ಸಿನಿಮಾ ಸುದ್ದಿ

'ಜೋಶ್' ನಟಿ ಶಾಮ್ನಾ ಬ್ಲ್ಯಾಕ್ ಮೇಲ್ ನಂತರ ಮೋಸ ಹೋದ ಇತರೆ ನಟಿಯರಿಂದಲೂ ದೂರು, ತನಿಖೆಗೆ ಎಸ್ಐಟಿ ರಚನೆ

ಪೂರ್ಣ ಹೆಸರಿನ ಮೂಲಕ ಪ್ರಖ್ಯಾತಿ ಗಳಿಸಿರುವ ಬಹುಭಾಷ ನಟಿ ಹಾಗೂ ಕನ್ನಡದ ಜೋಶ್ ಚಿತ್ರದ ನಾಯಕಿ ಶಾಮ್ನಾ ಕಾಸಿಮ್ ಅವರಿಗೆ ಮದುವೆ ಆಗುವುದಾಗಿ ನಂಬಿಸಿ ಹಣವಸೂಲಿ ಮಾಡಲು ಮುಂದಾಗಿದ್ದ ನಾಲ್ವರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

'ಜೋಶ್' ನಟಿ ಶಾಮ್ನಾ ಬ್ಲ್ಯಾಕ್ ಮೇಲ್ ನಂತರ ಮೋಸ ಹೋದ ಇತರೆ ನಟಿಯರಿಂದಲೂ ದೂರು, ತನಿಖೆಗೆ ಎಸ್ಐಟಿ ರಚನೆ
ಶಾಮ್ನಾ ಕಾಸಿಂ
Published On :

ತಿರುವನಂತಪುರಂ: ಪೂರ್ಣ ಹೆಸರಿನ ಮೂಲಕ ಪ್ರಖ್ಯಾತಿ ಗಳಿಸಿರುವ ಬಹುಭಾಷ ನಟಿ ಹಾಗೂ ಕನ್ನಡದ ಜೋಶ್ ಚಿತ್ರದ ನಾಯಕಿ ಶಾಮ್ನಾ ಕಾಸಿಮ್ ಅವರಿಗೆ ಮದುವೆ ಆಗುವುದಾಗಿ ನಂಬಿಸಿ ಹಣವಸೂಲಿ ಮಾಡಲು ಮುಂದಾಗಿದ್ದ ನಾಲ್ವರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ ತಿಂಗಳಲ್ಲಿ ನಟಿಯನ್ನು ಸಂಪರ್ಕಿಸಿದ ಗ್ಯಾಂಗ್, ಕೋಳಿಕೋಡ್ ಮೂಲದ ದುಬೈನಲ್ಲಿ ಬಿಸಿನೆಸ್ ನಡೆಸುತ್ತಿರುವ ದೊಡ್ಡ ಬಿಸಿನೆಸ್ ಮ್ಯಾನ್ ಎಂದು ನಂಬಿಸಿ, ಕೇಳಿದ್ದಷ್ಟು ಹಣ ಕೊಡದಿದ್ದಲ್ಲಿ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ.

ನಟಿ ಕಾಸಿಮ್‍ನ ತಂದೆ ಪೊಲೀಸರಿಗೆ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಕೆಲವು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ನಟಿಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದರು. ನಾಲ್ವರು ಆರೋಪಿಗಳು ತ್ರಿಶೂರ್ ಮೂಲದವರಾಗಿದ್ದು, ನಟಿಗೆ ಮದುವೆ ಆಗುವುದಾಗಿ ನಂಬಿಸಿ ಹಣ ಸೂಲಿಗೆ ಮಾಡಲು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶಾಮ್ನಾ ನಂತರ ಹಲವು ನಟ, ನಟಿಯರು ಹಾಗೂ ಮಾಡೆಲ್ ಗಳು ಬ್ಲ್ಯಾಕ್ ಮೇಲ್ ಗೆ ಒಳಗಾಗಿ ಮೋಸ ಹೋಗಿರುವುದಾಗಿ ಪೊಲೀಸರಿಗೂ ದೂರು ನೀಡಿದ್ದು, ಪೊಲೀಸರು ಈ ಎಲ್ಲಾ ದೂರುಗಳ ತನಿಖೆಗಾಗಿ ಎಸ್ಐಟಿ ರಚಿಸಿದ್ದಾರೆ.

ದುಷ್ಕರ್ಮಿಗಳು ಕೊಚ್ಚಿ ಮೂಲದ ಧಾರಾವಾಹಿ ನಟಿಯೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ಮತ್ತು ಚಿನ್ನದ ಆಭರಣಗಳನ್ನು ಸುಲಿಗೆ ಮಾಡಿದ್ದಾರೆ ಮತ್ತು ಇದೇ ರೀತಿಯ ಆಲಪ್ಪುಳ ಮೂಲದ ಮಾಡೆಲ್ ಒಬ್ಬರು ಮೋಸ ಹೋಗಿದ್ದು, ಇಬ್ಬರೂ ಪೊಲೀಸರಿಗೆ ದೂರು ನೀಡಿದ್ದಾರೆ.

ಶಾಮ್ನಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು, ನನಗೆ ಮತ್ತು ಇತರ ಏಳು ಹುಡುಗಿಯರಿಗೆ ಚಿನ್ನ ಕಳ್ಳಸಾಗಣೆ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದ್ದರು ಎಂದು ಮಾಡೆಲ್ ಆರೋಪಿಸಿದ್ದಾರೆ.

ಕೊಚ್ಚಿ ಮೂಲದ ನಟಿ ಹಣ ಮತ್ತು ಲಕ್ಷಾಂತರ ರೂಪಾಯಿ ಚಿನ್ನದ ಆಭರಣಗಳನ್ನು ಕಳೆದುಕೊಂಡರೆ, ಇನ್ನೊಬ್ಬರು ಹಣವನ್ನು ಮಾತ್ರ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಇಬ್ಬರು ಮಹಿಳೆಯರು ನೀಡಿದ ದೂರುಗಳ ಮೇರೆಗೆ ಪೊಲೀಸರು ಹೊಸ ಎಫ್‌ಐಆರ್ ದಾಖಲಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.