ಸಿನಿಮಾ ಸುದ್ದಿ

 'ರೆಮೋ' ಹಾಡಿಗಾಗಿ ತಯಾರಾಯ್ತು ಪ್ರಸಿದ್ದ ಹಿನ್ನೆಲೆ ಗಾಯಕರ ತಂಡ 

ಗೂಗ್ಲಿ ನಿರ್ದೇಶಕ ಪವನ್ ಒಡೆಯರ್ ತಮ್ಮ ಮುಂಬರುವ ಚಿತ್ರ ರೆಮೋ ಶೂಟಿಂಗ್ ಅನ್ನು ಬಹುತೇಕ ಪೂರ್ಣಗೊಳಿಸಿದ್ದು ಕೇವಲ ಎರಡು ಹಾಡುಗಳ ಹಾಗೂ ಒಂದು ಫೈಟ್ ದೃಶ್ಯವು ಮಾತ್ರ ಬಾಕಿ ಇದೆ. ಇಶಾನ್ ಮತ್ತು ಆಶಿಕಾ ರಂಗನಾಥ್ ಈ ರೆಮೋ ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ

 'ರೆಮೋ' ಹಾಡಿಗಾಗಿ ತಯಾರಾಯ್ತು ಪ್ರಸಿದ್ದ ಹಿನ್ನೆಲೆ ಗಾಯಕರ ತಂಡ 
'ರೆಮೋ' ಹಾಡಿಗಾಗಿ ತಯಾರಾಯ್ತು ಪ್ರಸಿದ್ದ ಹಿನ್ನೆಲೆ ಗಾಯಕರ ತಂಡ
Published On :

ಗೂಗ್ಲಿ ನಿರ್ದೇಶಕ ಪವನ್ ಒಡೆಯರ್ ತಮ್ಮ ಮುಂಬರುವ ಚಿತ್ರ ರೆಮೋ ಶೂಟಿಂಗ್ ಅನ್ನು  ಬಹುತೇಕ ಪೂರ್ಣಗೊಳಿಸಿದ್ದು ಕೇವಲ ಎರಡು ಹಾಡುಗಳ ಹಾಗೂ ಒಂದು ಫೈಟ್ ದೃಶ್ಯವು ಮಾತ್ರ ಬಾಕಿ ಇದೆ.  ಇಶಾನ್ ಮತ್ತು ಆಶಿಕಾ ರಂಗನಾಥ್ ಈ ರೆಮೋ ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಲಾಕ್‌ಡೌನ್‌ಗೆ ಮುನ್ನ  ತಂಡವು ಡಬ್ಬಿಂಗ್ ಮತ್ತು ಎಡಿಟಿಂಗ್ ಅನ್ನು  ಪೂರ್ಣಗೊಳಿಸಿತ್ತು, ಮತ್ತು ನಿರ್ದೇಶಕರು ಮನೆಯಲ್ಲಿ ಫೈನಲ್ ಟಚ್ ಸಹ ನೀಡಿದ್ದಾರೆ.ದೇಶವು ಶೀಘ್ರದಲ್ಲೇ ಕೋವಿಡ್ ಮಹಾಮಾರಿಯಿಂದ ಮುಕ್ತವಾಗಲಿದ್ದು ಶೂಟಿಂಗ್ ಪೂರ್ಣಗೊಳಿಸಲು ಹಿಮಾಲಯ ಮತ್ತು ರಾಜಸ್ಥಾನಕ್ಕೆ ತೆರಳುವ ಯೋಜನೆಯನ್ನು ನಿರ್ದೇಶಕ ಹಾಕಿಕೊಂಡಿದ್ದಾರೆ.

"ನಮಗೆ ಪರ್ಯಾಯ ವ್ಯವಸ್ಥೆ ಇಲ್ಲ, ಮತ್ತು ನಾವು ರಾಜ್ಯದ ಹೊರಗೆ ಪ್ರಯಾಣಿಸಲು ಅನುಮತಿ ಸಿಕ್ಕುವವರೆಗೆ ಕಾಯಬೇಕಿದೆ. " ಎಂದು ಅವರು  ಹೇಳಿದ್ದಾರೆ.ಚಿತ್ರದ ಇತ್ತೀಚಿನ ಸ್ಟಿಲ್‌ಗಳನ್ನು  ಹಂಚಿಕೊಂಡ ಪವನ್ ಒಡೆಯರ್ , ಇದನ್ನು ಬ್ಯಾಂಕಾಕ್, ಮಲೇಷ್ಯಾದಂತಹ ವಿವಿಧದೇಶಗಳಲ್ಲಿ ಶೂಟಿಂಗ್ ಮಾಡಲಾಗಿದೆ, ದಕ್ಷಿಣ ಆಫ್ರಿಕಾ ಮತ್ತು ಸಿಂಗಾಪುರ.ದಲ್ಲಿ ಸಹ ಚಿತ್ರೀಕರಣವಾಗಿದೆ. ಇದು  ಪ್ರಸ್ತುತ ಪೀಳಿಗೆಗೆ ಸೂಕ್ತವಾದ ಪ್ರೇಮಕಥೆ. ಎಂದು ರೆಮೋ ಬಗೆಗೆ ಅವರು ಭರವಸೆಯೊಂದಿಗೆ ಮಾತನಾಡಿದ್ದಾರೆ.

 ಏಳು ಹಾಡುಗಳನ್ನು ಹೊಂದಿರುವ ರೆಮೋ ಸಂಗೀತ ಪ್ರಧಾನವಾಗಿರುವ ಚಿತ್ರವೂ ಸಹ ಆಗಿದೆ.  ನಾನು ಮೊದಲ ಬಾರಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರೊಂದಿಗೆ ಕೈಜೋಡಿಸಿದ್ದೇನೆ, ಮತ್ತು ನಾವಿಬ್ಬರೂ ಒಟ್ಟಾಗಿ ಉತ್ತಮ ಸಂಗೀತವನ್ನು ನೀಡುತ್ತಿದ್ದೇವೆ. ಅರಿಜಿತ್ ಸಿಂಗ್, ಶ್ರೇಯಾ ಘೋಶಾಲ್, ಅರ್ಮಾನ್ ಮಲಿಕ್ ಮುಂತಾದ ಪ್ರಸಿದ್ಧ ಗಾಯಕರನ್ನು ಕರೆಸಿ ಹಾಡು ಹೇಳಿಸುವ ಯೋಜನೆ ನಿರ್ದೇಶಕರಲ್ಲಿದೆ. . ಸಂಜಿತ್ ಹೆಗ್ಡೆ, ಇಂದೂ ನಾಗರಾಜ್ ಅವರು ರೇಮೋದಲ್ಲಿನ ವಿವಿಧ ಹಾಡುಗಳಿಗೆ ಧ್ವನಿ ನೀಡಲಿದ್ದಾರೆ.

ಈ ಚಿತ್ರದಲ್ಲಿ ಇಶಾನ್ ಗಾಯಕ ಮತ್ತು ಗಿಟಾರ್ ವಾದಕನಾಗಿ ಕಾಣಿಸಿಕೊಂಡಿದ್ದಾರೆ.  ತನ್ನ ಪಾತ್ರಕ್ಕಾಗಿ ಇಮೇಜ್ ಮೇಕ್ ಓವರ್ ಪಡೆದಿರುವ ನಟನ ಜತೆ ಜತೆಗೆ ಹಿರಿಯ ನಟರಾದ ಮಧು ಮತ್ತು ಶರತ್‌ಕುಮಾರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ

ಏತನ್ಮಧ್ಯೆ ಪವನ್ ಒಡೆಯರ್ ತಾವು ಮುಂಬರುವ ದಿನಗಳಲ್ಲಿ ರೆಮೋ ನಿರ್ಮಾಪಕ ಸಿಆರ್ ಮನೋಹರ್ ಅವರೊಂದಿಗೆ ಒಂದು ಚಿತ್ರವನ್ನು ಮಾಡಲಿದ್ದಾರೆ. ಅಷ್ಟೇ ಅಲ್ಲದೆ ಇಶಾನ್  ಅವರಿಗಾಗಿ ಸಹ ಇನ್ನೊಂದು ಚಿತ್ರ ನಿರ್ದೇಶನ ಮಾಡುತ್ತಿರುವುದಾಗಿ ಸಹ ಅವರು ಒಪ್ಪಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.