ಸುಶಾಂತ್ ಸಿಂಗ್ ಜೊತೆಗಿನ ಒಪ್ಪಂದ ಪ್ರತಿಗಳನ್ನು ಮುಂಬೈ ಪೊಲೀಸರಿಗೆ ಸಲ್ಲಿಸಿದ ಯಶ್ ರಾಜ್ ಫಿಲ್ಮ್ಸ್
ಯಶ್ ರಾಜ್ ಫಿಲ್ಮ್ಸ್ (ವೈಆರ್ ಎಫ್) ಜೂ.20 ರಂದು, ಮೃತ ಸುಶಾಂತ್ ಸಿಂಗ್ ಜೊತೆಗಿನ ಮುಂದಿನ ಚಿತ್ರಗಳಿಗಾಗಿ ನಡೆದಿದ್ದ ತನ್ನ ಒಪ್ಪಂದದ ಪ್ರತಿಗಳನ್ನು ಮುಂಬೈ ಪೊಲೀಸರಿಗೆ ಸಲ್ಲಿಸಿದೆ.

ಯಶ್ ರಾಜ್ ಫಿಲ್ಮ್ಸ್ (ವೈಆರ್ ಎಫ್) ಜೂ.20 ರಂದು, ಮೃತ ಸುಶಾಂತ್ ಸಿಂಗ್ ಜೊತೆಗಿನ ಮುಂದಿನ ಚಿತ್ರಗಳಿಗಾಗಿ ನಡೆದಿದ್ದ ತನ್ನ ಒಪ್ಪಂದದ ಪ್ರತಿಗಳನ್ನು ಮುಂಬೈ ಪೊಲೀಸರಿಗೆ ಸಲ್ಲಿಸಿದೆ. 34 ವರ್ಷದ ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ಭಾನುವಾರ ಬಾಂದ್ರದಲ್ಲಿರುವ ತಮ್ಮ ಅಪಾರ್ಟ್ಮೆಂಟ್ ನಲ್ಲಿ ನೇಣಿಗೆ ಶರಣಾಗಿದ್ದರು.
ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳದಲ್ಲಿ ಯಾವುದೇ ಪತ್ರ ದೊರೆತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ಬಳಿಕ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು, ಸಿನಿಮಾ ಒಪ್ಪಂದದ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ಯಶ್ ರಾಜ್ ಫಿಲ್ಮ್ಸ್ ಗೆ ಜೂ.18 ರಂದು ಸೂಚನೆ ನೀಡಿದ್ದರು.
ತನಿಖಾಧಿಕಾರಿಗೆ ಸುಶಾಂತ್ ಸಿಂಗ್ ರಜಪೂತ್ ಸಹಿ ಮಾಡಿರುವ ಒಪ್ಪಂದದ ಪತ್ರ ವೈಆರ್ ಎಫ್ ನಿಂದ ಲಭ್ಯವಾಗಿದೆ ಎಂದು ಅಭಿಷೇಕ್ ತ್ರಿಮುಖೆ, ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್, ಝೋನ್-IX ಹೇಳಿದ್ದಾರೆ. ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಸುಶಾಂತ್ ಕುಟುಂಬ ಸದಸ್ಯರು, ಸುಶಾಂತ್ ನ ಆಪ್ತ ಗೆಳತಿ ರೆಹಾ ಚಕ್ರವರ್ತಿ, ಕಾಸ್ಟಿಂಗ್ ಡೈರೆಕ್ಟರ್ ಮುಖೇಶ್ ಛಬ್ರಾ ಸೇರಿದಂತೆ ಈ ವರೆಗೂ 15 ಜನರನ್ನು ವಿಚಾರಣೆಗೊಳಪಡಿಸಿದ್ದಾರೆ. ಅವರು ನೀಡಿರುವ ಮಾಹಿತಿಯ ಆಧಾರದಲ್ಲಿ ವಾಸ್ತವಾಂಶಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಡಿಸಿಪಿ ಹೇಳಿದ್ದಾರೆ.
ಚಕ್ರವರ್ತಿ ನೀಡಿರುವ ಮಾಹಿತಿಯ ಪ್ರಕಾರ, ಯಶ್ ರಾಜ್ ಫಿಲ್ಮ್ಸ್ ಜೊತೆಗೆ ನಟ ಸುಶಾಂತ್ ಒಪ್ಪಂದಗಳನ್ನು ರದ್ದುಪಡಿಸಿ ಆಕೆಗೂ ಯಶ್ ರಾಜ್ ಬ್ಯಾನರ್ ನಡಿಯಲ್ಲಿ ಕೆಲಸ ಮಾಡದಂತೆ ಹೇಳಿದ್ದರು ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


