ಸಿನಿಮಾ ಸುದ್ದಿ

'1980' ಗಾಗಿ ಪ್ರಿಯಾಂಕಾ ಉಪೇಂದ್ರ ರೆಟ್ರೋ ಲುಕ್!

ಲಾಕ್ ಡೌನ್ ನಂತರ, ಪ್ರಿಯಾಂಕಾ ಉಪೇಂದ್ರ ಅಭಿನಯದ ಮತ್ತೊಂದು ಚಿತ್ರ ಸಿದ್ದವಾಗುತ್ತಿದೆ. ವಿಭಿನ್ನ ಯೋಜನೆಗಳಲ್ಲಿ ಕುಶಲತೆಯಿಂದ ತೊಡಗಿಸಿಕೊಂಡಿರುವ ಈ ನಟಿ ಮಂಗಳವಾರ "ಲೈಫ್ ಈಸ್ ಬ್ಯೂಟಿಫುಲ್" ಚಿತ್ರದ ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಬುಧವಾರದಿಂದ ಕೊಡಗಿನಲ್ಲಿ ನಡೆಯುತ್ತಿರುವ "1980" ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.

'1980' ಗಾಗಿ ಪ್ರಿಯಾಂಕಾ ಉಪೇಂದ್ರ ರೆಟ್ರೋ ಲುಕ್!
ಪ್ರಿಯಾಂಕಾ ಉಪೇಂದ್ರ
Published On :

ಲಾಕ್ ಡೌನ್ ನಂತರ, ಪ್ರಿಯಾಂಕಾ ಉಪೇಂದ್ರ ಅಭಿನಯದ ಮತ್ತೊಂದು ಚಿತ್ರ ಸಿದ್ದವಾಗುತ್ತಿದೆ. ವಿಭಿನ್ನ ಯೋಜನೆಗಳಲ್ಲಿ ಕುಶಲತೆಯಿಂದ ತೊಡಗಿಸಿಕೊಂಡಿರುವ ಈ ನಟಿ ಮಂಗಳವಾರ "ಲೈಫ್ ಈಸ್ ಬ್ಯೂಟಿಫುಲ್" ಚಿತ್ರದ ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಬುಧವಾರದಿಂದ ಕೊಡಗಿನಲ್ಲಿ ನಡೆಯುತ್ತಿರುವ "1980" ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.

ಚಿತ್ರಕ್ಕೆ ರಾಜ್ ಕಿರಣ್ ಚೊಚ್ಚಲ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಅವರ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಅವರು ಅದರಲ್ಲಿ ರೆಟ್ರೊ ಲುಕ್ ನಲ್ಲಿದ್ದಾರೆ.  ತಾನು ಇಲ್ಲಿಯವರೆಗೆ ಮಾಡಿದ ಚಿತ್ರಗಳಿಗೆ ಹೋಲಿಸಿದರೆ ಇದು ವಿಭಿನ್ನಕಥಾನಕವಾಗಿದೆ ಎಂದು ನಟಿ ಈ ಹೊಂದಿನ ಸಂದರ್ಶನದಲ್ಲಿ ಹೇಳಿದ್ದರು.

Story image

ಮೊದಲ ಶೂಟಿಂಗ್ ಶೆಡ್ಯೂಲ್ ಅನ್ನು 30 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸಲು ನಿರ್ಮಾಪಕರು ಯೋಜಿಸಿದ್ದಾರೆ. ಇದರಲ್ಲಿ ಕಲಾವಿದರಾದ ಅರವಿಂದ ರಾವ್, ಶ್ರೀಧರ್ ಮತ್ತು ಮುರಳಿ ಶರ್ಮಾ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. "ಎ ಡೆಮೋನ್ಸ್ ಎರಾ" ಎಂಬ ಶೀರ್ಷಿಕೆಯನ್ನು ಹೊಂದಿರುವ ಈ ಚಿತ್ರವನ್ನು ಆರ್ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಇದು ಚಿಂತನ್ ವಿಕಾಸ್ ಅವರ ಸಂಗೀತ ಮತ್ತು ಜೀವ ಆಂಟನಿ ಅವರ ಕ್ಯಾಮರಾ ಕೆಲಸವನ್ನು ಒಳಗೊಂಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.