ಸಿನಿಮಾ ಸುದ್ದಿ

ಡ್ರಗ್ ಡೀಲರ್ ಮೆಸ್ಸಿ ಜೊತೆಗೆ ರಾಗಿಣಿ, ಸಂಜನಾ ನಂಟು?

ಡ್ರಗ್ಸ್ ಜಾಲ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಸಂಕಷ್ಟ ಇಮ್ಮಡಿಯಾಗುವ ಸಾಧ್ಯತೆ ದಟ್ಟವಾಗಿದೆ.

ಡ್ರಗ್ ಡೀಲರ್ ಮೆಸ್ಸಿ ಜೊತೆಗೆ ರಾಗಿಣಿ, ಸಂಜನಾ ನಂಟು?
ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ
Published On :

ಬೆಂಗಳೂರು: ಡ್ರಗ್ಸ್ ಜಾಲ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಸಂಕಷ್ಟ ಇಮ್ಮಡಿಯಾಗುವ ಸಾಧ್ಯತೆ ದಟ್ಟವಾಗಿದೆ.

ಅಂತಾರಾಷ್ಟ್ರೀಯ ಡ್ರಗ್ ಡೀಲರ್ ಭಟ್ಕಳ ಮೂಲದ ಮೆಸ್ಸಿ ಜತೆ ನಟಿಮಣಿಯರ ನಂಟಿರುವುದಾಗಿ ತಿಳಿದುಬಂದಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಹೈಫೈ ಪಾರ್ಟಿಗಳಿಗೆ ಪೆಡ್ಲರ್ ಗಳ ಮೂಲಕ ಸಿಂಥೆಟಿಕ್ ಡ್ರಗ್ ಮಾರಾಟ ಮಾಡುತ್ತಿದ್ದ ಈತ, ಕೊಲಂಬಿಯಾ, ಹಾಲೆಂಡ್, ಬೆಲ್ಜಿಯಂ ಮೊದಲಾದ ದೇಶಗಳಿಂದ ಡ್ರಗ್ಸ್ ತರಿಸುತ್ತಿದ್ದ ಎನ್ನಲಾಗಿದೆ.

ಡೀಲರ್ ಮತ್ತು ಪೆಡ್ಲರ್ ಗಳ ಜತೆ ಕೋಡ್ ವರ್ಡ್ ಮೂಲಕ ವ್ಯವಹರಿಸುತ್ತಿದ್ದ ಸಂಜನಾ ಹಾಗೂ ರಾಗಿಣಿ ಲಾಕ್ ಡೌನ್ ಸಂದರ್ಭದಲ್ಲಿಯೂ ಮಾತ್ರೆಗಾಗಿ ಮೊರೆ ಇಟ್ಟಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಪೆಡ್ಲರ್ ಗಳಾದ ಉಡೇನ್, ಓಸ್ಸಿ ಫಿಲಿಪ್‍, ಲೂಮ್ ಪೆಪ್ಪರ್ ಗೆ 250ಕ್ಕೂ ಹೆಚ್ಚು ಬಾರಿ ಕರೆ ಮಾಡಿರುವ ಕಾಲ್ ಲಿಸ್ಟ್ ಅನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಡ್ರಗ್ಸ್ ಜಾಲಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಲೇ ವಿಚಾರಣೆಗೆ ಹಾಜರಾಗಿ, ಬಳಿಕ ನ್ಯಾಯಾಂಗ ಬಂಧನಕ್ಕೂ ಒಳಗಾಗಿರುವ ನಟಿಯರು ತಪ್ಪನ್ನು ಒಪ್ಪಿಕೊಳ್ಳುವರೇ? ಮತ್ತಷ್ಟು ನಟ ನಟಿಯರು ಮಾತ್ರವಲ್ಲದೆ ಮಾದಕ ನಶೆಯ ನಂಟು ಹೊಂದಿರುವ ಇತರರ ಹೆಸರು ಹೊರಬರುವುದೇ ಎಂಬುದನ್ನು ಕಾದುನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.