ಸುದೀರ್ಘ ರಜೆಯ ಬಳಿಕ ಮತ್ತೆ ಮೇಕಪ್ ಹಾಕಿಕೊಂಡ ಸುದೀಪ್ ಹೇಳಿದ್ದೇನು?
ಲಾಕ್ ಡೌನ್ ಬಳಿಕ ಕಿಚ್ಚ ಇದೇ ಮೊದಲ ಬಾರಿಗೆ ಶೂಟಿಂಗ್ ಗೆ ಹಾಜರಾಗಿದ್ದಾರೆ. ಹೀಗಾಗಿ ಸುದೀರ್ಘ ರಜೆಯ ಬಳಿಕ ಮೇಕಪ್ ಹಾಕಿಕೊಂಡ ಫೀಲ್ ಆಗುತ್ತಿದೆ ಎಂದು ಸುದೀಪ್ ಹೇಳಿದ್ದಾರೆ.

ಲಾಕ್ ಡೌನ್ ಬಳಿಕ ಕಿಚ್ಚ ಇದೇ ಮೊದಲ ಬಾರಿಗೆ ಶೂಟಿಂಗ್ ಗೆ ಹಾಜರಾಗಿದ್ದಾರೆ. ಹೀಗಾಗಿ ಸುದೀರ್ಘ ರಜೆಯ ಬಳಿಕ ಮೇಕಪ್ ಹಾಕಿಕೊಂಡ ಫೀಲ್ ಆಗುತ್ತಿದೆ ಎಂದು ಸುದೀಪ್ ಹೇಳಿದ್ದಾರೆ.
ಅಭಿನಯ ಚಕ್ರವರ್ತಿ ಸುದೀಪ್ ಫ್ಯಾಂಟಮ್ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ರಂಗಿತರಂಗ ಸಿನಿಮಾ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಕೊರೋನಾಗೂ ಮುಂಚೆಯೇ ಈ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿತ್ತು .
ಆದರೆ ಕೊರೋನಾ ಲಾಕ್ಡೌನ್ ನಂತರ ಸಿನಿಮಾ ಚಿತ್ರೀಕರಣವನ್ನು ಚಿತ್ರತಂಡ ಸ್ಥಗಿತ ಮಾಡಿತ್ತು. ಆನಂತರ ಸರ್ಕಾರ ಬಾಕಿ ಇರುವ ಸಿನಿಮಾ ಶೂಟಿಂಗ್ಗೆ ಅವಕಾಶ ನೀಡಿದ ಬಳಿಕ ಫ್ಯಾಂಟಮ್ ಚಿತ್ರತಂಡ ಹೈದರಾಬಾದಿನ ಅನ್ನಪೂರ್ಣ ಸ್ಟುಡಿಯೋ ಸಿಟಿಯಲ್ಲಿ ಜುಲೈ 16 ರಿಂದ ಶೂಟಿಂಗ್ ಆರಂಭಿಸಿದೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದೀಗ ಕಿಚ್ಚ ಫ್ಯಾಂಟಮ್ ಸಿನಿಮಾದ ಸಣ್ಣ ತುಣುಕನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮತ್ತೆ ಮೇಕಪ್ ಹಚ್ಚಿಕೊಳ್ಳುತ್ತಿರುವುದು ಖುಷಿಯಾಗುತ್ತಿದೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ.
ಅಲ್ಲದೆ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಮಗುವಿನೊಂದಿಗೆ ಕಾಡಿನ ಸೆಟ್ ನಲ್ಲಿ ಕಿಚ್ಚ ಬರುತ್ತಿರುವ ಸೀನ್ ಒಂದನ್ನು ತೋರಿಸಲಾಗಿದೆ. ಜತೆಗೆ ಹಿನ್ನಲೆಯಲ್ಲಿ ‘ಗುಮ್ಮ ಬಂದ ಗುಮ್ಮ ಗುಮ್ಮ’ ಎಂಬ ವಿಶಿಷ್ಟ ಹಿನ್ನಲೆ ಸಂಗೀತ ಬರುತ್ತಿದೆ. ಇದನ್ನು ನೋಡಿ ಕಿಚ್ಚನ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫ್ಯಾಂಟಮ್ ಚಿತ್ರದ ದೃಶ್ಯವನ್ನು ಶೇರ್ ಮಾಡಿದ್ದಾರೆ. ವಿಕ್ರಾಂತ್ ರೋನಾ ಎಂಬ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಹ್ಯಾಶ್ ಟ್ಯಾಗ್ ನಮೂದಿಸಿದ್ದಾರೆ. ಅಭಿಮಾನಿಗಳು ಹೊಸ ಕಿಚ್ಚನ ಅವತಾರ ಕಂಡು ಸಂತಸಗೊಂಡಿದ್ದು, ವಿಡಿಯೋವನ್ನು ಶೇರ್ ಮಾಡಿದ್ದಾರೆ. ಹಾಗಾಗಿ ಟ್ವಿಟ್ಟರ್ನಲ್ಲಿ ಫ್ಯಾಂಟಮ್ ಸಿನಿಮಾ ಹೆಸರು ಟ್ರೆಂಡಿಂಗ್ನಲ್ಲಿ ಕಾಣಿಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


