ಕಾಮಿಡಿ ರೊಮ್ಯಾಂಟಿಕ್ ಸ್ಟೋರಿಗಾಗಿ ಮತ್ತೆ ಒಂದಾದ ನಿರ್ದೇಶಕ ಸತ್ಯ- ವಿಹಾನ್ ಜೋಡಿ
ಕಾಲ್ ಕೆಜಿ ಪ್ರೀತಿ ಚಿತ್ರದ ನಿರ್ದೇಶಕ-ನಟ ಜೋಡಿಯಾಗಿದ್ದ ಸತ್ಯ ಶೌರ್ಯ ಸಾಗರ್ ಮತ್ತು ವಿಹಾನ್ ಮತ್ತೊಂದು ಚಿತ್ರ ಮಾಡುವ ಯೋಜನೆಯಲ್ಲಿದ್ದಾರೆ. ಇದೊಂದು ಕಾಮಿಡಿ ರೊಮ್ಯಾಂಟಿಕ್ ಕಥಾನಕವಾಗಿದ್ದು ನಿರ್ದೇಶಕರ ಮಿತ್ರರಾದ ಕೃಷ್ಣ ಇದಕ್ಕೆ ಬಂಡವಾಳ ಹಾಕಲಿದ್ದಾರೆ.

ಕಾಲ್ ಕೆಜಿ ಪ್ರೀತಿ ಚಿತ್ರದ ನಿರ್ದೇಶಕ-ನಟ ಜೋಡಿಯಾಗಿದ್ದ ಸತ್ಯ ಶೌರ್ಯ ಸಾಗರ್ ಮತ್ತು ವಿಹಾನ್ ಮತ್ತೊಂದು ಚಿತ್ರ ಮಾಡುವ ಯೋಜನೆಯಲ್ಲಿದ್ದಾರೆ. ಇದೊಂದು ಕಾಮಿಡಿ ರೊಮ್ಯಾಂಟಿಕ್ ಕಥಾನಕವಾಗಿದ್ದು ನಿರ್ದೇಶಕರ ಮಿತ್ರರಾದ ಕೃಷ್ಣ ಇದಕ್ಕೆ ಬಂಡವಾಳ ಹಾಕಲಿದ್ದಾರೆ.
ವಿಹಾನ್ ಎರಡು ಯೋಜನೆಗಳ ಮುಗಿಸಿದ ನಂತರ ಇನ್ನೂ ಹೆಸರಿಡದ ಈ ಚಿತ್ರ ಸೆಟ್ಟೇರಲಿದೆ. ಸುಭಾಷ್ ಚಂದ್ರ ನಿರ್ದೇಶನದ ಲೆಗಸಿ ಶೂಟಿಂಗ್ ನ ಅಂತಿಮ ಘಟ್ಟದಲ್ಲಿದ್ದರೆ ಸ್ವರೂಪ್ ನಿರ್ದೇಶನದ ಚೊಚ್ಚಲ ಚಿತ್ರ ಲೆಟ್ಸ್ ಬ್ರೇಕ್ ಅಪ್. ಸಹ ಶೂಟಿಂಗ್ ಹಂತದಲ್ಲಿದ್ದು ವಿಹಾನ್ ಈ ಎರಡೂ ಚಿತ್ರಗಳಲ್ಲಿ ಕಾಣಿಸಿಕೊಳ್ಲುತ್ತಿದ್ದಾರೆ.
ಜಯಣ್ಣ ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರದಲ್ಲಿ ಸ್ಪಂದನಾ ಮಹಿಳಾ ನಾಯಕಿಯಾಗಿ ನಟಿಸಿದ್ದಾರೆಂದು ದೃಢಪಡಿಸಿದ್ದು , “ಇದು ಅದ್ಭುತ ಸ್ಕ್ರಿಪ್ಟ್, ಇದು ಲಾಕ್ ಡೌನ್ ಅವಧಿಯಲ್ಲಿ ಸತ್ಯ ಅವರ ಜತೆ ಕೆಲಸ ಮಾಡಲು ಯೋಜಿಸಲಾಗಿದೆ. ಇದೊಂದು ಕಮರ್ಷಿಯಲ್ ಎಂಟರ್ಟೈನರ್ ಆಗಿದ್ದು ಅಕ್ಟೋಬರ್‌ನಲ್ಲಿ ಫ್ಲೋರ್ ಗೆ ಸಾಗುವ ಸಾಧ್ಯತೆಯಿದೆ. ಸಧ್ಯ ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಸಾಗುತ್ತಿದೆ.
"ನನ್ನ ನಿರ್ದೇಶನದ ಮೊದಲ ಚಿತ್ರವಾದ ಕಾಲ್ ಕೆಜಿ ಪ್ರೀತಿಯಲ್ಲಿ ನಾನು ಮಾಡಿದ ತಪ್ಪುಗಳನ್ನು ವಿಶ್ಲೇಷಿಸಿದ್ದೇನೆ ಮತ್ತು ನನ್ನ ಎರಡನೇ ಚಿತ್ರದಲ್ಲಿ ಆ ತಪ್ಪುಗಳನ್ನು ಸರಿಪಡಿಸಲು ಮುಂದಾಗಿದ್ದೇನೆ. ನಾನು ಕಮರ್ಷಿಯಲ್ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ. "ಸತ್ಯ ಹೇಳುತ್ತಾರೆಪೂರ್ಣ ಸ್ಟೋರಿ ಬೋರ್ಡ್, ಚಿತ್ರಕಥೆ ಮತ್ತು ಸಂಭಾಷಣೆ ತಯಾರಾದ ಬಳಿಕವೇ ತಾಂತ್ರಿಕ ಸಿಬ್ಬಂದಿ ಮತ್ತು ಉಳಿದ ಪಾತ್ರಧಾರಿಗಳನ್ನು ನಿರ್ಧರಿಸುವುದಾಗಿ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


