ಸಿನಿಮಾ ಸುದ್ದಿ

ಗುಟ್ಟಾಗಿ ಹಸೆಮಣೆ ಏರಿದ್ರಾ 'ಹೆಬ್ಬುಲಿ' ನಟಿ ಅಮಲಾ ಪೌಲ್?

ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ಕಿಚ್ಚ ಸುದೀಪ್ ಅಭಿನಯದ "ಹೆಬ್ಬುಲಿ"ಯಲ್ಲಿ ನಟಿಸಿದ್ದ ಬಹುಭಾಷಾ ನಟಿ ಅಮಲಾ ಪೌಲ್ ಗುಟ್ಟಾಗಿ ಎರಡನೇ ಮದುವೆಯಾಗಿದ್ದಾರೆ! ಕೆಲವು ವಾರಗಳ ಹಿಂದೆ, ಅಮಲಾ ಪೌಲ್ ತಮ್ಮ ಗೆಳೆಯ ಭವನಿಂದರ್ ಸಿಂಗ್ ಅವರೊಡನೆ ವಿವಾಹವಾಗಿದ್ದು ಈ ವಿವಾಹ ಕಾರ್ಯಕ್ರಮದ ಚಿತ್ರಗಳು ಇದೀಗ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿವೆ.

ಗುಟ್ಟಾಗಿ ಹಸೆಮಣೆ ಏರಿದ್ರಾ 'ಹೆಬ್ಬುಲಿ' ನಟಿ ಅಮಲಾ ಪೌಲ್?
ಗುಟ್ತಾಗಿ ಹಸೆಮಣೆ ಏರಿದ್ರಾ 'ಹೆಬ್ಬುಲಿ' ನಟಿ ಅಮಲಾ ಪೌಲ್?
Published On :

ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ಕಿಚ್ಚ ಸುದೀಪ್ ಅಭಿನಯದ "ಹೆಬ್ಬುಲಿ"ಯಲ್ಲಿ ನಟಿಸಿದ್ದ ಬಹುಭಾಷಾ ನಟಿ ಅಮಲಾ ಪೌಲ್ ಗುಟ್ಟಾಗಿ ಎರಡನೇ ಮದುವೆಯಾಗಿದ್ದಾರೆ! ಕೆಲವು ವಾರಗಳ ಹಿಂದೆ, ಅಮಲಾ ಪೌಲ್ ತಮ್ಮ ಗೆಳೆಯ ಭವನಿಂದರ್ ಸಿಂಗ್  ಅವರೊಡನೆ ವಿವಾಹವಾಗಿದ್ದು ಈ ವಿವಾಹ ಕಾರ್ಯಕ್ರಮದ ಚಿತ್ರಗಳುಇದೀಗ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿವೆ.

Story image

ಭವನಿಂದರ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್‌ ನಲ್ಲಿ ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "Wedding pics #throwback (sic)." ಎಂಬ ಶೀರ್ಷಿಕೆಯಲ್ಲಿ ಅವರು ಮದುವೆ ಚಿತ್ರಗಳನ್ನು ಹಾಕಿಕೊಂಡಿದ್ದು ಅವು ವೈರಲ್ ಆಗುತ್ತಿದ್ದಂತೆ ತಕ್ಷಣ ಅಳಿಸಿ ಹಾಕಿದ್ದಾರೆ. ಆದರೆ ಅವರು ಹಾಗೆ ಅಳಿಸಿ ಹಾಕುವ ವೇಳೆಗೆ ಬಹಳ ತಡವಾಗಿದೆ. ಚಿತ್ರಗಳು ಈಗಾಗಲೇ ವೈರಲ್ ಆಗಿದ್ದವಾಗಿ ಹಲವಾರು ಅಭಿಮಾನಿ ಗಳು ಅವನ್ನು ತಮ್ಮ ಪೇಜ್ ನಲ್ಲಿ ಹಂಚಿಕೊಂಡಿದ್ದರು.

Story image

ಇನ್ನೊಂದೆಡೆ ಇದು ಗುಟ್ಟಾಗಿ ನಡೆದ ಮದುವೆ ಎನ್ನುವುದನ್ನು ನಟಿಯ ಆಪ್ತ ಮೂಲಗಳು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಅಮಲಾ ಪಾಲ್ ಅವರು ಮುಂಬೈ ಮೂಲದ ಗಾಯಕ ಭವನ್ಂದರ್ ಸಿಂಗ್  ಅವರನ್ನು ಈಗ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಲ್ಲದೆ ವರದಿಗಳನ್ನೇ ನಂಬುವುದಾದರೆ ಅವರು ಲಿವಿ-ಇನ್ ರಿಲೇಷನ್ ಸಂಬಂಧವನ್ನು ಹೊಂದಿದ್ದರು.

Story image

2014 ರಲ್ಲಿ ಅಮಲಾ ಚಲನಚಿತ್ರ ನಿರ್ಮಾಪಕ ಎ.ಎಲ್.ವಿಜಯ್ ಅವರನ್ನು ಚೆನ್ನೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿವಾಹವಾಗಿದ್ದರು. ಆದರೆ ಇಬ್ಬರ ನಡುವೆ ಸರಿಪಡಿಸಲಾಗದ ಭಿನ್ನಾಭಿಪ್ರಾಯ ಉದ್ಭವಿಸಿದ್ದ ಕಾರಣ 2017 ರಲ್ಲಿ ವಿಚ್ಚೇದನ ಪಡೆದಿದ್ದರು.

Story image

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.