'ಕಿರುತೆರೆಗೆ ಬಂದಿದ್ದು ಆಕಸ್ಮಿಕ, ಸಿನೆಮಾ ಹೀರೋ ಆಗಬೇಕೆಂದು ಕನಸು ಕಂಡವನು ನಾನು': ರಕ್ಷ್
ರುತೆರೆಯಿಂದ ಬೆಳ್ಳಿತೆರೆಗೆ ಬಂದ ನಟರಲ್ಲಿ ಮತ್ತೊಬ್ಬ ಸೇರ್ಪಡೆ ರಕ್ಷ್. ಪುಟ್ಟಗೌರಿ ಮದುವೆ, ಗಟ್ಟಿಮೇಳ ಧಾರವಾಹಿಗಳ ಮೂಲಕ ಜನಪ್ರಿಯರಾದ ನಟ ರಕ್ಷ್ ಇದೀಗ ನರಗುಂದ ಬಂಡಾಯ ಮೂಲಕ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ನಟರಲ್ಲಿ ಮತ್ತೊಬ್ಬ ಸೇರ್ಪಡೆ ರಕ್ಷ್. ಪುಟ್ಟಗೌರಿ ಮದುವೆ, ಗಟ್ಟಿಮೇಳ ಧಾರವಾಹಿಗಳ ಮೂಲಕ ಜನಪ್ರಿಯರಾದ ನಟ ರಕ್ಷ್ ಇದೀಗ ನರಗುಂದ ಬಂಡಾಯ ಮೂಲಕ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ನಟನೆಗೆ ಕಾಲಿಡುವಾಗಲೇ ಸಿನಿಮಾ ಹೀರೋ ಆಗಬೇಕೆಂದು ಆಸೆಪಟ್ಟವನು ನಾನು. ಧಾರವಾಹಿ ನನಗೆ ಇಷ್ಟವಿರಲಿಲ್ಲ, ಆಕಸ್ಮಿಕವಾಗಿ ಬಂದು ಸೇರಿದೆ, ಹೆಸರು ತಂದುಕೊಟ್ಟಿತು. ಸಿನಿಮಾಕ್ಕೆ ತಡವಾಗಿ ಎಂಟ್ರಿ ಕೊಟ್ಟೆ ಎನ್ನುತ್ತಾರೆ ರಕ್ಷ್.
ನರಗುಂದ ಬಂಡಾಯ ಚಿತ್ರ ನಾಳೆ ತೆರೆಗೆ ಬರುತ್ತಿದೆ. ''ನನ್ನ ಕೈಯಲ್ಲಿ 6 ಚಿತ್ರಗಳಿವೆ. ಆದರೆ ಮೂರು ಚಿತ್ರಗಳು ಅರ್ಧಕ್ಕೆ ನಿಂತುಹೋಗಿವೆ. ಇನ್ನು ಮೂರು ಬಿಡುಗಡೆಯಾಗಬೇಕಿದೆ. ರಂಗಭೂಮಿ ಕಲಾವಿದನಾಗಿ ನಟನೆಗೆ ಪಾದಾರ್ಪಣೆ ಮಾಡಿ ಪ್ರತಿಕ್ರಿಯೆ ತಂಡದಲ್ಲಿ 9 ವರ್ಷ ಕೆಲಸ ಮಾಡಿ ಧಾರವಾಹಿ ಕ್ಷೇತ್ರಕ್ಕೆ ಆಕಸ್ಮಿಕವಾಗಿ ಹೋಗಿ ನಂತರ ಹೀರೋ ಆಗಬೇಕೆಂಬ ಕನಸು ನರಗುಂದ ಬಂಡಾಯ ಮೂಲಕ ಕನಸಾಗಿದೆ'' ಎಂದರು.
ರಂಗಭೂಮಿಯಲ್ಲಿ ರಕ್ಷ್ ಅವರ ಅಭಿನಯ ನೋಡಿ ರಾಮ್ಜಿಯವರ ಗಮನ ಸೆಳೆದು ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಅವಕಾಶ ಸಿಕ್ಕಿತಂತೆ.
ನಾಗೇಂದ್ರ ಮಾಗಡಿ ನಿರ್ದೇಶನದ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಜೀವನಾಧಾರಿತ 1980ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ಮೊದಲ ರೈತರ ದಂಗೆಯನ್ನಾಧರಿಸಿ ಮಾಡಿದ ಚಿತ್ರ ನರಗುಂದ ಬಂಡಾಯವಾಗಿದೆ. ಹುಬ್ಬಳ್ಳಿಯಿಂದ 80 ಕಿಲೋ ಮೀಟರ್ ದೂರದಲ್ಲಿರುವ ನರಗುಂದ ರೈತರ ಕ್ರಾಂತಿಕಾರಿ ಹೋರಾಟಗಳಿಗೆ ಜನಪ್ರಿಯ.
ನರಗುಂದ ಬಂಡಾಯ ಚಿತ್ರಕ್ಕೆ ಶೇಖರ್ ಯಲುವಿಗಿ ಮತ್ತು ಸಿದ್ದೇಶ್ ವಿರಾಠಮಠ ಬಂಡವಾಳ ಹಾಕಿದ್ದಾರೆ. ರಕ್ಷ್ ಗೆ ನಾಯಕಿಯಾಗಿ ಶುಭಾ ಪೂಂಜಾ ನಟಿಸಿದ್ದಾರೆ. ಧರ್ಮ ವಿಶ್ ಅವರ ಸಂಗೀತ ಮತ್ತು ಛಾಯಾಗ್ರಹಣ ಆರ್ ಗಿರಿಯವರದ್ದಿದೆ. ಸಾಧು ಕೋಕಿಲಾ, ಅವಿನಾಶ್, ಭವ್ಯ, ರವಿ ಚೇತನ ಮತ್ತು ನೀನಾಸಂ ಅಶ್ವಥ್ ಪ್ರಮುಖ ತಾರಾಗಣದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


