ಮೇಘನಾಳ ಉದರದಲ್ಲಿ ಎರಡು ಜೀವ: ಚಿರು ಎರಡು ಆತ್ಮವಾಗಿ ಮರುಹುಟ್ಟು- ಕುತೂಹಲಕ್ಕೆ ಕಾರಣವಾಯ್ತು ಜಗ್ಗೇಶ್ ಟ್ವೀಟ್!
ತನ್ನ ಪ್ರೀತಿಯ ಗಂಡ ಚಿರಂಜೀವಿ ಸರ್ಜಾನನ್ನು ಕಳೆದುಕೊಂಡ ನೋವಿನಲ್ಲಿರುವ ಗರ್ಭಿಣಿ ಮೇಘನಾ ರಾಜ್ ಅವರಿಗೆ ಅವಳಿ ಮಕ್ಕಳಾಗಬಹುದು ಎಂದು ನವರಸ ನಾಯಕ ಜಗ್ಗೇಶ್ ಮಾಡಿರುವ ಟ್ವೀಟ್ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ

ಬೆಂಗಳೂರು: ತನ್ನ ಪ್ರೀತಿಯ ಗಂಡ ಚಿರಂಜೀವಿ ಸರ್ಜಾನನ್ನು ಕಳೆದುಕೊಂಡ ನೋವಿನಲ್ಲಿರುವ ಗರ್ಭಿಣಿ ಮೇಘನಾ ರಾಜ್ ಅವರಿಗೆ ಅವಳಿ ಮಕ್ಕಳಾಗಬಹುದು ಎಂದು ನವರಸ ನಾಯಕ ಜಗ್ಗೇಶ್ ಮಾಡಿರುವ ಟ್ವೀಟ್ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಯಾಕೋ ಭೈರವ ಮೇಘನಳ ಉದರದಲ್ಲಿ ಎರಡು ಜೀವ ಬರುತ್ತದೆ ಎಂದು ನುಡಿದು ಬಿಟ್ಟ! ನಿಜವಾದರೆ ಚಿರಂಜೀವಿ ಎರಡು ಆತ್ಮವಾಗಿ ಮರು ಹುಟ್ಟು! ಒಂದು ದು:ಖ, ಎರಡು ಸಂತೋಷ . ಸತ್ಯವಾಗಲಿ ಹರಸಿಬಿಡಿ ಎಂದು ಬರೆದುಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ಮೃತಪಟ್ಟ ಬಳಿಕ ಮೇಘನಾ ಗರ್ಭಿಣಿ ಎಂಬ ವಿಚಾರ ತಿಳಿದುಬಂದಿತ್ತು. ಮೇಘನಾ ಹೊಟ್ಟೆಯಲ್ಲಿ ಅವಳಿ ಮಕ್ಕಳಿಗೆ ಎಂಬ ಮಾತುಗಳು ಕೇಳಿಬಂದಿದ್ದವು. ಮೇಘನಾ ಉದರದಲ್ಲಿ ಚಿರು ಮರು ಜನ್ಮ ಪಡೆದು ಬರುವ ಆಶಯವನ್ನು ವ್ಯಕ್ತಪಡಿಸಿ ಜಗ್ಗೇಶ್ ಮಾಡಿದ್ದ ಟ್ವೀಟ್ ನ್ನು ಕೆಲಸಮಯದ ನಂತರ ಡಿಲೀಟ್ ಮಾಡಲಾಗಿದೆ.
ಮತ್ತೊಂದು ಟ್ವೀಟ್ ಮಾಡಿರುವ ಜಗ್ಗೇಶ್ , ಅರ್ಜುನ್ ಸರ್ಜಾ ಕುಟುಂಬದ ಜೊತೆಗಿನ ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


