ಸಿನಿಮಾ ಸುದ್ದಿ

ವೀರಂ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಗೆ ಮಾಸ್ ಲುಕ್!

ಕಮರ್ಷಿಯಲ್​​ ಎಂಟರ್ಟೈನ್ಮೆಂಟ್​​ ಆಗಿರುವ ವೀರಂ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಡೈನಾಮಿಕ್​ ಪ್ರಿನ್ಸ್​​ ಪ್ರಜ್ವಲ್​​ ದೇವರಾಜ್​ ಅವರು ಸಾಹಸ ಸಿಂಹ ಅವರ ಅಭಿಮಾನಿಯಾಗಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿಶಾ ಎಂಟರ್ಟೈನ್ಮೆಂಟ್​​ನಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.

ವೀರಂ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಗೆ ಮಾಸ್ ಲುಕ್!
ವೀರಂ ಸಿನಿಮಾ ಪೋಸ್ಟರ್
Published On :

ಕಮರ್ಷಿಯಲ್​​ ಎಂಟರ್ಟೈನ್ಮೆಂಟ್​​ ಆಗಿರುವ ವೀರಂ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಡೈನಾಮಿಕ್​ ಪ್ರಿನ್ಸ್​​  ಪ್ರಜ್ವಲ್​​ ದೇವರಾಜ್​ ಅವರು ಸಾಹಸ ಸಿಂಹ ಅವರ ಅಭಿಮಾನಿಯಾಗಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿಶಾ ಎಂಟರ್ಟೈನ್ಮೆಂಟ್​​ನಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.

ಪ್ರಜ್ವಲ್​ ದೇವರಾಜ್​  ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು 'ವೀರಂ' ಚಿತ್ರತಂಡ ಅವರಿಗೆ ಭರ್ಜರಿ ಗಿಫ್ಟ್​ ನೀಡಿದೆ. 'ವೀರಂ' ಚಿತ್ರತಂಡ ಪೋಸ್ಟರ್​ವೊಂದನ್ನು ಬಿಡುಗಡೆ ಮಾಡುವ ಮೂಲಕ ಡೈನಾಮಿಕ್​ ಪ್ರಿನ್ಸ್​ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದೆ. ಖದರ್​ ಕುಮಾರ್​ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. 

ಕಳೆದ ವರ್ಷ ವೀರಂ ಸಿನಿಮಾದ ಫಸ್ಟ್​ ಲುಕ್​​ ಹಾಗೂ ಟೈಟಲ್​​ ಲುಕ್​ ಅನ್ನು ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಬಿಡುಗಡೆ ಮಾಡಿದ್ದರು. ವಿಷ್ಣುವರ್ಧನ್​​​ ಜನ್ಮದಿನದಂದು ಈ ಸಿನಿಮಾದ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದರು. 

ವಿಖ್ಯಾತ್ ಪಿಕ್ಚರ್ಸ್‌ನ ನಿರ್ಮಾಣ ತಂಡದೊಂದಿಗೆ ಶುಕ್ರವಾರ ಪೊಲೀಸ್ ಸಿಬ್ಬಂದಿಗೆ ಪಿಪಿಟಿ ಕಿಟ್‌ಗಳನ್ನು ನೀಡಿತು. “ನಾವು ಕಿಟ್‌ಗಳನ್ನು ಹಸ್ತಾಂತರಿಸಲು ಡಿಸಿಪಿ ಕಚೇರಿಗೆ ಭೇಟಿ ನೀಡಿದ್ದೇವು. ಕೋವಿಡ್ ಪರಿಸ್ಥಿತಿಯಲ್ಲಿ ಅವರ ಅತ್ಯುತ್ತಮ ಕೆಲಸಕ್ಕಾಗಿ ಅವರಿಗೆ ಧನ್ಯವಾದ ಹೇಳಲು ನಾವು ಈ ಅವಕಾಶವನ್ನು ಬಳಸಿಕೊಳ್ಳುತ್ತೇವೆ ”ಎಂದು ಪ್ರಜ್ವಲ್ ಹೇಳಿದ್ದಾರೆ.

ಇನ್ಸ್‌ಪೆಕ್ಟರ್ ವಿಕ್ರಮ್ ಚಿತ್ರದ ಒಂದು ಹಾಡಿನ ಚಿತ್ರೀಕರಣ ಬಾಕಿಯಿದ್ದು, ಲಕ್ಕಿ ಶಂಕರ್ ನಿರ್ದೇಶನದ ಅರ್ಜುನ್ ಗೌಡ ಬಿಡುಗಡೆಗಾಗಿ  ಪ್ರಜ್ವಲ್ ಕಾಯುತ್ತಿದ್ದಾರೆ. ಕೋವಿಡ್ ಪರಿಸ್ಥಿತಿ ಸುಧಾರಿಸಲು ಕಾಯುತ್ತಿರುವ ಪ್ರಜ್ವಲ್ ರಾಮನಾರಾಯಣ್ ಅವರ ಮುಂಬರುವ ಸಿನಿಮಾ ಚಿತ್ರೀಕರಣವನ್ನು ಪುನರಾರಂಭಿಸಲಿದ್ದಾರೆ, ನಂತರ ಖಾದರ್ ನಿರ್ದೇಶನದ ವೀರಮ್ ಪಿಸಿ ಶೇಖರ್ ನಿರ್ದೇಶಿಸಲಿರುವ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೋಳ್ಳಲಿದ್ದಾರೆ.
 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.