ಮೊದಲ ಋತುಚಕ್ರದ ವೇಳೆ ಪೂಜೆಯಲ್ಲಿ ಭಾಗವಹಿಸಿದ್ದೆ: ಯು ಟರ್ನ್ ನಟಿ ಶ್ರದ್ಧಾ ಶ್ರೀನಾಥ್ ಬೋಲ್ಡ್ ಮಾತು
ಸ್ಯಾಂಡಲ್ ವುಡ್ ತಾರೆ ಶ್ರದ್ಧಾ ಶ್ರೀನಾಥ್ ಸಾಮಾಜಿಕ ವಿಚಾರಗಳ ಕುರಿತು ಚರ್ಚಿಸುವುದರಲ್ಲಿ ಸದಾ ಮುಂದು . ಇದೀಗ ನಟಿ ತಾವು ಮೊದಲ ಬಾರಿಗೆ ಋತುಚಕ್ರದ ಬಗ್ಗೆ ಸಾಮಾಜಿಕ ತಾಣದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ತಾರೆ ಶ್ರದ್ಧಾ ಶ್ರೀನಾಥ್ ಸಾಮಾಜಿಕ ವಿಚಾರಗಳ ಕುರಿತು ಚರ್ಚಿಸುವುದರಲ್ಲಿ ಸದಾ ಮುಂದು . ಇದೀಗ ನಟಿ ತಾವು ಮೊದಲ ಬಾರಿಗೆ ಋತುಚಕ್ರದ ಬಗ್ಗೆ ಸಾಮಾಜಿಕ ತಾಣದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ತಾನು ಮೊದಲ ಬಾರಿಗೆ ಋತುಮತಿಯಾಗಿದ್ದ ಸಮಯದಲ್ಲಿ ಕೌಟುಂಬಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎಂದು ನಟಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬಹಿರಂಗಪಡಿಸಿದ್ದಾರೆ.
"ನನಗೆ 14 ವರ್ಷ. ನಾನಂದು ನನ್ನ ಕುಟುಂಬದ ಪೂಜೆಯಲ್ಲಿ ಪಾಲ್ಗೊಂಡಿದ್ದೆ. ಆಗ ನನಗೆ ಮೊದಲ ಬಾರಿಗೆ ಋತುಚಕ್ರ ಪ್ರಾರಂಭವಾಗಿತ್ತು. ನಾನು ನನ್ನ ತಾಯಿಯೊಂದಿಗೆ ಇರಲಿಲ್ಲ, ಹಾಗಾಗಿ ನನ್ನ ಚಿಕ್ಕಮ್ಮನನ್ನು ಈ ಬಗ್ಗೆ ಆತಂಕದಿಂದ ಕೇಳಿದ್ದೆ. (ಏಕೆಂದರೆ ನಾನು ಸ್ಯಾನಿಟರಿ ಪ್ಯಾಡ್ ಧರಿಸಿರಲಿಲ್ಲ) ನಟಿ ಬರೆದುಕೊಂಡಿದ್ದಾರೆ.
"ಆಗ ಅಲ್ಲೇ ಕುಳಿತಿದ್ದ ಇನ್ನೊಬ್ಬ ಒಳ್ಳೆ ಮಹಿಳೆ ನನಗೆ ಹೇಳಿದಳು- ಪರ್ವಗಿಲ್ಲಾ ಚಿನ್ನ, ದೇವರು ಕ್ಷಮಿಸ್ಟಾರೆಮಗು, ದೇವರು ನಿಮ್ಮನ್ನು ಕ್ಷಮಿಸುವನು "(ಋತುಚಕ್ರದ ಅವಧಿಯಲ್ಲಿ ಪೂಜೆಯಲ್ಲಿ ಭಾಗವಹಿಸಿದ್ದಕ್ಕಾಗಿ) " ಶ್ರದ್ಧಾ ಶ್ರೀನಾಥ್ ವಿವರಿಸಿದ್ದಾರೆ. ಅಲ್ಲಿಂದಾಚೆಗೆ ಅವರು ಉತ್ತಮ ಸ್ತ್ರೀವಾದಿಯಾಗಿ ಬದಲಾಗಿದ್ದರು. ಋತುಚಕ್ರ ಅಥವಾ ಪೀರಿಯಡ್ಸ್ ಬಗ್ಗೆ ತಪ್ಪು ಕಲ್ಪನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿದ್ದರು.
ಪ್ರಪಂಚದಾದ್ಯಂತದ ಸೆಲೆಬ್ರಿಟಿಗಳು ಯುನಿಸೆಫ್‌ನ #RedDotChallenge ಅನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ಜನರು ತಮ್ಮ ಅಂಗೈ ಮಧ್ಯದಲ್ಲಿ ಕೆಂಪು ಬಣ್ಣದ ಚುಕ್ಕೆ ಹೊಂದಿರುವ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಮುಟ್ಟಿನ ನೈರ್ಮಲ್ಯದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಇದ್ಘ ನಟಿ ಶ್ರದ್ಧಾ ಶ್ರೀನಾಥ್ ಅವರ ಕಥೆಯನ್ನು ಜಗತ್ತಿಗೆ ಹಂಚಿಕೊಳ್ಳುವ ಮೂಲಕ ಧೈರ್ಯ ಪ್ರದರ್ಶಿಸಿರುವುದು ಬಹುಸಂಖ್ಯೆಯ ಅವರ ಅಭಿಮಾನಿಗಳಿಗೆ ಮೆಚ್ಚುಗೆ ಆಗಿದೆ.
‘ಯು ಟರ್ನ್' ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದ ಶ್ರದ್ಧಾ ಶ್ರೀನಾಥ್ ಕನ್ನಡ, ತೆಲುಗು ಸೇರಿ ಅನೇಕ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕೊನೆಯ ಬಾರಿಗೆ ತೆಲುಗು ಚಿತ್ರ, ಜೋಡಿ,ಯಲ್ಲಿ ಕಾಣಿಸಿಕೊಂಡ್ದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


