪ್ಯಾಕ್" ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 21 ರಂದು ಪ್ರಾರಂಭವಾಗುತ್ತದೆ. ಈ ಚಿತ್ರವು ನಿರ್ದೇಶಕ-ನಟ ಜೋಡಿ ಅರ್ಜುನ್ ಕುಮಾರ್ ಮತ್ತು ಲಿಖಿತ್ ಶೆಟ್ಟಿ ಅವರನ್ನು "ಸಂಕಷ್ಟ ಕರ ಗಣಪತಿ" ಬಳಿಕ ಮತ್ತೊಮ್ಮೆ ಒಂದಾಗಿಸಿದೆ.
ಈ ಬಾರಿ ಇಬ್ಬರೂ ಕಾಮಿಡಿ ಎಂಟರ್ಟೈನರ್ ಗಾಗಿ ಟೀಂ ನಲ್ಲಿದ್ದಾರೆ. ಚಿತ್ರಕ್ಕೆ ಅಮೃತ ಅಯ್ಯಂಗಾರ್ ನಾಯಕಿಯಾಗಿದ್ದು "ಸಾಂಕ್ರಾಮಿಕ ಬಿಕ್ಕಟ್ಟಿನ ಮಧ್ಯೆ ನಾವು ಚಿತ್ರೀಕರಣ ಪ್ರಾರಂಭಿಸುತ್ತಿರುವುದರಿಂದ, ಆರಂಭದಲ್ಲಿ ಎರಡು ದಿನಗಳ ಚಿಕ್ಕ ಶೆಡ್ಯೂಲ್ ನೊಂದಿಗೆ ಮುಂದುವರಿಯಲು ನಿರ್ಧರಿಸಿದ್ದೇವೆ. ಬೆಂಗಳೂರು ಹಾಗೂ ಸುತ್ತಮುತ್ತ ಶೂಟಿಂಗ್ ನಡೆಯಲಿದೆ. ಪೂರ್ಣ ಪ್ರಮಾಣದ ಶೆಡ್ಯೂಲ್ ಅಕ್ಟೋಬರ್ 8 ರಿಂದ ಪ್ರಾರಂಭವಾಗಲಿದೆ" ಎಂದು ಚಿತ್ರ್ತಂಡ ಹೇಳಿದೆ.
ಮೊದಲ ಶೆಡ್ಯೂಲ್ ನಲ್ಲಿ ಲಿಖಿತ್ ಶೆಟ್ಟಿಜೊತೆಗೆ ಅಚ್ಯುತ್ ಕುಮಾರ್, ಪದ್ಮಜಾ ರಾವ್ ಮತ್ತು ಸಂಪತ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದು, ಅಮೃತ ಅಕ್ಟೋಬರ್ ಮೊದಲ ವಾರದಲ್ಲಿ ಸೆಟ್ ಗೆ ಸೇರಲಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
"ಫ್ಯಾಮಿಲಿ ಪ್ಯಾಕ್" ಅನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಲಿಖಿತ್ ಶೆಟ್ಟಿ ಮತ್ತು ದೇಶರಾಜ್ ರೈ ಅವರ ಸಹಯೋಗದಲ್ಲಿ ನಿರ್ಮಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ, ಅದು ಪ್ರೀತಿಯಾಗಲಿ ಅಥವಾ ವಿವಾಹವಾಗಲಿ, ಮೈತ್ರಿ ಕೇವಲ ಹುಡುಗ ಮತ್ತು ಹುಡುಗಿಯ ನಡುವೆ ಮಾತ್ರವೇ ಇರುವುದಿಲ್ಲಇದಕ್ಕೆ ಎರಡು ಕುಟುಂಬಗಳು ಒಟ್ಟಿಗೆ ಸೇರಬೇಕು, ಇದು ಕಥೆಯ ಒಂದು ಹಿನ್ನೆಲೆಈ ಚಿತ್ರದಲ್ಲಿ ರಂಗಾಯಣ ರಘು, ದತ್ತಣ್ಣ, ತಿಲಕ್, ಮತ್ತು ನಾಗಭೂಷಣ ಕೂಡ ನಟಿಸಿದ್ದಾರೆ. ಇದರಲ್ಲಿ ಮಾಸ್ತಿ ಬರೆದ ಸಂಭಾಷಣೆ, ಗುರುಕಿರಣ್ ಸಂಗೀತ ಸಂಯೋಜನೆ, ಉದಯ್ ಲೀಲಾ ಅವರ ಛಾಯಾಗ್ರಹಣಹಾಗೂ ಮಧು ಅವರ ಎಡಿಟಿಂಗ್ ಇರುವುದಾಗಿ ನಿರ್ದೇಶಕರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


