ರಿಷಭ್ ಶೆಟ್ಟಿ ಮುಂದಿನ ಆಕ್ಷನ್-ಕಾಮಿಡಿ ಸಿನಿಮಾ 'ಹಿರೋ'
2 ದಿನಗಳಿಂದ ತಮ್ಮ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ನಟ-ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಮುಂದಿನ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ಬಹಿರಂಗಗೊಳಿಸಿದ್ದಾರೆ.

2 ದಿನಗಳಿಂದ ತಮ್ಮ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ನಟ-ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಮುಂದಿನ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ಬಹಿರಂಗಗೊಳಿಸಿದ್ದಾರೆ.
ಭರತ್ ರಾಜ್ ಅವರ ಮೊದಲ ಚಿತ್ರವೂ ಆಗಿರುವ ಈ ಆಕ್ಷನ್-ಕಾಮಿಡಿ ಕಥೆಯಾಗಿರುವ ಚಿತ್ರಕ್ಕೆ ಹಿರೋ ಎಂದು ಟೈಟಲ್ ನೀಡಲಾಗಿದ್ದು, ಇಡೀ ಚಿತ್ರವನ್ನು ಲಾಕ್ ಡೌನ್ ಅವಧಿಯಲ್ಲಿ 50 ದಿನಗಳಲ್ಲಿ ಮುಕ್ತಾಯಗೊಳಿಸಲಾಗಿರುವುದು ಈ ಚಿತ್ರದ ವಿಶೇಷತೆಯಾಗಿದೆ.
ಕೇಶವಿನ್ಯಾಸಕಾರನ ಪಾತ್ರದಲ್ಲಿ ರಿಷಭ್ ಅಭಿನಯಿಸಿದ್ದು, ಅವರ ಕ್ಲೋಸ್ ಅಪ್ ನ್ನು ಕತ್ತರಿಯ ಮಧ್ಯಭಾಗದಲ್ಲಿರುವಂತೆ ವಿನೂತನವಾಗಿ ಪೋಸ್ಟರ್ ವಿನ್ಯಾಸ ಮಾಡಲಾಗಿದೆ.
"ಪುಕ್ಕಲುತನವಿಲ್ಲದೇ ಹಿರೋ ಆಗಿರಲು ಸಾಧ್ಯವಿಲ್ಲ, ಕೆಟ್ಟದ್ದರ ವಿರುದ್ಧ ಹೋರಾಡುವ ಸಾಮರ್ಥ್ಯವಿದ್ದರೆ ಪ್ರತಿಯೊಬ್ಬನೂ ಸಹ ಹಿರೋ ನೇ ಎನ್ನುತಾರೆ ಭರತ್ ರಾಜ್ ಗಾನವಿ ಲಕ್ಷ್ಮಣ್ ಚಿತ್ರದ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಮೋದ್ ಶೆಟ್ಟಿ, ಉಗ್ರಮ್ ಖ್ಯಾತಿಯ ಮಂಜು ಗೌಡ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಒಂದು ನಿರ್ದಿಷ್ಟ ಘಟನೆ ಸಾಮಾನ್ಯ ವ್ಯಕ್ತಿಯನ್ನು ಹಿರೋ ಮಾಡುತ್ತದೆ, ಇದೇ ಚಿತ್ರದ ಒನ್ ಲೈನ್ ಕಥೆಯಾಗಿದ್ದು, ರಿಷಭ್ ಶೆಟ್ಟಿಯ ಹೋಮ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. " ನಾವು ರುದ್ರಪ್ರಯಾಗ್ ಚಿತ್ರಕ್ಕಾಗಿ ಮುಹೂರ್ತ ಮಾಡಿದೆವು, ಆದರೆ ಚಿತ್ರೀಕರಣ ಪ್ರಾರಂಭಗೊಳ್ಳಲಿಲ್ಲ. ಅದರ ನಂತರ ಹರಿಕಥೆಯಲ್ಲ ಗಿರಿಕಥೆ ಪ್ರಾರಂಭವಾಗಬೇಕಿತ್ತು. ಆ ನಂತರ ಲಾಫಿಂಗ್ ಬುದ್ಧ ಚಿತ್ರೀಕರಣವಾಗಬೇಕಿತ್ತು, ಕೋವಿಡ್ ಕಾರಣದಿಂದಾಗಿ ಇದ್ಯಾವುದೂ ಆಗಲಿಲ್ಲ. ಕೋವಿಡ್ ನಿಂದ ಬೆಂಗಳೂರಿನಿಂದ ನಾವೆಲ್ಲರೂ ನಮ್ಮ ಊರುಗಳಿಗೆ ತೆರಳಲು ಪ್ರಾರಂಭಿಸಿದೆವು, ಆಗಲೇ ಹಿರೋ ಚಿತ್ರ ಆಯಿತು ಎನ್ನುತ್ತಾರೆ ರಿಷಭ್
ಹಿರೋ ಗೆ ಅಂಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಕ್ಯಾಮರಾ ಕೆಜಿಎಫ್-1 ಖ್ಯಾತಿಯ ಸ್ಟಂಟ್ ಮಾಸ್ಟರ್ ವಿಕ್ರಮ್ ಸ್ಟಂಟ್ ನಿರ್ದೇಶನವಿದೆ. ಬೆಲ್ ಬಾಟಮ್ ಮೂಲಕ ನಟನೆ ಪ್ರಾರಂಭಿಸಿದ್ದ ರಿಷಭ್ ಶೆಟ್ಟಿಯ ಎರಡನೇ ಸಿನಿಮಾ ಗರುಡ ಗಮನ ಇನ್ನಷ್ಟೇ ತೆರೆ ಕಾಣಬೇಕಿದೆ. ಹಿರೋ ಅವರ ಮೂರನೇ ಚಿತ್ರವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


