777 ಚಾರ್ಲಿಯಲ್ಲಿ 'ಧರ್ಮ'ನಾದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿದ್ದು, ಲಾಕ್'ಡೌನ್ ಪರಿಣಾಮ ಇಷ್ಟು ದಿನ ಸೆಲ್ಫ್ ಕ್ವಾರಂಟೈನ್ ನಲ್ಲಿದ್ದ ರಕ್ಷಿತ್ ತಂಡ ಇದೀಗ ರಕ್ಷಿತ್ ಜನ್ಮದಿನಕ್ಕೆ ವಿಶೇಷ ಉಡುಗೊರೆಯೊಂದನ್ನು ನೀಡುತ್ತಿದೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿದ್ದು, ಲಾಕ್'ಡೌನ್ ಪರಿಣಾಮ ಇಷ್ಟು ದಿನ ಸೆಲ್ಫ್ ಕ್ವಾರಂಟೈನ್ ನಲ್ಲಿದ್ದ ರಕ್ಷಿತ್ ತಂಡ ಇದೀಗ ರಕ್ಷಿತ್ ಜನ್ಮದಿನಕ್ಕೆ ವಿಶೇಷ ಉಡುಗೊರೆಯೊಂದನ್ನು ನೀಡುತ್ತಿದೆ.
ಈಗಾಗಲೇ ಹಲವು ಪೋಸ್ಟರ್ ಗಳನ್ನು ಬಿಡುಗಡೆ ಮಾಡಿರುವ 777 ಚಾರ್ಲಿ ಚಿತ್ರತಂಡ ರಕ್ಷಿತ್ ಅವರ ಹುಟ್ಟಹಬ್ಬ ಹಿನ್ನೆಲೆಯಲ್ಲಿ ಸ್ಪೆಷಲ್ ವಿಡಿಯೋವೊಂದನ್ನು ಬಿಡುಗಡೆ ಮಾಡಲಿದೆ.
ಚಿತ್ರತಂಡ ಸಿನಿಮಾಗೆ ಸಂಬಂಧಿಸಿದ ಲೈಫ್ ಆಫ್ ಡ್ರಾಮಾ ಎನ್ನುವ ವಿಶೇಷ ವಿಡಿಯೋ ಬಿಡುಗಡೆ ಮಾಡಲಿದ್ದು, ಈ ವಿಡಿಯೋ ಹೇಗಿರಲಿದೆ ಎಂಬ ಕುತೂಹಲ ರಕ್ಷಿತ್ ಶೆಟ್ಟಿಯವರಿಗೂ ಮೂಡಿದೆ. ಈ ಬಗ್ಗೆ ಸ್ವತಃ ಚಿತ್ರತಂಡದಿಂದ ಸಿಗಲಿರುವ ಸರ್ಪ್ರೈಸ್ ಕುರಿತು ಸ್ವತಃ ರಕ್ಷಿತ್ ಅವರೇ ಟ್ವೀಟ್ ಮಾಡಿದ್ದಾರೆ.
ರಕ್ಷಿತ್ ಅವರ ಟ್ವೀಟ್ ನೋಡಿದ ಅಭಿಮಾನಿಗಳು ಇದೀಗ ವಿಡಿಯೋ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ರಕ್ಷಿತ್ ಅವರು ಪ್ರಸ್ತುತ ಪುಣ್ಯಕೋಟಿ ಎಂಬ ಚಿತ್ರಕ್ಕೆ ಕತೆ ಬರೆಯುವಲ್ಲಿ ಬ್ಯುಸಿಯಾಗಿದ್ದು, ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಕೂಡಲೇ 777 ಚಾರ್ಲಿ ಚಿತ್ರದ ಚಿತ್ರೀಕರಣವನ್ನು ಆರಂಭಿಸಲಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಶೇ.60ರಷ್ಟು ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ.
ಚಾರ್ಲಿ ಚಿತ್ರದಲ್ಲಿ ರಕ್ಷಿತ್ ಅವರು ಧರ್ಮ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಂಪೂರ್ಣವಾಗಿ ರಫ್ ಆ್ಯಂಡ್ ಟಫ್ ಆಗಿ ರಕ್ಷಿತ್ ಕಾಣಿಸಿಕೊಳ್ಳುತ್ತಿದ್ದಾರೆ. ನೆರೆಮನೆಯವರೊಂದಿಗೆ ಮಾತನಾಡದ ಧರ್ಮ, ಮಕ್ಕಳ ಪಾಲಿಗೆ ಹಿಟ್ಲರ್ ಆಗಿರಲಿದ್ದಾರೆ. ಪಾತ್ರವನ್ನು ರಕ್ಷಿತ್ ಅಲ್ಲದೆ ಮತ್ತೊಬ್ಬ ನಟ ನಿರ್ವಹಿಸಬೇಕಿದ್ದು, ಆದರೆ, ನನೂ ಕೂಡ ಕೆಲ ಮಿತಿಗಳನ್ನು ಹೊಂದಿದ್ದು, ಅದೃಷ್ಟವಶಾತ್ ನಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ರಕ್ಷಿತ್ ಕಾಣಿಸಿಕೊಂಡಿದ್ದರು. ಈ ವೇಳೆ ಅವರ ಬಳಿ ಕಥೆಯನ್ನು ಹೇಳಲಾಗಿತ್ತು. ಇದರಂತೆ ಪಾತ್ರವನ್ನು ರಕ್ಷಿತ್ ಅವರಿಗೆ ಹೋಲಿಕೆ ಮಾಡುವಂತೆ ಸ್ಕ್ರಿಪ್ಟ್ ತಯಾರಿಸಲಾಯಿತು.
ರಕ್ಷಿತ್ ಅವರನ್ನು ನೋಡಿದ ಬಳಿಕ ಪಾತ್ರ ಮತ್ತಷ್ಟು ಗಟ್ಟಿಯಾಗಿತ್ತು. ರಕ್ಷಿತ್ ಅವರು ಪಾತ್ರ ನಿಭಾಯಿಸಿದ್ದು ತಂಡ ಅದೃಷ್ಟ. ರಕ್ಷಿತ್ ಅವರು ಈ ಹಿಂದೆ ಯಾವುದೇ ಪಾತ್ರದಲ್ಲೂ ನಿಭಾಯಿಸಿದ ಪಾತ್ರ ಚಿತ್ರದಲ್ಲಿರಲಿದೆ. ಸಾಕಷ್ಟು ಸಿನಿಮಾಗಳಲ್ಲಿ ನಟರು ಹೆಚ್ಚೆಚ್ಚು ಸಂಭಾಷಣೆಯಲ್ಲಿ ತೊಡಗಿರುವುದು ಕಂಡು ಬರುತ್ತದೆ, ಆದರೆ ಈ ಚಿತ್ರದಲ್ಲಿ ಅಭಿವ್ಯಕ್ತಿಗಳೇ ಹೆಚ್ಚಾಗಿರಲಿದ್ದು, ದೃಶ್ಯವೇ ಹೆಚ್ಚು ಆಕರ್ಷಣೆಯಾಗಿರುತ್ತದೆ. ಧರ್ಮನ ಜೀವನದಲ್ಲಿ ಚಾರ್ಲಿ ಎಷ್ಟು ಪ್ರಮುಖವಾಗಿರುತ್ತದೆ. ಎರಡು ಪಾತ್ರಗಳು ಚಿತ್ರದಲ್ಲಿ ಅತ್ಯುದ್ಭುತವಾಗಿ ಮೂಡಿಬರಲಿದೆ ಎಂದು ನಿರ್ದೇಶಕ ಕಿರಣ್ ರಾಜ್ ಅವರು ಹೇಳಿದ್ದಾರೆ.
ಪುಷ್ಕರ್ ಫಿಲಂಸ್ ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಹಾಗೂ ಜಿಎಸ್ ಗುಪ್ತಾ ಪರಮ್ವಾಹ್ ಬ್ಯಾನರ್ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಬಳಿಕ ಇದು ರಕ್ಷಿತ್ ಅವರ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರವಾಗಿರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


