ಸಿನಿಮಾ ಸುದ್ದಿ

'ಅಯ್ಯಪ್ಪನುಂ ಕೊಶಿಯಮ್' ಮಲಯಾಳಂ ಚಿತ್ರದ ತೆಲುಗು ರಿಮೇಕ್‌ನಲ್ಲಿ ಕಿಚ್ಚ ಸುದೀಪ್?

ವಿಮರ್ಶಕ-ಮೆಚ್ಚುಗೆ ಪಡೆದ ಮಲಯಾಳಂ ಚಿತ್ರ ಅಯ್ಯಪ್ಪನುಂ ಕೊಶಿಯಮ್ ನ ತೆಲುಗು ರಿಮೇಕ್ ನಲ್ಲಿ ಪೃಥ್ವಿರಾಜ್ ಸುಕುಮಾರನ್ ಪಾತ್ರವನ್ನು ನಿರ್ವಹಿಸಲು ನಟ ಕಿಚ್ಚ ಸುದೀಪ್ ತಯಾರಾಗುತ್ತಿದ್ದಾರೆಂದು ಮಾತುಗಳು ಕೇಳಿಬಂದಿದೆ.

'ಅಯ್ಯಪ್ಪನುಂ ಕೊಶಿಯಮ್' ಮಲಯಾಳಂ ಚಿತ್ರದ ತೆಲುಗು ರಿಮೇಕ್‌ನಲ್ಲಿ ಕಿಚ್ಚ ಸುದೀಪ್?
ಕಿಚ್ಚ ಸುದೀಪ್
Published On :

ವಿಮರ್ಶಕ-ಮೆಚ್ಚುಗೆ ಪಡೆದ ಮಲಯಾಳಂ ಚಿತ್ರ ಅಯ್ಯಪ್ಪನುಂ ಕೊಶಿಯಮ್ ನ ತೆಲುಗು ರಿಮೇಕ್ ನಲ್ಲಿ ಪೃಥ್ವಿರಾಜ್ ಸುಕುಮಾರನ್ ಪಾತ್ರವನ್ನು ನಿರ್ವಹಿಸಲು ನಟ ಕಿಚ್ಚ ಸುದೀಪ್ ತಯಾರಾಗುತ್ತಿದ್ದಾರೆಂದು ಮಾತುಗಳು ಕೇಳಿಬಂದಿದೆ. ಪವನ್ ಕಲ್ಯಾಣ್ ನಟಿಸಿರುವ, ಇನ್ನೂ ಹೆಸರಿಡಲಿರುವ ಆಕ್ಷನ್ ಥ್ರಿಲ್ಲರ್ ಅನ್ನು ಸಾಗರ್ ಕೆ ಚಂದ್ರ ನಿರ್ದೇಶನ ಮಾಡಿದ್ದಾರೆ, ಸಿತಾರಾ ಎಂಟರ್ಟೈನ್ಮೆಂಟ್ಸ್ ಅಡಿಯಲ್ಲಿ ಎಸ್ ನಾಗವಂಶಿ ನಿರ್ಮಿಸುತ್ತಿದ್ದಾರೆ.

ಅಯ್ಯಪ್ಪನುಂ ಕೊಶಿಯಮ್ ಬಿಜು ಮೆನನ್ ನಿರ್ವಹಿಸಿದ ಅಯ್ಯಪ್ಪನ್ ನಾಯರ್ ಎಂಬ ಪೊಲೀಸ್ ಅಧಿಕಾರಿ ಮತ್ತು ಪೃಥ್ವಿರಾಜ್ ಸುಕುಮಾರನ್ ರಚಿಸಿದ ಮಾಜಿ ಹವಾಲ್ದಾರ್ ಕೋಶಿ ಕುರಿಯನ್ ಎಂಬುವವರ ನಡುವಿನ ಅಹಂಕಾರ ಪ್ರೇರಿತ ಸ್ಪರ್ಧೆಯಸುತ್ತ ಸುತ್ತುತ್ತದೆ.

ಬಿಜು ಮೆನನ್ ಪಾತ್ರದಲ್ಲಿ ಪವನ್ ಕಲ್ಯಾಣ್ ಕಾಣಿಸಿಕೊಳ್ಳಲಿದ್ದು ಪೃಥ್ವಿರಾಜ್ಪಾತ್ರವನ್ನು ಸುದೀಪ್ ಮಾಡಲಿದ್ದಾರೆ"ಮೂಲದಲ್ಲಿ ಕೋಶಿ ಕುರಿಯನ್ ನಿರ್ವಹಿಸಿದ ಪೃಥ್ವಿರಾಜ್ ಅವರ ಪಾತ್ರಕ್ಕೆ ಸ್ಪರ್ಧೆಯಲ್ಲಿರುವ ಮುಖ್ಯ ಪಾತ್ರಧಾರಿ ಸುದೀಪ್, ಈ ಪಾತ್ರವು ಸುದೀಪ್ ಅವರ ಚಿತ್ರಣಕ್ಕೆ ಹೆಚ್ಚು ಹೊಂದಿಕೆಯಾಗುತ್ತದೆ ಎಂದು ಟೀಂ ಭಾವಿಸಿದೆ.ನಟನೂ ಸಹ ಈ ಪ್ರಸ್ತಾಪದಿಂದ ಸಂತಸಗೊಂಡಿದ್ದು ಬೌಂಡ್ ಸ್ಕ್ರಿಪ್ಟ್ ಅನ್ನು ಕೇಳಿದ್ದಾರೆ.ಅವರ ಪಾತ್ರವು ಪವನ್ ಕಲ್ಯಾಣ್ ಅವರ ಪಾತ್ರಕ್ಕೆ ಸರಿಸಮವಾಗಿ ತೆರೆಮೇಲೆ ಬರಲಿದೆ.”ಎಂದು ಮೂಲವು ಹೇಳಿದೆ. 

ತೆಲುಗಿನಲ್ಲದೆ, ಅಯ್ಯಪ್ಪನುಂ ಕೋಶಿಯಮ್ ಅನ್ನು ತಮಿಳು ಮತ್ತು ಹಿಂದಿ ಭಾಷೆಯಲ್ಲೂ ರಿಮೇಕ್ ಮಾಡಲಾಗುತ್ತಿದೆ.

ತಮಿಳಿನ ಒಂದು ಪಾತ್ರವನ್ನು ಸಸಿಕುಮಾರ್ ನಿರ್ವಹಿಸಿದ್ದರೆ ಜೆಎ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಜಾನ್ ಅಬ್ರಹಾಂ ನಿರ್ಮಿಸುತ್ತಿರುವ ಹಿಂದಿ ರಿಮೇಕ್ ಇನ್ನೂ ಅದರ ಪ್ರಮುಖ ಪಾತ್ರಧಾರಿಗಳ ಹೆಸರನ್ನು ಅಂತಿಮಗೊಳೀಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.