ಸೆಪ್ಟಂಬರ್ 20 ರಿಂದ ಯುವರತ್ನ ಶೂಟಿಂಗ್ ಪುನಾರಂಭ: ಪುನೀತ್ ಇಂಟ್ರುಡಕ್ಷನ್ ಸಾಂಗ್
ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಸಿನಿಮಾ ಶೂಟಿಂಗ್ ಸೆಪ್ಟಂಬರ್ 20ರಿಂದ ಪುನಾರಂಭಗೊಳ್ಳಲಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂಟ್ರುಡಕ್ಷನ್ ಸಾಂಗ್ ನಲ್ಲಿ ಭಾಗವಹಿಸಲಿದ್ದಾರೆ.

ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಸಿನಿಮಾ ಶೂಟಿಂಗ್ ಸೆಪ್ಟಂಬರ್ 20ರಿಂದ ಪುನಾರಂಭಗೊಳ್ಳಲಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂಟ್ರುಡಕ್ಷನ್ ಸಾಂಗ್ ನಲ್ಲಿ ಭಾಗವಹಿಸಲಿದ್ದಾರೆ.
ಜನನಿ ಮಾಸ್ಟರ್ ಕೊರಿಯೋಗ್ರಾಫರ್ ಇರುವ ಈ ಸಾಂಗ್ ನ ಕೆಲವು ಭಾಗಗಳು ಶೂಟಿಂಗ್ ಆಗದೇ ಉಳಿದಿತ್ತು, ಹೀಗಾಗಿ ಮತ್ತೆ ಪುನಾರಂಭಗೊಳ್ಳಲಿದೆ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದಾರೆ.
ಮಾರ್ಚ್ ನಸ್ಸಿ ಆಸ್ಟ್ರಿಯಾ ಮತ್ತು ಸ್ಲೋವೆನಿಯಾ ಗಳಲ್ಲಿ ಶೂಟಿಂಗ್ ನಡೆಬೇಕಿತ್ತು, ಕೊರೋನಾ ಹಿನ್ನೆಲೆಯಲ್ಲಿ ಶೂಟಿಂಗ್ ರದ್ದಾಗಿತ್ತು.ಆದರೆ ಸದ್ಯ ಹಾಡನ್ನು ಗೋವಾದಲ್ಲಿ ಚಿತ್ರೀಕರಿಸಲು ನಿರ್ದೇಶಕರು ತೀರ್ಮಾನಿಸಿದ್ದಾರೆ. ಯುವರತ್ನ ಸಿನಿಮಾ ಶೂಟಿಂಗ್ ಇನ್ನು 20 ದಿನಗಳು ಬಾಕಿ ಉಳಿದಿವೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ನಟ ಮತ್ತು ನಿರ್ದೇಶಕ 2ನೇ ಬಾರಿ ಒಂದಾಗುತ್ತಿದ್ದಾರೆ. ಈ ವರ್ಷದ ಅತಿ ನಿರೀಕ್ಷಿತ ಸಿನಿಮಾ ಇದಾಗಿದ್ದು, ಟೀಸರ್ಸ್ ಮತ್ತು ಪೋಸ್ಟರ್ಸ್ ಈಗಾಗಲೇ ಭಾರೀ ಕುತೂಹಲ ಮೂಡಿಸಿವೆ. ಪುನೀತ್ ರಾಜ್ ಕುಮಾರ್ ಜೊತೆ ಸಯ್ಯೇಶ ಮತ್ತು ಧನಂಜಯ್ ಮುಂತಾದವರು ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


