ಸೆಲ್ಫಿ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಕ್ಕೆ ರಮ್ಯಾ ಕಮ್ ಬ್ಯಾಕ್!
ರಾಜಕೀಯದ ನಡುವೆಯೇ ಕಳೆದೊಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇದೀಗ ವಾಪಸ್ ಆಗಿದ್ದು, ಸೆಲ್ಫಿಗಳ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.

ಬೆಂಗಳೂರು: ರಾಜಕೀಯದ ನಡುವೆಯೇ ಕಳೆದೊಂದು ವರ್ಷದಿಂದ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇದೀಗ ವಾಪಸ್ ಆಗಿದ್ದು, ಸೆಲ್ಫಿಗಳ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.
ಹೌದು.. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾಗಿದ್ದ ರಮ್ಯಾ (ದಿವ್ಯ ಸ್ಪಂಧನ) ಇದೀಗ ಬರೊಬ್ಬರಿ ಒಂದು ವರ್ಷಗಳ ಸುಧೀರ್ಘ ವಿರಾಮದ ಬಳಿಕ ಸಾಮಾಜಿಕ ಜಾಲತಾಣಗಳಿಗೆ ವಾಪಸ್ ಆಗಿದ್ದಾರೆ. ಅಲ್ಲದೆ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಸರಣಿ ಸೆಲ್ಫಿಗಳನ್ನು ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಿಗೆ ರೀ ಎಂಟ್ರಿ ಕೊಟ್ಟಿದ್ದಾರೆ.
'ನನ್ನ ಕೊನೆಯ ಪೊಸ್ಟ್ ಮಾಡಿ ಬಹುತೇಕ ಒಂದು ವರ್ಷವಾಗಿತ್ತು. ಮರಗಳು, ಪಕ್ಷಿಗಳು, ಪುಸ್ತಕಗಳು ಮತ್ತು ನನ್ನ ನಾಯಿಗಳ ಚಿತ್ರಗಳೊಂದಿಗೆ ನಾನು ನಿಧಾನವಾಗಿ ನನ್ನನ್ನು ತೊಡಗಿಸಿಕೊಂಡಿದ್ದೆ. ಆರಂಭದಲ್ಲಿ ಕ್ಯಾಮೆರಾ ಮುಂದೆ ನಿಂತು ಪೋಸ್ ನೀಡುವುದು ನನಗೆ ಏಲಿಯನ್ ಗಳ ಹಾಗೆ ಭಾಸವಾಗುತ್ತಿತ್ತು. ಕೆಲ ಪ್ರಯತ್ನಗಳ ಬಳಿಕ ಇದನ್ನು ಕೈ ಬಿಟ್ಟಿದ್ದೆ. ಬಳಿಕ ನನ್ನ ಸಾಕು ನಾಯಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದೆ. ಇದು ನನಗೆ ವಿಚಿತ್ರ ಅನಿಸುತ್ತಿತ್ತು. ಹೀಗಾಗಿ ನಾನು ನನ್ನದೇ ಸೆಲ್ಫಿಗಳನ್ನು ಪೋಸ್ಟ್ ಮಾಡಲು ಆರಂಭಿಸಿದೆ ಎಂದು ಹೇಳಿದ್ದಾರೆ.
ರಮ್ಯಾ ಅವರ ಕಮ್ ಬ್ಯಾಕ್ ನಿಂದಾಗಿ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಇದರ ನಡುವೆಯೇ ಕೆಲ ಮಂದಿ ರಾಜಕೀಯದಿಂದ ದೂರ ಉಳಿದ ಕುರಿತು ರಮ್ಯಾ ಅವರನ್ನು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಸಿನಿಮಾಗಳಿಗೂ ಕಮ್ಯ್ ಬ್ಯಾಕ್ ಮಾಡುವಿರಾ ಎಂದು ಪ್ರಶ್ನಿಸುತ್ತಿದ್ದಾರೆ. ನಟಿ ರಮ್ಯಾ ಕೊನೆಯ ಬಾರಿಗೆ 2016ರಲ್ಲಿ ನಾಗರಹಾವು ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು.
ಹಳೆಯ ಟ್ರಾಕ್ ಗೆ ಮರಳಿದ ರಮ್ಯಾ-ರಕ್ಷಿತ ಸ್ನೇಹ
ಇನ್ನು ಇತ್ತ ರಮ್ಯಾ ಸಾಮಾಜಿಕ ಜಾಲತಾಣಕ್ಕೆ ಕಮ್ ಬ್ಯಾಕ್ ಮಾಡುತ್ತಲೇ ರಕ್ಷಿತಾರೊಂದಿಗಿನ ಸ್ನೇಹ ಕೂಡ ಟ್ರಾಕ್ ಗೆ ಮರಳಿದಂತಿದೆ. ಉಭಯ ನಟಿಯರೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರರನ್ನು ಫಾಲೋ ಮಾಡಲು ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


