ಸಿನಿಮಾ ಸುದ್ದಿ

ನಿಖಿಲ್ ಕುಮಾರಸ್ವಾಮಿಗೆ  ಬರ್ತಡೇ ಸಂಭ್ರಮ: ಹೀಗಿದೆ 2020 ರ ಪ್ರಾಜೆಕ್ಟ್!

ಜಾಗ್ವಾರ್ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿಯಾದ ನಿಖಿಲ್ ಕುಮಾರ್ ಗೆ 2019 ನೇ ವರ್ಷದಲ್ಲಿ ತುಂಬಾ ಬ್ಯುಸಿಯಾಗಿದ್ದರು.

ನಿಖಿಲ್ ಕುಮಾರಸ್ವಾಮಿಗೆ  ಬರ್ತಡೇ ಸಂಭ್ರಮ: ಹೀಗಿದೆ 2020 ರ ಪ್ರಾಜೆಕ್ಟ್!
ನಿಖಿಲ್ ಕುಮಾರ್
Published On :

ಜಾಗ್ವಾರ್ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿಯಾದ ನಿಖಿಲ್ ಕುಮಾರ್ ಗೆ 2019 ನೇ ವರ್ಷದಲ್ಲಿ ತುಂಬಾ ಬ್ಯುಸಿಯಾಗಿದ್ದರು.

2019ರಲ್ಲಿ ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಸಿನಿಮಾಗಳು ರಿಲೀಸ್ ಆದವು. 2020ನೇ ವರ್ಷದಲ್ಲಿ ನಿಖಿಲ್ ಹಲವು ಪ್ರಾಜೆಕ್ಟ್ ಗಳಿಗೆ ಸಹಿ ಮಾಡಿದ್ದಾರೆ. 

ಮೂವತ್ತನೇ ವರ್ಷಕ್ಕೆ ಕಾಲಿಡುತ್ತಿರುವ ನಿಖಿಲ್‌ ಕುಮಾರ್‌ಗೆ ಚಿತ್ರರಂಗ ಮತ್ತು ರಾಜಕೀಯ ರಂಗದ ಅನೇಕ ಗಣ್ಯರು, ಅಭಿಮಾನಿಗಳು, ಬೆಂಬಲಿಗರು ಶುಭಾಶಯ ಕೋರುತ್ತಿದ್ದಾರೆ. 

ಇನ್ನು ರಾಜಕೀಯ ರಂಗದ ಜೊತೆ ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ನಿಖಿಲ್‌ ಕುಮಾರ್‌ ಸದ್ಯ ಮೂರು ಬಿಗ್‌ ಬಜೆಟ್‌ನ ದೊಡ್ಡ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

‘ಹೆಬ್ಬುಲಿ’ ಕೃಷ್ಣ ನಿರ್ದೇಶನದ ಚಿತ್ರದ ಜತೆಗೆ ಇನ್ನೂ ಮೂರು ಹೊಸ ಚಿತ್ರಗಳು ಘೋಷಣೆ ಆಗುವ ಸಾಧ್ಯತೆಗಳಿವೆ. ನಿರ್ದೇಶಕರಾದ ಎ ಪಿ ಅರ್ಜುನ್, ತೆಲುಗಿನ ವಿಜಯ್‌ಕುಮಾರ್ ಕೊಂಡ ಹಾಗೂ ಲೈಕಾ ಪ್ರೊಡಕ್ಷನ್ ಸಾರಥ್ಯದ ಚಿತ್ರಗಳು ನಿಖಿಲ್ ಅವರ ಖಾತೆಗೆ ನಾಲ್ಕು ಚಿತ್ರಗಳು ಸೇರಿದಂತೆ ಆಗಿವೆ.

ಇದಾದ ಬಳಿಕ “ಲಹರಿ ಮ್ಯೂಸಿಕ್‌’ ಬ್ಯಾನರ್‌ನಲ್ಲಿ ಚಂದ್ರು ಮನೋಹರನ್‌ ನಿರ್ಮಿಸುತ್ತಿರುವ, ವಿಜಯ್‌ ಕುಮಾರ್‌ ಕೊಂಡ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲೂ ನಿಖಿಲ್‌ ಕುಮಾರ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಈ ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆಯಿದ್ದು, ಶ್ರೀಶ ಎಂ ಕೂದುವಳ್ಳಿ ಛಾಯಾಗ್ರಹಣವಿದ್ದು ಚಿತ್ರ ಶೀಘ್ರದಲ್ಲಿಯೇ ಸೆಟ್ಟೇರುವ ಸಾಧ್ಯತೆಯಿದೆ.

ಅದಾದ ನಂತರ “ಕಿಸ್‌’ ಚಿತ್ರದ ನಂತರ ನಿರ್ದೇಶಕ ಎ.ಪಿ ಅರ್ಜುನ್‌ ಕೂಡ ಮತ್ತೂಂದು ಬಿಗ್‌ ಬಜೆಟ್‌ ಚಿತ್ರದ ನಿರ್ದೇಶನಕ್ಕೆ ಪ್ಲಾನ್‌ ಮಾಡಿಕೊಂಡಿದ್ದು, “ಎನ್‌.ಕೆ ಎಂಟರ್‌ಟೈನ್ಮೆಂಟ್ಸ್‌’ ಬ್ಯಾನರ್‌ನಲ್ಲಿ ಇನ್ನೂ ಹೆಸರಿಡದ ಈ ಚಿತ್ರಕ್ಕೆ ಕೂಡ ನಿಖಿಲ್‌ ಕುಮಾರ್‌ ನಾಯಕನಾಗಿ ಆಯ್ಕೆಯಾಗಿದ್ದಾರೆ.

ಮುನಿರತ್ನ ನಿರ್ಮಾಣದಲ್ಲಿ ಸೆಟ್ಟೇರಿರುವ ‘ಧನುಷ್ ಐಪಿಎಸ್’ ಚಿತ್ರದಲ್ಲಿ ನಿಖಿಲ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದ ಹೆಸರು ಘೋಷಣೆ ಆಗಿದ್ದು, ಇದರ ನಿರ್ದೇಶಕರು ಯಾರು, ಯಾವಾಗ ಚಿತ್ರೀಕರಣ ಆಗಲಿದೆ ಎಂಬುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಆದರೆ, ‘ಕುರುಕ್ಷೇತ್ರ’ ಸಿನಿಮಾ ನಂತರ ಮತ್ತೊಮ್ಮೆ ಮುನಿರತ್ನ ಬ್ಯಾನರ್‌ನಲ್ಲಿ ನಿಖಿಲ್ ಕುಮಾರ್ ಅವರು ನಟಿಸುತ್ತಿರುವುದು ವಿಶೇಷ. ಚಿತ್ರದ ಹೆಸರಿನಲ್ಲೇ ಇರುವಂತೆ ಇಲ್ಲಿ ಪೊಲೀಸ್ ಪಾತ್ರದಲ್ಲಿ ನಿಖಿಲ್, ಕಾಣಿಸಿಕೊಳ್ಳಲಿದ್ದಾರೆಯೇ ಎನ್ನುವ ಕುತೂಹಲ ಹುಟ್ಟು ಹಾಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.