ಸಿನಿಮಾ ಸುದ್ದಿ

ಶಾರ್ಟ್ ಬ್ರೇಕ್ ಬಳಿಕ 'ಕೆಜಿಎಫ್ 2'ಗೆ ಸಂಜಯ್ ದತ್ ಎಂಟ್ರಿ!

ಕೆಜಿಎಫ್-2 ಸಿನಿಮಾಗಾಗಿ ಕಾದು ಕುಳಿತಿರುವ ಅಭಿಮಾನಿಗಳೊಂದು ಗುಡ್ ನ್ಯೂಸ್ ಸಿಕ್ಕಿದೆ. ಸಂಜು ಬಾಬಾ ಅಧೀರನ ಗೆಟಪ್ ನಲ್ಲಿ ಶೀಘ್ರದಲ್ಲೇ ಕೆಜಿಎಫ್-2 ಅಡ್ಡೆಗೆ ಎಂಟ್ರಿ ಕೊಡುತ್ತಿದ್ದಾರೆ.

ಶಾರ್ಟ್ ಬ್ರೇಕ್ ಬಳಿಕ 'ಕೆಜಿಎಫ್ 2'ಗೆ ಸಂಜಯ್ ದತ್ ಎಂಟ್ರಿ!
ಸಂಜಯ್ ದತ್
Published On :

ಕೆಜಿಎಫ್-2 ಸಿನಿಮಾಗಾಗಿ ಕಾದು ಕುಳಿತಿರುವ ಅಭಿಮಾನಿಗಳೊಂದು ಗುಡ್ ನ್ಯೂಸ್ ಸಿಕ್ಕಿದೆ. ಸಂಜು ಬಾಬಾ ಅಧೀರನ ಗೆಟಪ್ ನಲ್ಲಿ ಶೀಘ್ರದಲ್ಲೇ ಕೆಜಿಎಫ್-2 ಅಡ್ಡೆಗೆ ಎಂಟ್ರಿ ಕೊಡುತ್ತಿದ್ದಾರೆ. 

ಬಾಲಿವುಡ್ ನಟ ಸಂಜಯ್‌ ದತ್‌ ಅವರು “ಕೆಜಿಎಫ್-2′ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಾಗ ಸಿನಿಪ್ರೇಮಿಗಳು ಸಾಕಷ್ಟು ಸಂಭ್ರಮಿಸಿದ್ದರು. ಮೊದಲ ಬಾರಿಗೆ ಬಾಲಿವುಡ್‌ನ‌ ಸ್ಟಾರ್‌ ನಟ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಚಿತ್ರದ ಕ್ರೇಜ್‌ ಕೂಡಾ ಹೆಚ್ಚಾಗಿತ್ತು. 

ಆದರೆ, ಕಳೆದ ಆಗಸ್ಟ್‌ ತಿಂಗಳಿನಲ್ಲಿ ಸಂಜಯ್‌ ದತ್‌ ಅವರ ಕ್ಯಾನ್ಸರ್‌ ಕುರಿತಾದ ಸುದ್ದಿ ಹೊರಬಿದ್ದ ನಂತರ, ಅಭಿಮಾನಿಗಳು ಕಸಿವಿಸಿಗೊಂಡಿದ್ದರು. 

ವಿದೇಶಕ್ಕೆ ತೆರಳಿದ್ದ ಸಂಜಯ್‌ ದತ್‌ ಅವರು, ಗುಣಮುಖರಾಗಿ ಮತ್ತೆ ಯಾವಾಗ “ಕೆಜಿಎಫ್-2’ಗೆ ಬರುತ್ತಾರೆ ಎಂಬ ಲೆಕ್ಕಾಚಾರ ಆರಂಭವಾಗಿತ್ತು. ಆದರೆ, ಈಗ ಸ್ವತಃ ಸಂಜಯ್‌ ದತ್‌ ಅವರೇ “ಕೆಜಿಎಫ್-2′ ಸೆಟ್‌ಗೆ ಮರಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. 

ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ 3 ಫೋಟೋಗಳನ್ನು ಹಂಚಿಕೊಂಡಿರುವ ಸಂಜಯ್ ದತ್ ಅವರು, ಕೆಜಿಎಫ್-2ಗೆ ಮರಳುತ್ತಿರುವುದಾಗಿ ತಿಳಿಸಿದ್ದಾರೆ. 

ಫೋಟೋದಲ್ಲಿ ಸಂಜಯ್ ದತ್ ಅವರು ಕಪ್ಪು ಬಣ್ಣದ ಟಿ-ಶರ್ಟ್ ಹಾಗೂ ಕಾರ್ಗೋ ಪ್ಯಾಂಟ್ ಧರಿಸಿರುವುದು ಕಂಡು ಬಂದಿದ್ದು, ಅಧೀರ ಪಾತ್ರಕ್ಕಾಗಿ ತಯಾರಾಗುತ್ತಿದ್ದೇನೆ. #ಕೆಜಿಎಫ್ ಚಾಪ್ಟರ್2 ಎಂದು ಅಡಿ ಬರಹ ಬರೆದುಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.