ಲೋಹಿತ್ ಹೆಚ್ ನಿರ್ದೇಶನದ ಹಾರರ್ ಚಿತ್ರದಲ್ಲಿ 'ದಿಯಾ' ನಾಯಕ ಪ್ರಥ್ವಿ!
"ದಿಯಾ" ಚಿತ್ರದ ನಾಯಕ ಪೃಥ್ವಿ ಅಂಬರ್ ಗೆ 2020 ದಯೆ ತೋರಿದೆ. ಕೆ.ಎಸ್.ಅಶೋಕ ನಿರ್ದೇಶನದಲ್ಲಿ ಆದಿ ಪಾತ್ರದ ಮೂಲಕ ಹೆಸರಾದ ಈ ನಟನಿಗೆ ಲಾಕ್ ಡೌನ್ ಬಳಿಕ ಒಂದಾದ ಮೇಲೆ ಒಂದರಂತೆ ಚಿತ್ರಗಳ ಆಫರ್ಸಿಕ್ಕುತ್ತಿದೆ.

"ದಿಯಾ" ಚಿತ್ರದ ನಾಯಕ ಪೃಥ್ವಿ ಅಂಬರ್ ಗೆ 2020 ದಯೆ ತೋರಿದೆ. ಕೆ.ಎಸ್.ಅಶೋಕ ನಿರ್ದೇಶನದಲ್ಲಿ ಆದಿ ಪಾತ್ರದ ಮೂಲಕ ಹೆಸರಾದ ಈ ನಟನಿಗೆ ಲಾಕ್ ಡೌನ್ ಬಳಿಕ ಒಂದಾದ ಮೇಲೆ ಒಂದರಂತೆ ಚಿತ್ರಗಳ ಆಫರ್ ಸಿಕ್ಕುತ್ತಿದೆ. ಪ್ರಸ್ತುತ ಲೈಫ್ ಈಸ್ ಬ್ಯೂಟಿಫುಲ್ ಮತ್ತು ಶುಗರ್ಲೆಸ್ ಎಂಬ ಎರಡು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಇದೀಗ ಲೋಹಿತ್ ಹೆಚ್ ಅವರ ಮುಂದಿನ ಹಾರರ್ ಚಿತ್ರದ ಭಾಗವಾಗಲು ಯೋಜಿಸಿದ್ದಾರೆ.
ಈ ಬಗ್ಗೆ ದೄಢೀಕರಿಸಿದ ಪ್ರಥ್ವಿ ನವೆಂಬರ್ ಮಧ್ಯಭಾಗದಲ್ಲಿ ಶೂಟಿಂಗ್ ಪ್ರಾರಂಭಿಸುವುದಾಗಿ ಹೇಳಿದ್ದಾರೆ. . ಸಿಲ್ವರ್ ಟ್ರೈನ್ ಇಂಟರ್‌ನ್ಯಾಷನಲ್‌ನ ಸಹಯೋಗದೊಂದಿಗೆ ಲೋಹಿತ್ ಅವರ ಮೊದಲ ಪ್ರೊಡಕ್ಷನ್ ಇಂಡಸ್ಟ್ರಿಯಲ್ಲಿ ಮೂಡಿ ಬಂದ ಲೈಫ್ ಈಸ್ ಬ್ಯೂಟಿಫುಲ್ ನಲ್ಲಿ ಈ ನಟ ಅಭಿನಯಿಸಿದ್ದಾರೆ.
ಮಮ್ಮಿ ಸೇವ್ ಮಿ ಮತ್ತು ದೇವಕಿ ಖ್ಯಾತಿಯ ನಿರ್ದೇಶಕ ಈ ಚಿತ್ರಕ್ಕಾಗಿ ಪೃಥ್ವಿ ಅವರನ್ನು ಆಯ್ಕೆ ಮಾಡಿದ್ದಾರೆ. . "ಲೋಹಿತ್ ಒಬ್ಬ ಉತ್ಸಾಹಿ ನಿರ್ದೇಶಕ, ಮತ್ತು ನಾನು ಅವರ ನಿರ್ದೇಶನದ ಯೋಜನೆಯ ಬಗ್ಗೆ ಚರ್ಚಿಸುತ್ತಿದ್ದೇವೆ. ಆದಾಗ್ಯೂ, ಅವರ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ನಿರ್ಮಿಸಲಾದ ಲೈಫ್ ಈಸ್ ಬ್ಯೂಟಿಫುಲ್ ಗಾಗಿ ನನ್ನನ್ನು ಸಂಪರ್ಕಿಸಲು ಅದಕ್ಕಾಗಿ ಮೊದಲು ಶೂಟಿಂಗ್ ನಡೆಸಲು ತಯಾರಾಗಿದ್ದೆ
"ನಾನು ಪ್ರಸ್ತುತ ಕೆ.ಎಂ.ಶಶಿಧರ್ ನಿರ್ದೇಶನದ ಶುಗರ್ಲೆಸ್ ಚಿತ್ರದ ಶೂಟಿಂಗ್ ನಲ್ಲಿದ್ದು ಇದಾದ ನಂತರ ಲೋಹಿತ್ ಚಿತ್ರದ ಚಿತ್ರೀಕರಣ ಪ್ರಾರಂಭಿಸುತ್ತೇನೆ."
ಲೋಹಿತ್ ತಮ್ಮ ಹಿಂದಿನ ಎರಡು ಚಿತ್ರಗಳಲ್ಲಿ ಹಾರರ್ ಅಂಶಗಳನ್ನು ತೋರಿಸಿದ್ದರೂ ಪ್ರಥ್ವಿ ಅವರ ಪಾಲಿಗೆ ಇದು ಹೊಸ ಬಗೆಯ ಪಾತ್ರವಾಗಿರಲಿದೆ. ಇದೀಗ ನಟ ಅಕ್ಟೋಬರ್ 23 ರಂದು ಚಿತ್ರಮಂದಿರಗಳಲ್ಲಿ ದಿಯಾ ಮರು ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.
ಈ ನಡುವೆ ಪ್ರಥ್ವಿ ದರ್ಶನ್ ಅಪೂರ್ವಾ ನಿರ್ದೇಶನದ ಚಿತ್ರವೊಂದರಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಹೆಸರಿಡಲಾಗಿರುವ ಈ ಚಿತ್ರವು ದಿಯಾ ನಾಯಕಿ ಖುಷಿ ರವಿ ಮತ್ತು ಪೃಥ್ವಿ ಅವರನ್ನು ಮತ್ತೆ ಬೆಳ್ಳಿ ಪರದೆಯ ಮೇಲೆ ಒಂದಾಗಿಸುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


