ಸಿನಿಮಾ ಸುದ್ದಿ

ಕೊರೋನಾ ಎಫೆಕ್ಟ್: ನಮ್ಮನೇಲಿ ವರ್ಕ್ ಫ್ರಂ ಹೋಂ ಜೋರಾಗಿದೆ ಎಂದ ರಿಷಬ್ ಶೆಟ್ಟಿ

ಕೊರೋನಾ ಮಹಾಮಾರಿಯಿಂದ ಇಡೀ ದೇಶ ಭಯಭೀತವಾಗಿದ್ದು ಸ್ಯಾಂಡಲ್ ವುಡ್ ಸಹ ಥಂಡಾ ಆಗಿದೆ ನಟರು, ನಿರ್ಮಾಪಕರು ಶೂಟಿಂಗ್ ಸ್ಥಗಿತಗೊಳಿಸಿ ಮನೆಯಲ್ಲೇ ಉಳಿದಿದ್ದಾರೆ. ಈ ನಡುವೆ ಕನ್ನಡದ ಕ್ರಿಯಾತ್ಮಕ ಚಿತ್ರಕ್ಕೆ ಹೆಸರಾದ ರಿಷಬ್ ಶೆಟ್ಟಿ ತಾವು ಮನೇಲಿ "ವರ್ಕ್ ಫ್ರಂ ಹೋಮ್" ಜೋರಾಗಿ ನಡೆಸುತ್ತಿದ್ದಾರೆ. ತಮ್ಮ ಪುಟ್ಟ ಮಗನೊಡನೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ರಿಷಬ್ ಶೆಟ್

ಕೊರೋನಾ ಎಫೆಕ್ಟ್: ನಮ್ಮನೇಲಿ ವರ್ಕ್ ಫ್ರಂ ಹೋಂ ಜೋರಾಗಿದೆ ಎಂದ ರಿಷಬ್ ಶೆಟ್ಟಿ
ನಮ್ಮನೇಲಿ ವರ್ಕ್ ಫ್ರಂ ಹೋಂ ಜೋರಾಗಿದೆ ಎಂದ ರಿಷಬ್ ಶೆಟ್ಟಿ
Published On :

ಕೊರೋನಾ ಮಹಾಮಾರಿಯಿಂದ ಇಡೀ ದೇಶ ಭಯಭೀತವಾಗಿದ್ದು ಸ್ಯಾಂಡಲ್ ವುಡ್ ಸಹ ಥಂಡಾ ಆಗಿದೆ ನಟರು, ನಿರ್ಮಾಪಕರು ಶೂಟಿಂಗ್ ಸ್ಥಗಿತಗೊಳಿಸಿ ಮನೆಯಲ್ಲೇ ಉಳಿದಿದ್ದಾರೆ. ಈ ನಡುವೆ ಕನ್ನಡದ ಕ್ರಿಯಾತ್ಮಕ ಚಿತ್ರಕ್ಕೆ ಹೆಸರಾದ ರಿಷಬ್ ಶೆಟ್ಟಿ ತಾವು ಮನೇಲಿ "ವರ್ಕ್ ಫ್ರಂ ಹೋಮ್" ಜೋರಾಗಿ ನಡೆಸುತ್ತಿದ್ದಾರೆ. ತಮ್ಮ ಪುಟ್ಟ ಮಗನೊಡನೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ರಿಷಬ್ ಶೆಟ್ಟಿ ಟ್ವೀಟ್ ಮಾಡಿ "ವರ್ಕ್ ಫ್ರಂ ಹೋಂ" ಹೇಗೆ ನಡೀತಿದೆ ಎಂದು ಎಲ್ಲರಿಗೆ ಹೇಳಿಕೊಂಡಿದ್ದಾರೆ.

ರಿಷಬ್ ತಮ್ಮ ಮಗ ರಣ್ವಿತ್‍ಗೆ ಸ್ನಾನಕ್ಕಾಗಿ ಎಣ್ಣೆ ಹಚುತ್ತಿರುವ ಚಿತ್ರವೊಂದನ್ನು ಟ್ವೀಟ್ ಮಾಡಿಕೊಂಡಿದ್ದು "ಊರೂರೇ ಖಾಲಿಯಾಗಿದೆ, ಆಫೀಸ್ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲಾ ಆತಂಕಗಳನ್ನ ಹಿಂದೆ ಬಿಟ್ಟು ಹುಟ್ಟಿದೂರಲ್ಲಿ, ನಾನು ಬೆಳೆದಿದ್ ಮನೇಲಿ, ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ! ಒಟ್ಟಾರೆ ಎಲ್ಲರ ತರ ನಮ್ದೂ ‘ವರ್ಕ್ ಫ್ರಂ ಹೋಂ’ ಜೋರಾಗ್ ನೆಡಿತಿದೆ. #Ranvitshetty" ಎಂದು ಬರೆದುಕೊಂಡಿದ್ದಾರೆ.

Story image

ಈ ಟ್ವೀಟ್ ಸಾಮಾಜಿಕ ಮಾದ್ಯಮ ವಲಯದಲ್ಲಿ ಸದ್ದು ಮಾಡಿದ್ದು ಅಪ್ಪ-ಮಗನ ಈ ಪ್ರೀತಿಯನ್ನು ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ.ಹಲವರು ಹಲವು ಬಗೆಯಲ್ಲಿ ಪ್ರತಿಕ್ರಯಿಸಿರುವ ಈ ಟ್ವೀಟ್ ಗೆ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಕೂಡ ಕವನದ ಮೂಲಕ ಪ್ರತಿಕ್ರಯಿಸಿದ್ದಾರೆ.

‘ರಿಷಬ್ ಇದು ನಿನಗಾಗಿ, ನನ್ನ ಮುಗ್ಧತೆಯ ಅರಿವು ನನಗಿಲ್ಲ. ನನ್ನ ಹೆತ್ತವನೊಮ್ಮೆ ನೋಡು, ಅವನ ಮುಗ್ಧತೆಯಲ್ಲವೆ ನನಗೆಲ್ಲ’  ಎಂದು ರಕ್ಷಿತ್ ಶೆಟ್ಟಿ ಕವಿತೆಯನ್ನು ಬರೆದು ರಿಷಬ್ ಫೋಟೋವನ್ನು ರೀಟ್ವೀಟ್ ಮಾಡಿದ್ದಾರೆ.

ಒಟ್ತಾರೆ ಸದಾ ಸಿನಿಮಾ, ಶೂಟಿಂಗ್ ನಲ್ಲಿ ಬ್ಯುಸಿಯಾಗಿರುತ್ತಿದ್ದ ರಿಷಬ್ ಶೆಟ್ಟಿ ಕೊರೋನಾ ಕಾರಣದಿಂದ ಇದೆಲ್ಲದರಿಂದ ತುಸು ಬಿಡುವಾಗಿದ್ದು ಮನೆಯಲ್ಲಿ ಖುಷಿ ಖುಷಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.