ಸಿನಿಮಾ ಸುದ್ದಿ

'ತ್ರಿಬಲ್ ರೈಡಿಂಗ್' ನಲ್ಲಿ ಗಣೇಶ್ ಗೆ ಜತೆಯಾದ ಅದಿತಿ ಪ್ರಭುದೇವ

ಮೇಘಾ ಶೆಟ್ಟಿ ಮತ್ತು ರಚನಾ ಇಂದರ್ ನಾಯಕಿಯರಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ "ತ್ರಿಬಲ್ ರೈಡಿಂಗ್" ಚಿತ್ರಕ್ಕೆ ಇದೀಗ ಅದಿತಿ ಪ್ರಭುದೇವ ಎಂಟ್ರಿಯಾಗಿದೆ.

'ತ್ರಿಬಲ್ ರೈಡಿಂಗ್' ನಲ್ಲಿ ಗಣೇಶ್ ಗೆ ಜತೆಯಾದ ಅದಿತಿ ಪ್ರಭುದೇವ
ಅದಿತಿ ಪ್ರಭುದೇವ ಗಣೇಶ್
Published On :

ಮೇಘಾ ಶೆಟ್ಟಿ ಮತ್ತು ರಚನಾ ಇಂದರ್ ನಾಯಕಿಯರಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ "ತ್ರಿಬಲ್ ರೈಡಿಂಗ್" ಚಿತ್ರಕ್ಕೆ ಇದೀಗ ಅದಿತಿ ಪ್ರಭುದೇವ ಎಂಟ್ರಿಯಾಗಿದೆ.  ಮಹೇಶ್ ಗೌಡ ನಿರ್ದೇಶನದ ಕಾಮಿಡಿ ಫ್ಯಾಮಿಲಿ ಎಂಟರ್‌ಟೈನರ್‌ನಲ್ಲಿ "ಓಲ್ಡ್ ಮಂಕ್" ನಾಯಕಿ ಗೋಲ್ಡನ್ ಸ್ಟಾರ್‌ ಜತೆಗೆ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಸೋಮವಾರದಿಂದ ಚಿಕ್ಕಮಗಳೂರಿನಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಅದಿತಿ ಭಾಗವಹಿಸಲಿದ್ದಾರೆ.

ಈ ಚಿತ್ರದ ಮೂಲಕ ಕಿರುತೆರೆ ನಟಿ ಮೇಘಾ ಶೆಟ್ಟಿ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಜತೆಗೆ ಲವ್ ಮೋಕ್‌ಟೇಲ್ ಮತ್ತು ಹರಿಕಥೆ ಅಲ್ಲ ಗಿರಿಕಥೆ ಬಳಿಕ ರಚನಾ ಇಂದರ್ ಪಾಲಿಗಿದು ಮೂರನೇ ಚಿತ್ರವಾಗಿದೆ. 

ಅದಿತಿ ಪ್ರಭುದೇವ ಪ್ರಸ್ತುತ ಸ್ಯಾಂಡಲ್ ವುಡ್ ನ ಅತ್ಯಂತ ಜನಪ್ರಿಯ ತಾರೆಯಾಗಿದ್ದು ಈ ಚಿತ್ರ ಅವರ ಕೈಯಲ್ಲಿರುವ ಇನ್ನೊಂದು ಕುತೂಹಲಕಾರಿ ನಿರೀಕ್ಷಿತ ಚಿತ್ರವಾಗಿದೆ. ಗಣೇಶ್ ಲಾಕ್ ಡೌನ್ ಪೋಸ್ಟ್ ಶೂಟಿಂಗ್ ಪ್ರಾರಂಭಿಸಿದ ಮೊದಲ ಚಿತ್ರ ಇದಾಗಿದ್ದು, ಪ್ರಸ್ತುತ ಇದು ಎರಡನೇ ಶೆಡ್ಯೂಲ್ ನಲ್ಲಿದೆ.

ಸಾಯಿ ಕಾರ್ತಿಕ್ ಚಿತ್ರದ ಹಾಡುಗಳ ಸಂಯೋಜನೆ ಮಾಡಿದ್ದು ಸಾಹಿತ್ಯವನ್ನು ಜಯಂತ ಕಾಯ್ಕಿಣಿ , ನಾಗೇಂದ್ರ ಪ್ರಸಾದ್ ಮತ್ತು ಚೇತನ್ ಕುಮಾರ್ ಬರೆದಿದ್ದಾರೆ, ನಿರ್ದೇಶಕ ಮಹೇಶ್ ಸ್ವತಃ ಒಂದು ಹಾಡನ್ನು ಬರೆದಿದ್ದಾರೆ. ಜೈ ಆನಂದ್ ಅವರ ಛಾಯಾಗ್ರಹಣವಿರುವ ಚಿತ್ರದಲ್ಲಿ ಸಾಧು ಕೋಕಿಲಾ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಕೂಡ ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.