ಸಿನಿಮಾ ಸುದ್ದಿ

ನನ್ನನ್ನು ಬೆದರಿಸುತ್ತಿದ್ದಾರೆ;  ಸಂಗೀತ ನಿರ್ದೇಶಕ ಇಳಯರಾಜ ಪೊಲೀಸರಿಗೆ ದೂರು

ಭಾರತೀಯ ಚಿತ್ರರಂಗದ ಸುಪ್ರಸಿದ್ದ ಸಂಗೀತ ನಿರ್ದೇಶಕ ಇಳಯರಾಜ ಹಾಗೂ ಪ್ರಸಾದ್ ಸ್ಟುಡಿಯೋ ನಡುವಣ ವಿವಾದ ಮತ್ತೊಮ್ಮೆ ಬಯಲಿಗೆ ಬಂದಿದೆ. ಎಲ್.ವಿ.ಪ್ರಸಾದ್ ಅವರ ಮೊಮ್ಮಗ ಸಾಯಿ ಪ್ರಸಾದ್ ವಿರುದ್ಧ ಇಳಯರಾಜ ಪೊಲೀಸರಿಗೆ ದೂರು ನೀಡಿದ್ದಾರೆ.

ನನ್ನನ್ನು ಬೆದರಿಸುತ್ತಿದ್ದಾರೆ;  ಸಂಗೀತ ನಿರ್ದೇಶಕ ಇಳಯರಾಜ ಪೊಲೀಸರಿಗೆ ದೂರು
ಸಂಗೀತ ನಿರ್ದೇಶಕ ಇಳಯರಾಜ
Published On :

ಚೆನ್ನೈ: ಭಾರತೀಯ  ಚಿತ್ರರಂಗದ   ಸುಪ್ರಸಿದ್ದ ಸಂಗೀತ ನಿರ್ದೇಶಕ ಇಳಯರಾಜ ಹಾಗೂ ಪ್ರಸಾದ್ ಸ್ಟುಡಿಯೋ ನಡುವಣ ವಿವಾದ ಮತ್ತೊಮ್ಮೆ ಬಯಲಿಗೆ  ಬಂದಿದೆ. ಎಲ್.ವಿ.ಪ್ರಸಾದ್ ಅವರ ಮೊಮ್ಮಗ ಸಾಯಿ ಪ್ರಸಾದ್ ವಿರುದ್ಧ  ಇಳಯರಾಜ  ಪೊಲೀಸರಿಗೆ  ದೂರು ನೀಡಿದ್ದಾರೆ.

ಸಾಯಿ  ಪ್ರಸಾದ್  ಹಾಗೂ  ಆತನ ಜನರು   ತಮಗೆ ಬೆದರಿಕೆ ಹಾಕುತ್ತಿದ್ದಾರೆ.  ಈ ಮೂಲಕ  ತಮ್ಮ  ಸ್ಟುಡಿಯೋ ಕೊಠಡಿಯನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಇಳಯರಾಜ ಆರೋಪಿಸಿದ್ದಾರೆ. ಈ  ಸಂಬಂಧ  ಅವರ  ವ್ಯವಸ್ಥಾಪಕ   ಜಾಫರ್   ಪೊಲೀಸರಿಗೆ  ದೂರು ನೀಡಿದ್ದಾರೆ. 

ಪ್ರಸಾದ್ ಸ್ಟುಡಿಯೊದಲ್ಲಿನ  ತಮ್ಮ  ಕೊಠಡಿಗೆ  ಪ್ರವೇಶಿಸಿ  ಹಲವಾರು  ಸಂಗೀತ  ವಾದ್ಯಗಳು, ನೋಟ್ಸ್ ಗಳು ಹಾಗೂ ಇತರ ಉಪಕರಣ ನಾಶಪಡಿಸಿದ್ದಾರೆ ಎಂದು  ಚೆನ್ನೈ ಪೊಲೀಸ್  ಕಮೀಷನರ್ ಗೆ   ನೀಡಿರುವ  ದೂರಿನಲ್ಲಿ  ಆರೋಪಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.