ಕಿಚ್ಚ ಸುದೀಪ್ 'ಫ್ಯಾಂಟಮ್' ಚಿತ್ರಕ್ಕೆ ವಿಲಿಯಮ್ ಡೇವಿಡ್ ಛಾಯಾಗ್ರಾಹಕ
ಸುದೀಪ್ ನಟನೆಯ ಮುಂಬರುವ ಚಿತ್ರ ಫ್ಯಾಂಟಮ್ ನಲ್ಲಿ ಹಲವು ಪ್ರತಿಭಾವಂತ ನಟರು ಮತ್ತು ತಂತ್ರಜ್ಞರ ಸಂಗಮವಿದೆ. ಬಿ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ನೀಡಿದರೆ ಇದೀಗ ವಿಲಿಯಮ್ ಡೇವಿಡ್ ಕ್ಯಾಮರಾಮ್ಯಾನ್ ಆಗಿ ಚಿತ್ರತಂಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಸುದೀಪ್ ನಟನೆಯ ಮುಂಬರುವ ಚಿತ್ರ ಫ್ಯಾಂಟಮ್ ನಲ್ಲಿ ಹಲವು ಪ್ರತಿಭಾವಂತ ನಟರು ಮತ್ತು ತಂತ್ರಜ್ಞರ ಸಂಗಮವಿದೆ. ಬಿ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ನೀಡಿದರೆ ಇದೀಗ ವಿಲಿಯಮ್ ಡೇವಿಡ್ ಕ್ಯಾಮರಾಮ್ಯಾನ್ ಆಗಿ ಚಿತ್ರತಂಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ವಿಲಿಯಮ್ ಡೇವಿಡ್ ಅನೂಪ್ ಭಂಡಾರಿಯ ಈ ಹಿಂದಿನ ನಿರ್ದೇಶನದ ರಂಗಿತರಂಗ ಮತ್ತು ರಾಜರಥಕ್ಕೆ ಸಹ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡಿದ್ದರು. ಅನೂಪ್ ಭಂಡಾರಿ ಜೊತೆಗೆ ಇದು ಮೂರನೇ ಸಲ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.
ಕೋವಿಡ್-19 ಸೋಂಕಿನ ಮಧ್ಯೆ ಶೂಟಿಂಗ್ ನಡೆಯುತ್ತಿರುವ ಮೊದಲ ಕನ್ನಡ ಚಿತ್ರ ಫ್ಯಾಂಟಮ್ ಆಗಿದೆ. ಶಿವಕುಮಾರ್ ಅವರು ಕಲಾ ವಿಭಾಗದ ಜವಾಬ್ದಾರಿ ಹೊತ್ತುಕೊಂಡಿದ್ದು ತೆಲಂಗಾಣದಲ್ಲಿ ಅನ್ನಪೂರ್ಣ ಸ್ಟುಡಿಯೊದಲ್ಲಿ ಸೆಟ್ ಹಾಕಲಾಗಿದೆ. ಅಲ್ಲಿ ಸುದೀಪ್, ನಿರ್ದೇಶಕರು, ಕೆಲ ತಂತ್ರಜ್ಞರು, ನಿರ್ಮಾಪಕರು ಕೆಲ ದಿನಗಳ ಮಟ್ಟಿಗೆ ಬೀಡುಬಿಟ್ಟಿದ್ದಾರೆ. ಇನ್ನೆರಡು ದಿನಗಳಲ್ಲಿ ಶೂಟಿಂಗ್ ಆರಂಭಿಸಲಿದ್ದಾರೆ.
ಮಂಜುನಾಥ ಗೌಡ ನಿರ್ಮಾಣದ ಫ್ಯಾಂಟಮ್, ಚಿತ್ರೀಕರಣ ಸಮಯದಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಚಿತ್ರತಂಡ ಹೇಳಿದೆ. ಸೆಟ್ ನಲ್ಲಿ ಒಬ್ಬ ವೈದ್ಯರು ಮತ್ತು ಇಬ್ಬರು ನರ್ಸ್ ಗಳು ಇರಲಿದ್ದಾರೆ.ಸಿನಿಮಾ ಸೆಟ್ಟಿಂಗ್ ನಲ್ಲಿ ಸೀಮಿತ ಸಿಬ್ಬಂದಿ ಮಾತ್ರ ಇರುತ್ತಾರೆ.
ಸಾಹಸ ಪ್ರಧಾನ ಫ್ಯಾಂಟಮ್ ಚಿತ್ರದಲ್ಲಿ ಕಿಚ್ಚ ಸುದೀಪ್ ಹೊಸ ಅವತಾರದಲ್ಲಿ ಕಂಗೊಳಿಸಲಿದ್ದಾರೆ. ಚಿತ್ರದ ನಾಯಕಿ ಯಾರು ಎಂದು ತಂಡ ಇನ್ನೂ ಘೋಷಣೆ ಮಾಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


