ಆತ್ಮಹತ್ಯೆಗೆ ಯತ್ನಿಸಿದ ನಟಿ ವಿಜಯಲಕ್ಷ್ಮಿ, ಆಸ್ಪತ್ರೆಗೆ ದಾಖಲು
ನಾಗಮಂಡಲ ಹಾಗೂ ಸೂರ್ಯವಂಶ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅವರು ಭಾನುವಾರ ಬಿಪಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೆನ್ನೈ: ನಾಗಮಂಡಲ ಹಾಗೂ ಸೂರ್ಯವಂಶ ಖ್ಯಾತಿಯ ನಟಿ ವಿಜಯಲಕ್ಷ್ಮಿ ಅವರು ಭಾನುವಾರ ಬಿಪಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದು ನನ್ನ ಕಡೆಯ ವಿಡಿಯೋ ಎಂದು ಹೇಳಿರುವ ನಟಿ, ತಮ್ಮ ಸಾವಿಗೆ ನಟ, ರಾಜಕಾರಣಿ ಸೀಮನ್ ಮತ್ತು ಹರಿಂದರನ್ ಅವರುಗಳೇ ಕಾರಣ. ನಾನು ಈಗಾಗಲೇ ಬಿಪಿ ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ ಎಂದು ಫೇಸ್ ಬುಕ್ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ತಮಿಳು ಹಾಗೂ ಕನ್ನಡದಲ್ಲಿ ಮಾತನಾಡಿರುವ ವಿಜಯಲಕ್ಷ್ಮಿ, ನಾನು ಕರ್ನಾಟಕದಲ್ಲಿ ಹುಟ್ಟಿದ್ದೀನಿ ಎಂಬ ಕಾರಣಕ್ಕೆ ಸೀಮನ್ ಮತ್ತು ಹರಿಂದ್ರನ್ ನನಗೆ ಸಾಕಷ್ಟು ಕಾಟ ಕೊಟ್ಟಿದ್ದಾರೆ. ಮಹಿಳೆಯಾಗಿ ನಾನು ಎಷ್ಟು ತಡೆದುಕೊಳ್ಳಬೇಕು ಅಷ್ಟು ತಡೆದುಕೊಂಡಿದ್ದೇನೆ. ಇನ್ನುಮುಂದೆ ತಡೆದುಕೊಳ್ಳಲಾಗದು ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
ನಾನು ವೇಶ್ಯಾವೃತ್ತಿ ಮಾಡುತ್ತಿದ್ದೇನೆ ಎಂದೆಲ್ಲ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಇವರು ಬದುಕುವುದಕ್ಕೆ ಬಿಡುತ್ತಿಲ್ಲ ಎಂದು ವಿಜಯಲಕ್ಷ್ಮಿ ಆರೋಪ ಮಾಡಿದ್ದಾರೆ.
'ನಾನೀಗ ಒಂದಷ್ಟು ಬಿಪಿ ಮಾತ್ರೆಗಳನ್ನು ನುಂಗಿದ್ದೇನೆ. ಇನ್ನು ಸ್ವಲ್ಪ ಹೊತ್ತಿಗೆ ನನ್ನ ಬಿಪಿ ಕಮ್ಮಿ ಆಗಲಿದೆ. ನನ್ನ ಸಾವಿಗೆ ಕಾರಣರಾದ ಈ ಸೀಮನ್ ಮತ್ತು ಹರಿಂದ್ರನ್ ಅವರನ್ನು ಯಾವುದೇ ಕಾರಣಕ್ಕೂ ಬಿಡಲೇಬೇಡಿ. 'ನಾಮ್ ತಮಿಳರ್ ಕಚ್ಚಿ' ಎಂಬ ಪಕ್ಷವನ್ನು ಸೀಮನ್ ಕಟ್ಟಿದ್ದಾನೆ. ಕನ್ನಡಿಗರಿಗೆ ಆತ ಬಹಳಷ್ಟು ಕಾಟ ಕೊಟ್ಟಿದ್ದಾನೆ. ನಾನು ಹುಟ್ಟಿದ್ದು ಕರ್ನಾಟಕದಲ್ಲಿ. ನನ್ನ ಮಾತೃಭಾಷೆ ತಮಿಳು ಅನ್ನೋದು ಎಲ್ಲರಿಗೂ ಗೊತ್ತಿದೆ. ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಒಂದೇ ಕಾರಣಕ್ಕೆ ನನಗೆ ತುಂಬ ತೊಂದರೆ ನೀಡಿದ್ದಾನೆ' ಎಂದು ವಿಜಯಲಕ್ಷ್ಮಿ ದೂರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


