ಸಿನಿಮಾ ಸುದ್ದಿ

ಶಂಕರ್ ನಾಗ್ ಸಾವಿನ ಸುದ್ದಿ ಸಿಡಿಲು ಬಡಿದಂತಿತ್ತು: ರಾಮಾಯಣದ ಸೀತೆ ದೀಪಿಕಾ

ಕರಾಟೆ ಕಿಂಗ್ ಶಂಕರ್ ನಾಗ್ ಮತ್ತು ದೀಪಿಕಾ ಚಿಕ್ಲಿಯಾ ಅವರು ಹೊಸ ಜೀವನ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. 1990ರಲ್ಲಿ ಈ ಚಿತ್ರ ತೆರೆಕಂಡಿತ್ತು. ಅದೇ ವರ್ಷ ಶಂಕರ್ ನಾಗ್ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು.

ಶಂಕರ್ ನಾಗ್ ಸಾವಿನ ಸುದ್ದಿ ಸಿಡಿಲು ಬಡಿದಂತಿತ್ತು: ರಾಮಾಯಣದ ಸೀತೆ ದೀಪಿಕಾ
ಶಂಕರ್ ನಾಗ್-ದೀಪಿಕಾ
Published On :

ನವದೆಹಲಿ: ಕರಾಟೆ ಕಿಂಗ್ ಶಂಕರ್ ನಾಗ್ ಮತ್ತು ದೀಪಿಕಾ ಚಿಕ್ಲಿಯಾ ಅವರು ಹೊಸ ಜೀವನ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. 1990ರಲ್ಲಿ ಈ ಚಿತ್ರ ತೆರೆಕಂಡಿತ್ತು. ಅದೇ ವರ್ಷ ಶಂಕರ್ ನಾಗ್ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. 

ಶಂಕರ್ ನಾಗ್ ಅವರ ಸಾವಿನ ಕುರಿತಂತೆ ದೀಪಿಕಾ ಚಿಕ್ಲಿಯಾ ಅವರು ಮಾತನಾಡಿದ್ದಾರೆ. 1983ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ದೀಪಿಕಾ ಅವರು 1987ರಲ್ಲಿ ಬಿಡುಗಡೆಯಾಗಿದ್ದ ರಾಮಾಯಣ ಧಾರಾವಾಹಿಯಿಂದ ಪ್ರಸಿದ್ಧಿಯಾಗಿದ್ದರು. ರಾಮಾಯಣ ಧಾರಾವಾಹಿಯಲ್ಲಿ ದೀಪಿಕಾ ಸೀತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

ಕನ್ನಡದಲ್ಲೂ ದೀಪಿಕಾ ಚಿಕ್ಲಿಯಾ ಅಭಿನಯಿಸಿದ್ದರು. ಅಂಬರೀಶ್ ನಟನೆಯ ಇಂದ್ರಜಿತ್ ಚಿತ್ರದ ಮೂಲಕ ಕನ್ನಟ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ದೀಪಿಕಾ ನಂತರ 1990ರಲ್ಲಿ ಶಂಕರ್ ನಾಗ್ ಅಭಿನಯದ ಹೊಸ ಜೀವನ ಚಿತ್ರದಲ್ಲೂ ಅಭಿನಯಿಸಿದ್ದರು. 

ಹೊಸ ಜೀವನ ಚಿತ್ರ ರಿಲೀಸ್ ಆದ ಕೆಲ ತಿಂಗಳಲ್ಲಿ ಶಂಕರ್ ನಾಗ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. 30 ವರ್ಷಗಳ ಬಳಿಕ ಇದೀಗ ಹೊಸ ಜೀವನದ ಹಾಡೊಂದನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿರುವ ದೀಪಿಕಾ ಚಿತ್ರದ ಲಾಸ್ಟ್ ಶೆಡ್ಯೂಲ್ ಮುಗಿಸಿದ ನಂತರ ನಟ ಶಂಕರ್ ನಾಗ್ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಕೇಳಿ ನಾನು ಶಾಕ್ ಆದೆ. ಇದರಿಂದ ಚೇತರಿಸಿಕೊಳ್ಳಲು ನನಗೆ ತುಂಬಾ ಸಮಯ ಬೇಕಿತ್ತು. ಹೊಸ ಜೀವನ ಚಿತ್ರ ಸೂಪರ್ ಹಿಟ್ ಆಗಿತ್ತು. ಆದರೆ ಶಂಕರ್ ನಾಗ್ ಇಲ್ಲದಿರುವ ನೋವು ಕಾಡುತ್ತದೆ ಎಂದು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.