ಸಿನಿಮಾ ಸುದ್ದಿ

ಒಳ್ಳೆ ಹುಡ್ಗ ಪ್ರಥಮ್ ಅಭಿನಯದ 'ನಟ ಭಯಂಕರ'ನಿಗೆ ಸೆಲೆಬ್ರಿಟಿ ಗಳ ಸಾಥ್

ಬಿಗ್ ಬಾಸ್ ಕನ್ನಡ ಸೀಸನ್ 4' ವಿಜೇತ ಒಳ್ಳೆ ಹುಡುಗ ಪ್ರಥಮ್ ಯಾವಾಗಲೂ ಒಂದಲ್ಲ ಒಂದು ವಿಚಾರಗಳಿಗೆ ಸದ್ದು-ಸುದ್ದಿ ಮಾಡುತ್ತಲೇ ಇರುತ್ತಾರೆ. ಸದ್ಯ ಪ್ರಥಮ್ ನಟನೆಯ ನಟ ಭಯಂಕರ ಸಿನಿಮಾಗೆ ಇಡೀ ಸ್ಯಾಂಡಲ್ ವುಡ್ ಬೆಂಬಲ ನೀಡುತ್ತಿದೆ.

ಒಳ್ಳೆ ಹುಡ್ಗ ಪ್ರಥಮ್ ಅಭಿನಯದ 'ನಟ ಭಯಂಕರ'ನಿಗೆ ಸೆಲೆಬ್ರಿಟಿ ಗಳ ಸಾಥ್
ನಟ ಭಯಂಕರ ಸಿನಿಮಾ ಸ್ಟಿಲ್
Published On :

ಬಿಗ್ ಬಾಸ್ ಕನ್ನಡ ಸೀಸನ್ 4' ವಿಜೇತ ಒಳ್ಳೆ ಹುಡುಗ ಪ್ರಥಮ್ ಯಾವಾಗಲೂ ಒಂದಲ್ಲ ಒಂದು ವಿಚಾರಗಳಿಗೆ ಸದ್ದು-ಸುದ್ದಿ ಮಾಡುತ್ತಲೇ ಇರುತ್ತಾರೆ.  ಸದ್ಯ ಪ್ರಥಮ್ ನಟನೆಯ ನಟ ಭಯಂಕರ ಸಿನಿಮಾಗೆ  ಇಡೀ ಸ್ಯಾಂಡಲ್ ವುಡ್ ಬೆಂಬಲ ನೀಡುತ್ತಿದೆ.

ಹಿರಿಯ ರಾಜಕಾರಣಿ  ಎಲ್ ಕೆ ಅಡ್ವಾಣಿ ತಮ್ಮ ಸಿನಿಮಾಗೆ ಕ್ಲಾಪ್ ಮಾಡಿದ್ದರು ಎಂದು ಪ್ರಥಮ್ ಹೇಳಿದ್ದರು.  ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು, ನನ್ನ ಸ್ನೇಹಿತರು ನನಗೆ ಸಹಾಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ತಮ್ಮ 14 ವರ್ಷಗಳ ಸಿನಿಮಾ ವೃತ್ತಿ ಜೀವನದಲ್ಲಿ ಎಂದಿಗೂ ಬೇರೋಬ್ಬ ನಾಯಕನ ಸಿನಿಮಾ ಶೂಟಿಂಗ್ ಸೆಟ್ ಗೆ ಬೇಟಿ ನೀಡದ ಗೋಲ್ಡನ್ ಸ್ಚಾರ್ ಗಣೇಶ್, ನಟ ಭಯಂಕರ ಸೆಟ್ ಗೆ ತೆರಳಿದ್ದರು.  ಅಭಿಷೇಕ್ ಅಂಬರೀಷ್  2 ದೃಶ್ಯಗಳ ನಿರ್ದೇಶನ ಮಾಡಿದ್ದಾರೆ.  ಇದೇ ಮೊದಲ ಬಾರಿಗೆ ಉಪೇಂದ್ರ ಟೈಟಲ್ ಟ್ರಾಕ್ ಹಾಡಿದ್ದಾರೆ. 

ಇನ್ನೂ 25 ವರ್ಷಗಳ ಸಿನಿಮಾ ಜೀವನಕ್ಕೆ ಕಾಲಿಡುತ್ತಿರುವ  ಸಾಯಿ ಕುಮಾರ್, ನಟ ಭಯಂಕರ ಚಿತ್ರದಲ್ಲಿ ಅಭಿನಯಿಸಿದ್ದಾರೆ.  ರಕ್ಷಿತ್ ಶೆಟ್ಟಿ ಸಿನಿಮಾ ಹಾಡು ರಿಲೀಸ್ ಮಾಡಿದ್ದಾರೆ,   ಎಲ್ಲ ನಟರು ನನಗೆ ಬೆಂಬಲವಾಗಿ ನಿಂತಿದ್ದಾರೆ.

ಅಷ್ಟೇ ಅಲ್ಲದೆ ಈಗ ಧ್ರುವ ಸರ್ಜಾ ಈ ಚಿತ್ರಕ್ಕೆ ಹಿನ್ನಲೆ ಧ್ವನಿ ನೀಡಿದ್ದಾರೆ. ಇದರಲ್ಲೂ ಕೂಡ ಒಂದು ಒಳ್ಳೆಯ ಉದ್ದೇಶವಿದೆ ಎಂಬುದನ್ನು ನೆನಪಿನಲ್ಲಿಡಲೇಬೇಕು.

ಕುರಿ ಪ್ರತಾಪ್, ಸಾಯಿಕುಮಾರ್, ಲೀಲಾವತಿ,ಶೋಭರಾಜ್, ಅನುಪಮಾ ದೇವಗುಡಿ, ಸುಷ್ಮಿತಾ ಜೋಶಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.