ಭಾರತ ಲಾಕ್ಡೌನ್ ಮನೇಲಿ ಕುಳಿತು ಯೂಟ್ಯೂಬ್ ನಲ್ಲೇ 'ರಾಮ ರಾಮ ರೇ' ಚಿತ್ರ ವೀಕ್ಷಿಸಿ!
ಲಾಕ್ಡೌನ್ ಆಗಿರುವ ಕಾರಣ ಮನೇನಲ್ಲೇ ಕುಳಿತು ಉತ್ತಮ ಚಲನಚಿತ್ರಗಳನ್ನು ನೋಡಲು ಬಯಸುವ ಜನರಿಗೆ, ನಿರ್ದೇಶಕ ಡಿ ಸತ್ಯ ಪ್ರಕಾಶ್ ಉತ್ತಮ ಗಿಫ್ಟ್ ನೀಡಿದ್ದಾರೆ. ತಮ್ಮ ನಿರ್ದೇಶನದ " ರಾಮ ರಾಮ ರೇ" ಚಿತ್ರವನ್ನು ಅವರೀಗ ಯೂಟ್ಯೂಬ್ ಗೆ ಬಿಟ್ಟಿದ್ದು ವೀಕ್ಷಕರು ಯೂಟ್ಯೂಬ್ ನಲ್ಲಿ ಚಿತ್ರ ವೀಕ್ಷಿಸಲು ಅವಕಾಶ ಕಲ್ಪಿಸಿದ್ದಾರೆ.

ಲಾಕ್ಡೌನ್ ಆಗಿರುವ ಕಾರಣ ಮನೇನಲ್ಲೇ ಕುಳಿತು ಉತ್ತಮ ಚಲನಚಿತ್ರಗಳನ್ನು ನೋಡಲು ಬಯಸುವ ಜನರಿಗೆ, ನಿರ್ದೇಶಕ ಡಿ ಸತ್ಯ ಪ್ರಕಾಶ್ ಉತ್ತಮ ಗಿಫ್ಟ್ ನೀಡಿದ್ದಾರೆ. ತಮ್ಮ ನಿರ್ದೇಶನದ " ರಾಮ ರಾಮ ರೇ" ಚಿತ್ರವನ್ನು ಅವರೀಗ ಯೂಟ್ಯೂಬ್ ಗೆ ಬಿಟ್ಟಿದ್ದು ವೀಕ್ಷಕರು ಯೂಟ್ಯೂಬ್ ನಲ್ಲಿ ಚಿತ್ರ ವೀಕ್ಷಿಸಲು ಅವಕಾಶ ಕಲ್ಪಿಸಿದ್ದಾರೆ.
ನಿರ್ದೇಶಕರ ಚೊಚ್ಚಲ ಚಿತ್ರವಿದಾಗಿದ್ದು ವಿಮರ್ಶಕರಿಂದ ಅಪಾರ ಮೆಚ್ಚುಗೆ ಗಳಿಸಿತ್ತು.ಇದೀಗ ಚಿತ್ರ ಯೂಟ್ಯೂಬ್ ಚಾನಲ್ ಸತ್ಯಪಿಕ್ಚರ್ಸ್ ನಲ್ಲಿ ಬಿಡುಗಡೆಯಾಗಿದ್ದು ಸಾಕಷ್ಟು ಗಮನ ಸೆಳೆಯುತ್ತಿದೆ.
ಈ ಚಿತ್ರವನ್ನು ಅಕ್ಟೋಬರ್ 2016 ರಲ್ಲಿ ಕನ್ನಡ ಕಲರ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಯಿತು. ಇದು ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಖೈದಿಯೊಬ್ಬನ ನಿವೃತ್ತ ಪೊಲೀಸ್ ಅಧಿಕಾರಿಯೊಂದಿಗಿನ ಮುಖಾಮುಖಿಯನ್ನು ಹೇಳುತ್ತದೆ. ಚಿತ್ರದಲ್ಲಿ ಕೆ ಜಯರಾಮ್, ನಟರಾಜ್ ಮತ್ತು ಧರಮ್ಮಣ್ಣ ಕದೂರು ಹಾಗೂ ಇಅತರರು ಅಭಿನಯಿಸಿದ್ದಾರೆ. ಇದನ್ನು ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದು 2018 ರಲ್ಲಿ ತೆಲುಗಿನಲ್ಲಿ ರಿಮೇಕ್ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


