ಕೆಜಿಎಫ್ ಚಾಪ್ಟರ್-2 ತಂಡದಿಂದ 'ಅಧೀರ'ನ ಫಸ್ಟ್ ಲುಕ್ ಬಿಡುಗಡೆ!
ಶೂಟಿಂಗ್ ಆರಂಭಗೊಂಡ ದಿನದಿಂದಲೂ ಕೆಜಿಎಫ್ ಚಾಪ್ಟರ್ 2 ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕುತ್ತಲೇ ಇದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ.

ಶೂಟಿಂಗ್ ಆರಂಭಗೊಂಡ ದಿನದಿಂದಲೂ ಕೆಜಿಎಫ್ ಚಾಪ್ಟರ್ 2 ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕುತ್ತಲೇ ಇದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ.
ಅಲ್ಲಿಯವರೆಗೆ ಚಿತ್ರದ ಬಗ್ಗೆ ಹೊಸ ಹೊಸ ವಿಷಯಗಳನ್ನು ಚಿತ್ರತಂಡ ಚಿತ್ರಪ್ರೇಮಿಗಳಿಗೆ ನೀಡಲಿದೆ. ಕೆಜಿಎಫ್ ಚಾಪ್ಟರ್ 2ನಲ್ಲಿ ರಾಖಿ ಬಾಯ್ ಗೆ ಎದುರಾಗಿ ವಿಲನ್ ಪಾತ್ರದಲ್ಲಿ ಮಿಂಚುತ್ತಿರುವವರು ಬಾಲಿವುಡ್ ನ 'ಖಳನಾಯಕ' ಸಂಜುಬಾಬಾ ಅಲಿಯಾಸ್ ಸಂಜಯ್ ದತ್.
ಇಂದು ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಉಡುಗೊರೆಯಾಗಿ ಚಿತ್ರತಂಡ ಅವರ ಫಸ್ಟ್ ಲುಕ್ ನ್ನು ಬಿಡುಗಡೆ ಮಾಡಿದೆ. ಕ್ರೂರ ಮಾರ್ಗದಿಂದ ಪ್ರೇರಿತರಾದ ಅಧೀರ ಎಂದು ಬರೆದುಕೊಂಡಿದೆ ಹೊಂಬಾಳೆ ಫಿಲ್ಮ್ಸ್.
ಇನ್ನೊಂದೆಡೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಹ ಸಿಹಿಸುದ್ದಿಯನ್ನು ನೀಡಿರುವ ಹೊಂಬಾಳೆ ಫಿಲ್ಮ್ಸ್ ಪುನೀತ್ ಅವರ ಮುಂದಿನ ಚಿತ್ರ ಯುವರತ್ನದ ಹೊಸ ಪೋಸ್ಟರ್ ನ್ನು ನಾಡಿದ್ದು ವರಮಹಾಲಕ್ಷ್ಮಿ ದಿನ ಬಿಡುಗಡೆ ಮಾಡಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


