ಸಿನಿಮಾ ಸುದ್ದಿ

ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ 'ರಾಜಕುಮಾರರು': ನಿಸಾರ್ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್‌ ಮನದಾಳದ ಮಾತು

ನಿಸಾರ್ ಅಹಮದ್ ಅವರಂತಹ ಪ್ರಸಿದ್ಧ ವ್ಯಕ್ತಿಯ ಬಗ್ಗೆ ಮಾತನಾಡಲು ನಾನು ತುಂಬಾ ‘ಚಿಕ್ಕವನಾಗಿದ್ದರೂ’, ನನ್ನ ತಂದೆ ಮತ್ತು ಅವರ ನಡುವಿನ ಸ್ನೇಹವನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ.

ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ 'ರಾಜಕುಮಾರರು': ನಿಸಾರ್ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್‌ ಮನದಾಳದ ಮಾತು
ರಾಜ್‌ಕುಮಾರ್ , ನಿಸಾರ್ ಅಹಮದ್
Published On :

ನಿಸಾರ್ ಅಹಮದ್ ಅವರಂತಹ ಪ್ರಸಿದ್ಧ ವ್ಯಕ್ತಿಯ ಬಗ್ಗೆ ಮಾತನಾಡಲು ನಾನು ತುಂಬಾ ‘ಚಿಕ್ಕವನಾಗಿದ್ದರೂ’, ನನ್ನ ತಂದೆ ಮತ್ತು ಅವರ ನಡುವಿನ ಸ್ನೇಹವನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾರ್ವಭೌಮರು. ಡಾ.ರಾಜ್‌ಕುಮಾರ್ ನಟಸರ್ವಭೂಮವಾಗಿದ್ದರೆ, ನಿಸಾರ್  ಸಾಹಿತ್ಯಸಾರ್ವಭೂಮ. ನಮ್ಮಂತೆಯೇ ಅವರೂ ಸಹ ಕೂಡು ಕುಟುಂಬದಲ್ಲಿ ವಾಸವಾಗಿದ್ದರು.

ಅವರ ಕುಟುಂಬದ ಕಾರ್ಯಕ್ರಮಗಳಿಗೆ ನಮ್ಮನ್ನು ಆಹ್ವಾನಿಸುತ್ತಿದ್ದರು. ಅದಾಗ  ಕನಿಷ್ಠ 50 ಜನರು ಹಾಜರಾಗುತ್ತಿದ್ದರು. ಎಲ್ಲಾ ಒಟ್ಟಾಗಿ ಕುಳಿತು ಊಟ ಮಾಡುವುದನ್ನು ಅವರು ಇಷ್ಟಪಡುತ್ತಿದ್ದರು.ಹಾಗೊಮ್ಮೆ ಊಟಕ್ಕೆ ಕುಳಿತರೆ ಅದು ಕನಿಷ್ಟ ಐದು ಗಂಟೆ ಕಾಲ ಮುಂದುವರಿಯುತ್ತಿತ್ತು. ನಮ್ಮ ಅಪ್ಪಾಜಿ ಹಾಗೂ ನಿಸಾರ್ ಅವರು ಇಬ್ಬರೂ ಒಟ್ಟಿಗೆ ಸಮಯ ಕಳೆಯುವುದೆಂದರೆ ಬಲು ಇಷ್ಟವಾಗಿತ್ತು.ಅವರು ಪರಸ್ಪರರ ಮನೆಗಳಿಗೆ ಡ್ರಾಪ್ ಕೊಟ್ಟುಕೊಳ್ಳುತ್ತಿದ್ದರು. ಗೇಟ್‌ನಲ್ಲಿ ನಿಂತು ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಬಿರಿಯಾನಿಯನ್ನು ಇಬ್ಬರೂ ಪ್ರಧಾನವಾಗಿ ಹಂಚಿಕೊಳ್ಳುತ್ತಿದ್ದರು.

Story image

ಅಪ್ಪಾಜಿ ಸಾವಿನ ನಂತರ ನಿಸಾರ್ ಅವರ ಜನ್ಮ ದಿನಾಚರಣೆಗೆ ಹಾಜರಾಗುವುದನ್ನು ಖಾಯಂ ಆಗಿ ಮಾಡಿಕೊಂಡಿದ್ದರು. ಅವರು ಬಂದಾಗಲೆಲ್ಲಾ ನ್ನ ತಂದೆಯ ಬಗ್ಗೆ ನೆನಪುಗಳನ್ನು ಪುನರ್ ಮನನ ಮಾಡಿಕೊಳ್ಳುತ್ತಿದ್ದರು.ಅವರನ್ನು ನೋಡಿದಾಗಲೆಲ್ಲಾ ನನ್ನ ತಂದೆಯೇ ನೆನಪಾಗುತ್ತಿದ್ದರು.  ಇಬ್ಬರ ನಡುವಿನ ಸಂಬಂಧ ಬಹಳ ಗಟ್ಟಿಯಾಗಿತ್ತು. ಇಬ್ಬರೂ ತಾವೇನು ಹೇಳಿದ್ದೇವೆಯೋ ಅದೇ ಆಗಿದ್ದರು. ಏನಾಗಿದ್ದರೋ ಅದನ್ನೇ ಹೇಳುತ್ತಿದ್ದರು. ರಾಜ್‌ಕುಮಾರ್ ಒಂದು ಸಮುದಾಯವನ್ನು ಹೇಗೆ ಪ್ರತಿನಿಧಿಸಿರಲಿಲ್ಲವೋ ನಿಸಾರ್ ಸಹ ತಮ್ಮ ಬರವಣಿಗೆಯ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸಿದ್ದವರು.  ಇಬ್ಬರು ಶ್ರೇಷ್ಠ ವ್ಯಕ್ತಿಗಳು ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.