ಸಿನಿಮಾ ಸುದ್ದಿ

ದುನಿಯಾ ವಿಜಯ್ ನಿರ್ದೇಶನದ ಮುಂದಿನ ಚಿತ್ರಕ್ಕೆ ಲಕ್ಷ್ಮಣ್ ಗೋಪಾಲ್ ಹಿರೋ

ನಿರ್ದೇಶಕ ದುನಿಯಾ ವಿಜಯ್ ನಿರ್ದೇಶನದ ಎರಡನೇ ಚಿತ್ರದಲ್ಲಿ ಅವರು ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

ದುನಿಯಾ ವಿಜಯ್ ನಿರ್ದೇಶನದ ಮುಂದಿನ ಚಿತ್ರಕ್ಕೆ ಲಕ್ಷ್ಮಣ್ ಗೋಪಾಲ್ ಹಿರೋ
ಲಕ್ಷ್ಮಣ್ ಗೋಪಾಲ್
Published On :

ಬೆಂಗಳೂರು: ಸ್ಯಾಂಡಲ್ ವುಡ್ ಗೆಳೆಯರ ಬಳಗ ಹಾಗೂ ಸ್ನೇಹಿತರ ವಲಯದಲ್ಲಿ ಲಕ್ಕಿ ಗೋಪಾಲ್ ಎಂದೇ ಹೆಸರಾಗಿರುವ ಲಕ್ಷ್ಮಣ್ ಗೋಪಾಲ್,  ಶಿವರಾಜ್ ಕುಮಾರ್ ಅಭಿಯನದಲ್ಲಿ ಚೊಚ್ಚಲ ನಿರ್ದೇಶನ ಮಾಡುವುದಾಗಿ ಘೋಷಿಸಿದ್ದರು.

ಆದಾಗ್ಯೂ, ಅವರ ವೃತ್ತಿಜೀವನದ ಭವಿಷ್ಯವು ಮೊದಲು ಕ್ಯಾಮೆರಾದೊಂದಿಗೆ ಮುಖಾಮುಖಿಯಾಗುತ್ತಿದೆ. ನಿರ್ದೇಶಕ ದುನಿಯಾ ವಿಜಯ್ ನಿರ್ದೇಶನದ ಎರಡನೇ ಚಿತ್ರದಲ್ಲಿ ಅವರು ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಯುವ ಕೇಂದ್ರಿತ ಸಿನಿಮಾವೊಂದನ್ನು ಮಾಡುವುದಾಗಿ ಸಲಗ ನಿರ್ದೇಶಕರು ಘೋಷಿಸಿದ್ದರು. ಆ ಚಿತ್ರದಲ್ಲಿ ಲಕ್ಕಿ ಗೋಪಾಲ್ ನಾಯಕ ನಟನಾಗಿ ಅಭಿನಯಿಸುತ್ತಿರುವುದಾಗಿ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಚಿತ್ರ ತಂಡ ಅಧಿಕೃತವಾಗಿ ಘೋಷಿಸಿದೆ.

ಗೋಪಾಲ್ ರಾಜ್ ಕುಮಾರ್ ಸಹೋದರಿಯ ಮೊಮ್ಮನಾಗಿದ್ದಾನೆ. "ನಟನಾಗುವುದು ನನ್ನ ಉದ್ದೇಶವಾಗಿರಲಿಲ್ಲ, ಆದರೆ ನಿರ್ದೇಶಕ ದುನಿಯಾ ವಿಜಯ್ ನನ್ನಲ್ಲಿ ಒಬ್ಬ ಕಲಾವಿದನನ್ನು ನೋಡಿ ಕ್ಯಾಮರಾ ಮುಂದೆ ಕರೆ ತಂದಿರುವುದಾಗಿ ಗೋಪಾಲ್ ಹೇಳಿದ್ದಾರೆ.

ನಿರ್ಮಾಪಕ ಕೆ. ಪಿ. ಶ್ರೀಕಾಂತ್, ಸಹ ನಿರ್ದೇಶಕ ಅಭಿ ಎಲ್ಲರೂ ಒಟ್ಟಾಗಿ ಸೇರಿ ತಮ್ಮನ್ನು ಹಿರೋ ಆಗಿ ಆಯ್ಕೆ ಮಾಡಿದ್ದಾರೆ. ಶಿವಣ್ಣ ಕೂಡಾ ಅವಕಾಶವನ್ನು ಕಳೆದುಕೊಳ್ಳದಂತೆ ಸಲಹೆ ನೀಡಿದ್ದಾರೆ. ಎಲ್ಲಾರ ಪ್ರೋತ್ಸಾಹದಿಂದ ಹಿರೋ ಆಗಿ ಅಭಿನಯಿಸುತ್ತಿದ್ದೇನೆ ಎಂದು ಗೋಪಾಲ್ ಹೇಳಿದರು.

ವಿಜಯ್  ರಾ ಪ್ರೇಮ ಕಥೆಯೊಂದರ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದು, ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.