ಸಿನಿಮಾ ಸುದ್ದಿ

ರಾಂಬೊ ಸರಣಿ ಚಿತ್ರಕ್ಕೆ ಶರಣ್ ಅವರೇ ನಾಯಕ: ನಿರ್ದೇಶಕ ತರುಣ್ ಸುಧೀರ್

ನಟ ಶರಣ್ ಅಭಿನಯದ ರ್ಯಾಂಬೊ2 ಚಿತ್ರ ತೆರೆಕಂಡು 2 ವರ್ಷ ಪೂರೈಸಿದೆ. ರಾಂಬೊ ಚಿತ್ರ ನಟ ಶರಣ್ ಅವರ 100ನೇ ಚಿತ್ರವಾಗಿದ್ದು ಅವರು ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ಎಂಬುದು ವಿಶೇಷ.

ರಾಂಬೊ ಸರಣಿ ಚಿತ್ರಕ್ಕೆ ಶರಣ್ ಅವರೇ ನಾಯಕ: ನಿರ್ದೇಶಕ ತರುಣ್ ಸುಧೀರ್
ರಾಂಬೊ 2ನಲ್ಲಿ ಶರಣ್, ಆಶಿಕಾ ರಂಗನಾಥ್
Published On :

ನಟ ಶರಣ್ ಅಭಿನಯದ ರಾಂಬೊ-2 ಚಿತ್ರ ತೆರೆಕಂಡು 2 ವರ್ಷ ಪೂರೈಸಿದೆ. ರಾಂಬೊ ಚಿತ್ರ ನಟ ಶರಣ್ ಅವರ 100ನೇ ಚಿತ್ರವಾಗಿದ್ದು ಅವರು ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ಎಂಬುದು ವಿಶೇಷ.

ರಾಂಬೊ ಮೊದಲ ಸಿನಿಮಾಕ್ಕೂ ರಾಂಬೊ 2 ಸಿನಿಮಾ ಕಥೆಗೂ ಸಂಬಂಧವಿಲ್ಲ. ಲಡ್ಡೂ ಸಿನೆಮಾಸ್ ನಡಿ ಅನಿಲ್ ಕುಮಾರ್ ನಿರ್ದೇಶನ ಮಾಡಿರುವ ಸಿನೆಮಾಕ್ಕೆ ಕೆಲವು ನಟರು ಮತ್ತು ತಂತ್ರಜ್ಞರು ಕೂಡಿಕೊಂಡು ಬಂಡವಾಳ ಹಾಕಿದ್ದರು.

ಅಟ್ಲಾಂಟ ನಾಗೇಂದ್ರ, ಶರಣ್, ನಿರ್ದೇಶಕ ತರುಣ್ ಸುಧೀರ್, ಛಾಯಾಗ್ರಾಹಕ ಸುಧಾಕರ್ ಎಸ್ ರಾಜ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಸಂಕಲನಕಾರ ಕೆ ಎಂ ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ ಕೇರೆ ಹೀಗೆ ಹಲವರು ಸೇರಿ ಚಿತ್ರ ತಯಾರಿಸಿದ್ದರು.
ಚಿತ್ರ ಸೂಪರ್ ಹಿಟ್ ಆಯಿತು, ಬಾಕ್ಸ್ ಆಫೀಸ್ ನಲ್ಲಿ 100 ದಿನಗಳ ಪ್ರದರ್ಶನ ಕಂಡಿತ್ತು.

ಇದೀಗ ಮತ್ತೆ ನಿರ್ಮಾಪಕರು, ನಿರ್ದೇಶಕರು ರ್ಯಾಂಬೊ ಸರಣಿ ಚಿತ್ರ ತಯಾರಿಸಲು ಮುಂದಾಗಿದ್ದು ಶರಣ್ ಅವರನ್ನೇ ನಾಯಕನಾಗಿ ಹಾಕಿಕೊಂಡು ಮುಂದುವರಿಸಲು ನಿರ್ಧರಿಸಲಾಗಿದೆ. ಸರಿಯಾದ ಸ್ಕ್ರಿಪ್ಟ್ ತಯಾರಾಗಲು ಕಾಯುತ್ತಿದ್ದೇವೆ, ಒಂದು ಉತ್ತಮ ಕಾಮಿಡಿ ಸಿನೆಮಾ ಮಾಡಬೇಕೆಂದು ಅಂದುಕೊಂಡಿದ್ದೇವೆ ಎಂದು ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಹೇಳುತ್ತಾರೆ.

ರಾಂಬೊ 2ನಲ್ಲಿ ಆಶಿಕಾ ರಂಗನಾಥ್ ನಾಯಕಿ. ಅದರ ಚುಟು ಚುಟು ಹಾಡು ಫೇಮಸ್ ಆಗಿತ್ತು. ಅದರಲ್ಲಿ ಚಿಕ್ಕಣ್ಣ, ತಬಲಾ ನಾಣಿ, ಕುರಿ ಪ್ರತಾಪ್, ಸಾಧು ಕೋಕಿಲಾ ನಟಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.