ಸಿನಿಮಾ ಸುದ್ದಿ

ರವಿ ಬೆಳೆಗೆರೆ ನಿಧನಕ್ಕೆ ಕಿಚ್ಚ ಸುದೀಪ್, ಜಗ್ಗೇಶ್ ಸೇರಿ ಸ್ಯಾಂಡಲ್ ವುಡ್ ಗಣ್ಯರ ಸಂತಾಪ

ಹಾಯ್ ಬೆಂಗಳೂರು ಸಂಪಾದಕ ರವಿ ಬೆಳೆಗೆರೆ ನಿಧನಕ್ಕೆ ಸ್ಯಾಂಡಲ್ ವುಡ್ ಖ್ಯಾತ ನಟರು ಕಂಬನಿ ಮಿಡಿದಿದ್ದಾರೆ‌.

ರವಿ ಬೆಳೆಗೆರೆ ನಿಧನಕ್ಕೆ ಕಿಚ್ಚ ಸುದೀಪ್, ಜಗ್ಗೇಶ್ ಸೇರಿ ಸ್ಯಾಂಡಲ್ ವುಡ್ ಗಣ್ಯರ ಸಂತಾಪ
ಬಿಗ್ ಬಾಸ್ ನಲ್ಲಿ ರವಿ ಬೆಳಗೆರೆ
Published On :

ಬೆಂಗಳೂರು: ಹಾಯ್ ಬೆಂಗಳೂರು ಸಂಪಾದಕ ರವಿ ಬೆಳೆಗೆರೆ ನಿಧನಕ್ಕೆ ಸ್ಯಾಂಡಲ್ ವುಡ್ ಖ್ಯಾತ ನಟರು ಕಂಬನಿ ಮಿಡಿದಿದ್ದಾರೆ‌.

ಬಿಗ್ಬಾಸ್ ವೇದಿಕೆಯಲ್ಲಿ ಇತರ ಸ್ಪರ್ಧಿಗಳೊಂದಿಗೆ ರವಿ ಬೆಳಗೆರೆ ಅವರಿದ್ದ ಫೋಟೋವನ್ನು ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಳ್ಳುವ ಮೂಲಕ ಸ್ಯಾಂಡಲ್ ಕಿಚ್ಚ ಸುದೀಪ್ ಸಂತಾಪ ಸೂಚಿಸಿದ್ದಾರೆ.

"ನಾನು ಅವರನ್ನು ಕೊನೆಯ ಬಾರಿಗೆ ನೋಡಿದ್ದು ಈ ವೇದಿಕೆಯಲ್ಲಿ. ಇದು ನನಗೂ ಸೇರಿ ಇತರ ಸ್ಪರ್ಧಿಗಳಿಗೂ ಅಮೂಲ್ಯ ಕ್ಷಣವಾಗಿತ್ತು. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಇನ್ನು ನವರಸನಾಯಕ ಜಗ್ಗೇಶ್ ಸಹ ರವಿ ಬೆಳಗೆರೆ ನಿಧನಕ್ಕೆ ಸಂತಾಪ ಸೂಚಿಸಿದ್ದು "ಯಾರಿಗು ಅರ್ಥವಾಗದ ಮನುಷ್ಯ!ಒಮ್ಮೆ ಈತನ ಮಾತು ಸರಿ ಅನ್ನಿಸುತ್ತದೆ! ಕೆಲವೊಮ್ಮೆ ಬೇಕಿತ್ತ ಈ ಮಾತು ಅನ್ನಿಸುತ್ತದೆ!30ವರ್ಷದಿಂದ ಬಲ್ಲೆ ಆದರು ನನಗೆ ಅರ್ಥವಾಗದ ಮನುಷ್ಯ! ಸಾಮಾನ್ಯ ಅಸಮಾನ್ಯ ಆದದ್ದು ಮಾತ್ರ ಅನುಸರಣೀಯ! ರವಿ ರವರ ಖಾಸಾಬಾತ್ ಬರವಣಿಗೆ ನನ್ನ ಅಚ್ಚುಮೆಚ್ಚು! ನಿಮ್ಮ ಆತ್ಮಕ್ಕೆ ಶಾಂತಿ....." ಎಂದಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ "ಮುಂಜ್ ಮುಂಜಾನೆ..ರವಿ ಮುಳುಗಿದನು ಎಂಬ ಸುದ್ದಿ ಬೇಸರ ತರಿಸಿತು.... ನಿರೂಪಣೆ,ವಾಚನ,ಬರಹ,ಮಾತು,ವಾಗ್ಮಿ,ನಟನೆ ಎಲ್ಲದರಲ್ಲೂ ಬೆಳಗಿದ್ದ "ರವಿ ಬೆಳೆಗೆರೆ" ರವರಿಗೆ ಅಂತಿಮ ನಮನಗಳು.. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ.. ಆತ್ಮಕ್ಕೆ ಶಾಂತಿ ಲಭಿಸಲಿ.." ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.